ಆ್ಯಪ್ನಗರ

ಮನಕಲುಕುವ ವಿಡಿಯೋ ಕಂಡು ತುಂಬಿ ಬಂತು ಮೋದಿ ಹೃದಯ! ಬಳಿಕ ಹಿಂಗಂದ್ರೂ!

20 ದಿನಗಳ ಸತತ ಡ್ಯೂಟಿ ಬಳಿಕ ಮನೆಗೆ ಬಂದ ಕೊರೊನಾ ವಾರಿಯರ್‌ಗೆ ಕುಟುಂಬಸ್ಥರು ಹಾಗೂ ನೆರೆಹೊರೆಯರು ಅಭೂತಪೂರ್ವ ಸ್ವಾಗತ ಕೋರಿದರು. ಈ ಮನಕಲುಕುವ ವಿಡಿಯೋ ಬಗ್ಗೆ ಪ್ರಧಾನಿ ಹಿಂಗಂದ್ರೂ.

TIMESOFINDIA.COM 1 May 2020, 4:34 pm
ಚಂಡೀಗಢ: ಸುತ್ತಲೂ ನಿಂತ ಜನರಿಂದ ಪುಷ್ಪವೃಷ್ಠಿ. ನೋಡು ನೋಡುತ್ತಿದ್ದಂತೆ ಜನರ ಪ್ರೀತಿ ವಾತ್ಸಲ್ಯಕ್ಕೆ ಕಣ್ಣಿರಿಟ್ಟ ಮಹಿಳೆ. ಇದು ಕೊರೊನಾ ವಾರಿಯರ್‌ಗೆ ಚಂಡೀಗಢದಲ್ಲಿ ಜನರು ಸಲ್ಲಿಸಿದ ಗೌರವಾರ್ಪಣೆಯ ಮನಕಲುಕುವ ವಿಡಿಯೋ. ದೇಶದೆಲ್ಲೆಡೆ ವೈದ್ಯರುಗಳು ಹಗಲು ರಾತ್ರಿಯೆನ್ನದೆ ಕೊರೊನಾ ಪೀಡಿತ ರೋಗಿಗಳ ಸೇವೆಯಲ್ಲಿದ್ದಾರೆ.
Vijaya Karnataka Web indias-fight-against-covid-19-is-people-driven-pm-modi


ಚಂಡೀಗಢದ ಈ ವೈದ್ಯೆ ಕೂಡ ಕೊರೊನಾ ವಿರುದ್ಧ ಸತತ 20 ದಿನಗಳಿಂದ ಮನೆಗೂ ಬರದೆ ಕಾರ್ಯನಿರ್ವಹಿಸುತ್ತಿದ್ದರು. ಮೊನ್ನೆ ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಗೇಟ್‌ ಬಳಿ ನಿಂತಿದ್ದ ಅವರ ಕುಟುಂಬಸ್ಥರು ಹಾಗೂ ನೆರೆಹೊರೆಯರು ವೈದ್ಯೆಗೆ ಅಭೂತಪೂರ್ವ ಸ್ವಾಗತ ಕೋರಿದರು. ಮಹಿಳೆ ಮೇಲೆ ಪುಷ್ಪವೃಷ್ಠಿ ಸುರಿಸಿದರು. ಇನ್ನು ಕೆಲವರು ಜಾಗಟೆ ಹೊಡೆದು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯೆಯನ್ನ ಸ್ವಾಗತಿಸಿದರು. ಇದನ್ನು ಕಂಡ ಮಹಿಳೆಯ ಕಣ್ಣಲ್ಲಿ ಕಣ್ಣೀರು ಜಿನುಗಿತು.
ಆನಂದಬಾಷ್ಪ ತುಂಬಿತುಳುಕಿತು.

ಪ್ರಧಾನಿ ಮೋದಿ ಶ್ಲಾಘನೆ..!

ಚಂಡೀಗಢದ ವೈದ್ಯೆಯ ಈ ವಿಡಿಯೋವನ್ನ ಅಲ್ಲಿನ ಬಿಜೆಪಿ ಕಾರ್ಯದರ್ಶಿ ದೀಪಕ್‌ ಮಲ್ಹೋತ್ರಾ ಟ್ವೀಟ್‌ ಮಾಡಿದ್ದು, ಈ ವಿಡಿಯೋವನ್ನ ಪ್ರಧಾನಿ ಮೋದಿ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಶೇರ್‌ ಮಾಡಿದ್ದಾರೆ. ಇಂತಹ ಕ್ಷಣಗಳನ್ನ ಕಂಡಾಗ ಹೃದಯ ಸಂತೋಷದಿಂದ ತುಂಬಿ ಬರುತ್ತೆ ಎಂದು ಇಂತಹ ಕೆಲಸ ಮಾಡುವವರನ್ನ ಶ್ಲಾಘಿಸಿದ್ದಾರೆ. ಇದು ಭಾರತದ ಸ್ಪೂರ್ತಿ. ನಾವೆಲ್ಲ ಕೊರೊನಾ ವಿರುದ್ಧ ಧೈರ್ಯದಿಂದ ಹೋರಾಡುತ್ತೇವೆ. ಕೊವೀಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವವರ ಬಗ್ಗೆ ನಾವು ಯಾವಾಗಲೂ ಹೆಮ್ಮೆ ಪಡುತ್ತೇವೆ ಎಂದು ಬರೆದುಕೊಂಡಿದ್ದಾರೆ.


ಕೊರೊನಾ ಚಿಕಿತ್ಸೆಗೆ ಮೀಸಲಾಗಿಟ್ಟ ಆಸ್ಪತ್ರೆಯ ತೀವ್ರ ನಿಗಾ ಘಟಕದ ವಿಭಾಗದಲ್ಲಿ ಈ ಮಹಿಳಾ ವೈದ್ಯೆ ಕಾರ್ಯನಿರ್ವಹಿಸುತ್ತಿದ್ದರು. ಸೇವೆಯಲ್ಲೇ ನಿರತರಾಗಿದ್ದ ಅವರು ಸತತ ಇಪ್ಪತ್ತು ದಿನಗಳ ಬಳಿಕ ಮನೆಗೆ ವಾಪಾಸಾದಾಗ ಈ ರೀತಿಯ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಈ ಗೌರವ ಸಿಕ್ಕಿದಕ್ಕೆ ಮಹಿಳೆಯ ಕಣ್ಣಲ್ಲಿ ಆನಂದ ಬಾಷ್ಪವೂ ತುಂಬಿತಳುಕುತ್ತಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಪೊಲೀಸರಿಗೇ ಆವಾಜ್ ಹಾಕಿದ ಮಗನಿಗೆ ರಸ್ತೆಯಲ್ಲಿ ಕಸ ಗುಡಿಸುವ ಶಿಕ್ಷೆ ಕೊಟ್ಟ ಮಾಜಿ ಮಂತ್ರಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ