ಆ್ಯಪ್ನಗರ

ಭೀಕರ ರಸ್ತೆ ಅಪಘಾತ: ರೂಪದರ್ಶಿ-ನಟಿ ಸೋನಿಕಾ ಚೌಹಾಣ್ ಸಾವು

ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಟಿ, ರೂಪದರ್ಶಿ ಸೋನಿಕಾ ಚೌಹಾಣ್ ಮೃತಪಟ್ಟಿದ್ದಾರೆ. ತನ್ನ ಗೆಳೆಯ ಹಾಗೂ ನಟ ವಿಕ್ರಮ್ ಚಟರ್ಜಿ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಟೈಮ್ಸ್ ಆಫ್ ಇಂಡಿಯಾ 29 Apr 2017, 3:38 pm
ಕೋಲ್ಕತ್ತಾ: ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಟಿ, ರೂಪದರ್ಶಿ ಸೋನಿಕಾ ಚೌಹಾಣ್ ಮೃತಪಟ್ಟಿದ್ದಾರೆ. ತನ್ನ ಗೆಳೆಯ ಹಾಗೂ ನಟ ವಿಕ್ರಮ್ ಚಟರ್ಜಿ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
Vijaya Karnataka Web model actress sonika chauhan dies in road accident
ಭೀಕರ ರಸ್ತೆ ಅಪಘಾತ: ರೂಪದರ್ಶಿ-ನಟಿ ಸೋನಿಕಾ ಚೌಹಾಣ್ ಸಾವು


ಕೋಲ್ಕತ್ತಾದ ರಶ್ಬೆಹಾಹಿ ಅವೆನ್ಯೂ ಬಳಿ ಈ ಘಟನೆ ನಡೆದಿದೆ. ಅಪಘಾತದ ಸದ್ದು ಕೇಳಿ ಆಗಮಿಸಿದ ಸ್ಥಳೀಯರು ಇಬ್ಬರನ್ನೂ ಕಾರಿನಿಂದ ಹೊರ ತೆಗೆದು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಸೋನಿಕಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಕ್ರಮ್ ಅವರ ತಲೆಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ.

ಈ ಘಟನೆ ಶನಿವಾರ ಮುಂಜಾನೆ 5 ಗಂಟೆಗೆ ಸಂಭವಿಸಿದ್ದು ಇವರು ಪ್ರಯಾಣಿಸುತ್ತಿದ್ದ ಟೊಯೋಟಾ ಕೊರಾಲ್ಲ ಅಪಘಾತದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಟಾಪ್ ಸಿಟಿ ಮಾಡೆಲ್ ಆಗಿದ್ದ ಸೋನಿಕಾ ಈಗಷ್ಟೇ ವೃತ್ತಿಜೀವನದಲ್ಲಿ ನೆಲೆಕಂಡುಕೊಳ್ಳುತ್ತಿದ್ದರು. ಕ್ರೀಡಾ ನಿರೂಪಕಿಯಾಗಿಯೂ ಅವರು ಗುರುತಿಸಿಕೊಂಡಿದ್ದರು. ಕೋಲ್ಕತ್ತಾ ಅಷ್ಟೇ ಅಲ್ಲದೆ ಮುಂಬೈನ ಹಲವಾರು ಜಾಹೀರಾತುಗಳಲ್ಲಿ ತೊಡಗಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ