ಆ್ಯಪ್ನಗರ

ಮೋದಿ ಬಿಟ್ಟು ಚುನಾವಣೆ ಪ್ರಚಾರಕ್ಕಿಳಿದ ಬಿಜೆಪಿ!

ನಾಗ್‌ಪುರ್ ಚುನಾವಣೆಯಲ್ಲಿ ಮೋದಿಯವರ ಚಿತ್ರವೇಕೆ ಕಾಣುತ್ತಿಲ್ಲ ಎನ್ನುವ ಕುತೂಹಲ ಮೂಡಿದೆ.

ಟೈಮ್ಸ್ ಆಫ್ ಇಂಡಿಯಾ 22 Dec 2016, 6:26 pm
ನಾಗ್‌ಪುರ್‌: ನಾಗ್‌ಪುರ್‌ದಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿರುವ ಫಲಕಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಕೇಂದ್ರ ಗೃಹ ಸಚಿವ ನಿತಿನ್ ಗಡ್ಕರಿಯ ದೊಡ್ಡ ಭಾವಚಿತ್ರವಿದ್ದು, ಮೋದಿಯವರ ಭಾವಚಿತ್ರ ಕಾಣದಿರುವುದು ಎಲ್ಲರಲ್ಲಿ ಸೋಜಿಗವನ್ನು ಉಂಟು ಮಾಡಿದರೆ
Vijaya Karnataka Web modi goes missing from bjp posters in rsss headquarter nagpur
ಮೋದಿ ಬಿಟ್ಟು ಚುನಾವಣೆ ಪ್ರಚಾರಕ್ಕಿಳಿದ ಬಿಜೆಪಿ!


ಹೊಸ ವರ್ಷದ ದಿನದಂದು ನಡೆಯುವ ಪುರಸಭೆ ಚುನಾವಣೆಗೆ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದೆ. ಅಲ್ಲೀಗ ಆಡಳಿತ ಪಕ್ಷದಲ್ಲಿರುವ ಬಿಜೆಪಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಚುನಾವಣೆಯಲ್ಲಿ 100 ಸೀಟು ಗಳಿಕೆಯ ಗುರಿ ಹೊಂದಿದೆ. ಅದಕ್ಕಾಗಿ ಸಾಕಷ್ಟು ಪ್ರಚಾರ ಫಲಕಗಳನ್ನು ಹಾಕಿದ್ದಾರೆ, ಆದರೆ ಎಲ್ಲಿಯೂ ಮೋದಿಯವರ ಫೋಟೊ ಕಂಡು ಬರುತ್ತಿಲ್ಲ.

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಚಾರದಲ್ಲಿ ಮೋದಿಯವರ ದೊಡ್ಡ ಗಾತ್ರದ ಭಾವಚಿತ್ರಗಳಿರುತ್ತಿದ್ದವು, ಆದರೆ ಈ ಚುನಾವಣೆಯಲ್ಲಿ ಅವರ ಚಿತ್ರವೇಕೆ ಕಾಣುತ್ತಿಲ್ಲ ಎನ್ನುವ ಕುತೂಹಲ ಮೂಡಿದೆ.

ಇದು ಸ್ಥಳೀಯ ಚುನಾವಣೆಯಾಗಿರುವುದರಿಂದ ಸ್ಥಳೀಯ ನಾಯಕರ ಚಿತ್ರಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಹೇಳಿದರೂ ಇದರ ಹಿಂದೆ ಬೇರೆ ಏನೋ ಉದ್ದೇಶವಿದೆ ಎನ್ನುವ ಸಂಶಯ ಈಗಾಗಲೇ ಕೆಲವರಲ್ಲಿ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ