ಆ್ಯಪ್ನಗರ

ಗೋಪಿನಾಥ್ ಮುಂಡೆ, ದವೆ ಆಯ್ತು, ಮತ್ತೀಗ ಅನಂತ: 3ನೇ ಸಹೋದ್ಯೋಗಿಯನ್ನು ಕಳೆದುಕೊಂಡ ಮೋದಿ

2014ಲ್ಲಿ ಮೋದಿ ಸರಕಾರ ಅಧಿಕಾರಕ್ಕೇರಿದ ಬೆನ್ನಲ್ಲೇ ಪ್ರಭಾವಿ ಧುರೀಣರಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗೋಪಿನಾಥ್ ಮುಂಡೆ ಅಪಘಾತದ ಆಘಾತಕ್ಕೆ ಹೃದಯಾಘಾತವಾಗಿ ಸಾವನ್ನಪ್ಪಿದ್ದರು

Navbharat Times 12 Nov 2018, 3:35 pm
ಹೊಸದಿಲ್ಲಿ: ಕೇಂದೀಯ ಮಂತ್ರಿ ಅನಂತ್ ಕುಮಾರ್ ಅವರ ಅಕಾಲಿಕ ನಿಧನ ಬಿಜೆಪಿ ಪಾಲಿಗೆ ಬಹುದೊಡ್ಡ ಆಘಾತವನ್ನು ತಂದಿಟ್ಟಿದೆ. 2014ರಲ್ಲಿ ಗೋಪಿನಾಥ್ ಮುಂಡೆ, 2017ರಲ್ಲಿ ಅನಿಲ್ ಕುಮಾರ್ ದವೆ, ಮತ್ತೀಗ ಅನಂತ ಕುಮಾರ್ ರೂಪದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಮೂರನೇ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದಾರೆ.
Vijaya Karnataka Web ಮುಂಡೆ, ದವೆ, ಅನಂತ


ಅಪಘಾತದಲ್ಲಿ ಸಾವನ್ನಪ್ಪಿದ್ದ ಗೋಪಿನಾಥ್ ಮುಂಡೆ

2014ಲ್ಲಿ ಮೋದಿ ಸರಕಾರ ಅಧಿಕಾರಕ್ಕೇರಿದ ಬೆನ್ನಲ್ಲೇ ಪ್ರಭಾವಿ ಧುರೀಣರಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗೋಪಿನಾಥ್ ಮುಂಡೆ ಅಪಘಾತದ ಆಘಾತಕ್ಕೆ ಹೃದಯಾಘಾತವಾಗಿ ಸಾವನ್ನಪ್ಪಿದ್ದರು ( 3 ಜೂನ್ 2014). ಸಾವಿನ ಮೂಲಕ ಮುಂಡೆ ಭಾರತದ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಕ್ಯಾಬಿನೇಟ್ ಸಚಿವರೆನ್ನಿಸಿಕೊಳ್ಳುವಂತಾಯಿತು.

ಹೃದಯಾಘಾತಕ್ಕೊಳಗಾದ ಅನಿಲ್ ಮಾಧವ್

ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿದ್ದ ಅನಿಲ್ ಮಾಧವ್ ದವೆ ಕಳೆದ ವರ್ಷ ಮೇ 18ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪರಿಸರಕ್ಕಾಗಿ ಹೋರಾಡುವ ಯೋಧನೆನಿಸಿಕೊಂಡಿದ್ದ ಅವರು ತಮ್ಮ ಸಂಪೂರ್ಣ ಜೀವನವನ್ನು ನರ್ಮದಾ ನದಿ ಸೇವೆ ಮತ್ತು ಪರಿಸರ ಸಂರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ಕ್ಯಾನ್ಸರ್‌ಗೆ ಜೀವತೆತ್ತ ಅನಂತ ಕುಮಾರ್

ಇಂದು ನಮ್ಮನ್ನಗಲಿದ ಅನಂತ ಕುಮಾರ್ ಅಕಾಲಿಕ ಮರಣವನ್ನಪ್ಪಿದ ಮೋದಿ ಸಂಪುಟದ ಮೂರನೇ ಸಚಿವರಾಗಿದ್ದಾರೆ.

ಅಂದರೆ ಕೇವಲ ನಾಲ್ಕುವರೆ ವರ್ಷಗಳಲ್ಲಿ ಬಿಜೆಪಿ ಮೂವರು ಪ್ರಮುಖ, ಪ್ರಭಾವಿ ನಾಯಕರನ್ನು ಕಳೆದುಕೊಂಡಂತಾಗಿದೆ.

ವಾಜಪೇಯಿ ಸರಕಾರದಲ್ಲಿ ಕೂಡ ಅವರು ಸಚಿವರಾಗಿದ್ದು ಅತಿ ಚಿಕ್ಕ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆ ಹೊಂದಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿಸುವುದರ ಹಿಂದೆ ಅವರ ಕೊಡುಗೆ ಗಮನಾರ್ಹವಾಗಿದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ