ಆ್ಯಪ್ನಗರ

4 ವರ್ಷದಲ್ಲಿ 10 ಕೋಟಿ ಎಲ್‌ಪಿಜಿ ಸಂಪರ್ಕ

ಬಡವರ್ಗದ ಕುಟುಂಬಗಳಿಗೆ ಎಲ್‌ಪಿಜಿ ಸೌಲಭ್ಯ ವಿಸ್ತರಿಸುವ ಉದ್ದೇಶದ 'ಉಜ್ವಲ ಯೋಜನೆ'ಯು ಒಂದು ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿದ್ದು, ಇದರ 4 ಕೋಟಿ ಫಲಾನುಭವಿಗಳಲ್ಲಿ ಶೇ. 45ರಷ್ಟು ಮಂದಿ ದಲಿತರು ಮತ್ತು ಬುಡಕಟ್ಟು ಸಮುದಾಯದವರೇ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Vijaya Karnataka 29 May 2018, 9:58 am
ಹೊಸದಿಲ್ಲಿ: ಬಡವರ್ಗದ ಕುಟುಂಬಗಳಿಗೆ ಎಲ್‌ಪಿಜಿ ಸೌಲಭ್ಯ ವಿಸ್ತರಿಸುವ ಉದ್ದೇಶದ 'ಉಜ್ವಲ ಯೋಜನೆ'ಯು ಒಂದು ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿದ್ದು, ಇದರ 4 ಕೋಟಿ ಫಲಾನುಭವಿಗಳಲ್ಲಿ ಶೇ. 45ರಷ್ಟು ಮಂದಿ ದಲಿತರು ಮತ್ತು ಬುಡಕಟ್ಟು ಸಮುದಾಯದವರೇ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


'ಉಜ್ವಲ ಯೋಜನೆ' ಫಲಾನುಭವಿಗಳೊಂದಿಗೆ ಸೋಮವಾರ ಆನ್‌ಲೈನ್‌ ಸಂವಾದದಲ್ಲಿ ಪಾಲ್ಗೊಂಡ ಮೋದಿ ಅವರು, ತಮಿಳುನಾಡಿನ ಗೃಹಿಣಿಯೊಬ್ಬರ ಜತೆ ಮಾತನಾಡುವಾಗ ''ನಿಮ್ಮ ಮನೆಗೆ ಬಂದಾಗ ದೋಸೆ ಮಾಡಿ ಕೊಡುವಿರಾ?'' ಎಂದು ಕೇಳಿದರು.

''ಗ್ಯಾಸ್‌ ಸಿಲಿಂಡರ್‌ ಬರುವುದಕ್ಕೆ ಮೊದಲು ಮನೆಯಲ್ಲಿ ಇಡ್ಲಿ, ದೋಸೆ ಮಾಡುತ್ತಿದ್ದಿರಾ?,'' ಎಂದು ಮೋದಿ ಕೇಳಿದರು. ಇದಕ್ಕೆ ಉತ್ತರಿಸಿದ ತಮಿಳುನಾಡು ಮೂಲದ ಮಹಿಳೆ, ''ಅದು ಮೊದಲು ಅಷ್ಟು ಸುಲಭವಾಗಿರಲಿಲ್ಲ. ಆದರೆ ಈಗ ಯಾವ ಅಡುಗೆಯನ್ನು ಬೇಕಾದರೂ ಸುಲಭವಾಗಿ ತಯಾರಿಸಬಲ್ಲೆ,'' ಎಂದರು.

ಈ ವೇಳೆ ಲಘು ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ, ಮನೆಗೆ ಬಂದಾಗ ದೋಸೆ ಮಾಡಿಕೊಡಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ