ಆ್ಯಪ್ನಗರ

ಮೋದಿ 2.0 ಪ್ಲ್ಯಾನ್‌ ಶುರು

ರಾಜೀನಾಮೆ ಸ್ವೀಕಾರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಔಪಚಾರಿಕವಾಗಿ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೊಸ ಸರಕಾರ ರಚನೆಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದರು.

Vijaya Karnataka Web 25 May 2019, 5:00 am
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಸೆಕೆಂಡ್‌ ಇನ್ನಿಂಗ್ಸ್‌ಗೆ ಅಣಿಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎಯ ಸಂಸದರು ಶನಿವಾರ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನಾಗಿ ಔಪಚಾರಿಕವಾಗಿ ಆರಿಸುವ ಮೂಲಕ ಹೊಸ ಸರಕಾರ ರಚನೆಯ ಪ್ರಕ್ರಿಯೆ ಆರಂಭಗೊಳ್ಳಲಿದೆ.
Vijaya Karnataka Web modi 2 0 plan ready
ಮೋದಿ 2.0 ಪ್ಲ್ಯಾನ್‌ ಶುರು


ರಾಜೀನಾಮೆ ಸ್ವೀಕಾರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಔಪಚಾರಿಕವಾಗಿ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೊಸ ಸರಕಾರ ರಚನೆಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದರು.



ಮುಂದೆ ಏನೇನು?
* ಮೇ 25ರಂದು ಸಂಜೆ 5 ಗಂಟೆಗೆ ಸಂಸತ್‌ ಭವನದಲ್ಲಿ ಎನ್‌ಡಿಎ ಸಂಸದರ ಸಭೆ, ನಾಯಕನಾಗಿ ಮೋದಿ ಆಯ್ಕೆ
* ಮೋದಿ ನೇತೃತ್ವದಲ್ಲಿ ಹೊಸ ಸರಕಾರ ರಚನೆಗೆ ಎನ್‌ಡಿಎ ತಮ್ಮ ಹಕ್ಕು ಮಂಡಿಸಲಿದೆ.
* ಸದ್ಯವೇ ಚುನಾವಣಾ ಆಯೋಗ ಎಲ್ಲ ನೂತನ ಸಂಸದರ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಒಪ್ಪಿಸಲಿದೆ.
* 17ನೇ ಲೋಕಸಭೆ ಅವಧಿ ಜೂನ್‌ 3ಕ್ಕೆ ಪೂರ್ಣವಾಗಲಿದ್ದು, ಅದಕ್ಕಿಂತ ಮೊದಲು ರಾಷ್ಟ್ರಪತಿಗಳು 16ನೇ ಲೋಕಸಭೆಯನ್ನು ವಿಸರ್ಜಿಸಿ ಹೊಸ ಸರಕಾರ ರಚನೆಗೆ ವೇದಿಕೆ ಅಣಿ ಮಾಡಲಿದ್ದಾರೆ.
* ಮೇ 30ರಂದು ಹೊಸ ಸಂಸತ್‌ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಗುರುವಿಗೆ ನಮೋ
ಲೋಕಸಭಾ ಚುನಾವಣೆಯ ಭರ್ಜರಿ ಜಯದ ಮರುದಿನವಾದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹಿರಿಯರಾದ ಎಲ್‌.ಕೆ. ಆಡ್ವಾಣಿ ಮತ್ತು ಮುರಳೀ ಮನೋಹರ ಜೋಷಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಆಡ್ವಾಣಿ ಅವರ ಪಾದ ಮುಟ್ಟಿ ನಮಸ್ಕರಿಸಿದ ಮೋದಿ, ಜೋಶಿ ಅವರನ್ನು ಬಿಗಿದಪ್ಪಿಕೊಂಡು ಸಿಹಿ ನೀಡಿದರು. ಇಬ್ಬರೂ ಹಿರಿಯರು ಮೋದಿ ಅವರನ್ನು ತುಂಬು ಮನದಿಂದ ಆಶೀರ್ವದಿಸಿದರು. ಮೇ 28ರಂದು ಮೋದಿ ವಾರಾಣಸಿ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ