ಆ್ಯಪ್ನಗರ

ಅಮೆರಿಕದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪ ಮಾಡಲ್ಲ!: ಮೋದಿ ಸರ್ಕಾರದ ಹೊಸ ತಂತ್ರ

ಜಮ್ಮು-ಕಾಶ್ಮೀರಕ್ಕೆ ಭಾರತ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಹರಸಾಹಸ ನಡೆಸುತ್ತಿದೆ. ಆದರೆ, ಅಮೆರಿಕ ಪ್ರವಾಸಕ್ಕೆ ತೆರಳಿರುವ ಮೋದಿ, ಕಾಶ್ಮೀರ ವಿಚಾರದ ಬಗ್ಗೆ ವಿಶ್ವಸಂಸ್ಥೆಯಲ್ಲಾಗಲಿ, ಅಮೆರಿಕದ ಸಾರ್ವಜನಿಕ ಸಮಾರಂಭಗಳಲಿ ಚಕಾರವನ್ನೇ ಎತ್ತದಿರಲು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

Vijaya Karnataka 20 Sep 2019, 9:10 pm
ಹ್ಯೂಸ್ಟನ್‌ (ಅಮೆರಿಕ): ಅಮೆರಿಕ ಪ್ರವಾಸದ ವೇಳೆ ಬಹುಚರ್ಚಿತ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡದಿರಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಏಳು ದಿನಗಳ ಅಮೆರಿಕ ಪ್ರವಾಸ ಶನಿವಾರದಿಂದ ಆರಂಭವಾಗಲಿದ್ದು, ಶುಕ್ರವಾರವೇ ಹೊಸದಿಲ್ಲಿಯಿಂದ ಹೊರಟಿದ್ದಾರೆ. ಸೆಪ್ಟೆಂಬರ್ 22 ಭಾನುವಾರ ಹ್ಯೂಸ್ಟನ್‌ನಲ್ಲಿ ನಡೆಯುವ 'ಹೌಡಿ ಮೋದಿ' ಕಾರ್ಯಕ್ರಮ ಮತ್ತು ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾಡಲಿರುವ ಭಾಷಣ, ಪ್ರಧಾನಿ ಮೋದಿ ಪ್ರವಾಸದ ಹೈಲೈಟ್‌. ಈ ವೇಳೆ ಅವರು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web modi with specs


ಅಮೆರಿಕದಲ್ಲಿ ಮೋದಿ-ಟ್ರಂಪ್ ಕುಚ್ಚಿಕು!: 'ಹೌಡಿ ಮೋದಿ'ಗೆ ಹೌಹಾರಿದ ಇಮ್ರಾನ್

370ನೇ ವಿಧಿ ರದ್ದು ವಿಚಾರ ಹಾಗೂ ಕಾಶ್ಮೀರ ಸಮಸ್ಯೆಯನ್ನು ವಿಶ್ವ ವೇದಿಕೆಯಲ್ಲಿ ಪ್ರಸ್ತಾಪ ಮಾಡದಿರುವ ಮೂಲಕ ಅದನ್ನು ಭಾರತದ ಆಂತರಿಕ ವಿಚಾರ ಎಂದು ಬಿಂಬಿಸುವುದು ಇದರ ಉದ್ದೇಶ. ಬದಲಿಗೆ ಮೋದಿ ಅವರು, ಭಾರತದ ಸಾಧನೆಗಳು ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಶಕ್ತಿಯಾಗಿ ಭಾರತದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ.

‘ಹೌದಾ, ಮೋದಿ!’: ಅಮೆರಿಕ ತುಂಬೆಲ್ಲಾ ಈಗ ಭಾರತದ ಬಿಗ್‌ ಬಾಸ್ ಹವಾ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಮೋದಿ ಅಮೆರಿಕ ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಭಾರತವು ವಿಶ್ವಸಂಸ್ಥೆಯ ಜವಾಬ್ದಾರಿಯುತ ಸದಸ್ಯ ರಾಷ್ಟ್ರವಾಗಿದೆ. ಹೀಗಾಗಿ ಮೋದಿ ಅವರ ಭಾಷಣವು ಜಾಗತಿಕವಾಗಿ ಮುಖ್ಯವೆನಿಸಿದ ಆರ್ಥಿಕ ವ್ಯವಸ್ಥೆ, ಜಾಗತಿಕ ತಾಪಮಾನ ನಿಯಂತ್ರಣ, ಶಾಂತಿ-ಭದ್ರತೆ ಮುಂತಾದ ವಿಷಯಗಳತ್ತ ಗಮನ ಸೆಳೆಯಲಿದೆ' ಎಂದು ಗೋಖಲೆ ಹೇಳಿದ್ದಾರೆ.

'ಹೌಡಿ ಮೋದಿ' ಗುಂಗಲ್ಲಿರೋ ಅಮೆರಿಕ 'ನಮೋ'ಗೆ ವ್ಯಕ್ತಿತ್ವ ವಿಕಸನ ತರಬೇತಿ ಕೊಟ್ಟಿತ್ತಾ?

ಏಳು ದಿನಗಳ ಪ್ರವಾಸದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ 20 ದೇಶಗಳ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮೋದಿ ಕಾರ್ಯಕ್ರಮಗಳ ಪೈಕಿ ಸೆಪ್ಟೆಂಬರ್ 22ರಂದು ಹ್ಯೂಸ್ಟನ್‌ನಲ್ಲಿ ನಡೆಯಲಿರುವ 'ಹೌಡಿ ಮೋದಿ' ಸಮಾವೇಶ, ಸೆಪ್ಟೆಂಬರ್ 24ರಂದು ಭಾರತದ ರಾಯಭಾರ ಕಚೇರಿಯಿಂದ ನಡೆಯಲಿರುವ ಗಾಂಧಿ 150ನೇ ಜನ್ಮದಿನದ ಸಂಭ್ರಮ ಹಾಗೂ ಸೆಪ್ಟೆಂಬರ್ 27ರಂದು ನಡೆಯಲಿರುವ ವಿಶ್ವಸಂಸ್ಥೆ ಮಹಾಧಿವೇಶನದ ಭಾಷಣ ಪ್ರಮುಖವಾಗಿವೆ.

ನಾನೇನೂ ‘ಮಾತಿನ ಮಲ್ಲ’ನಲ್ಲ: ಹಾಗೆ ಹೇಳೋಕೆ ಮೋದಿ ಯಾರು ಎಂದ ಠಾಕ್ರೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ