ಆ್ಯಪ್ನಗರ

ಶಬರಿಮಲೆಯಲ್ಲಿ ಮೋದಿ ರ‍್ಯಾಲಿ

ಕೇರಳದ ಕೇಂದ್ರ ಜಿಲ್ಲೆ ಹಾಗೂ ಶಬರಿಮಲೆ ವಿವಾದದ ಪ್ರಮುಖ ನೆಲೆ ಎನಿಸಿರುವ ಪತನಂತಿಟ್ಟ ಪ್ರದೇಶವು ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಪ್ರಮುಖ ರಾಜಕೀಯ ರ‍್ಯಾಲಿಗೆ ಸಜ್ಜಾಗಿದೆ.

Vijaya Karnataka 20 Dec 2018, 9:16 pm
ತಿರುವನಂತಪುರ: ಕೇರಳದ ಕೇಂದ್ರ ಜಿಲ್ಲೆ ಹಾಗೂ ಶಬರಿಮಲೆ ವಿವಾದದ ಪ್ರಮುಖ ನೆಲೆ ಎನಿಸಿರುವ ಪತನಂತಿಟ್ಟ ಪ್ರದೇಶವು ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಪ್ರಮುಖ ರಾಜಕೀಯ ರ‍್ಯಾಲಿಗೆ ಸಜ್ಜಾಗಿದೆ. ಜನವರಿ 6ರಂದು ಇಲ್ಲಿ ಮೋದಿಯವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಜನವರಿ ತಿಂಗಳಿನಲ್ಲೇ ಕೇರಳದಲ್ಲಿ ಬಿಜೆಪಿಯ ಮತ್ತೊಂದು ಸಭೆಯಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ. 27ರಂದು ತ್ರಿಶ್ಶೂರ್‌ನಲ್ಲಿ ನಡೆಯುವ ಬಿಜೆಪಿ ಯುವ ಮೋರ್ಚಾ ಸಮ್ಮೇಳನವನ್ನ ಅವರು ಉದ್ಘಾಟಿಸಲಿದ್ದಾರೆ.

ಅಯ್ಯಪ್ಪ ಸ್ವಾಮಿ ದೇಗುಲ ಮಹಿಳಾ ಪ್ರವೇಶ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲಿಯೇ ಪ್ರಧಾನಿ ಕಾರ್ಯಕ್ರಮಗಳು ಚರ್ಚೆಗೆ ಕಾರಣವಾಗಿವೆ. ''ಇದುವರೆಗೆ ಶಬರಿಮಲೆ ಪ್ರಕರಣವನ್ನು ಸಮರ್ಥವಾಗಿ ಬಳಸಿಕೊಂಡಿರುವ ರಾಜ್ಯ ಬಿಜೆಪಿಗೆ ಪ್ರಧಾನಿ ನೀಡಲಿರುವ ಭೇಟಿ ದೊಡ್ಡ ಬಲ ತುಂಬಲಿದೆ. ರಾಜ್ಯ ಕಮ್ಯುನಿಸ್ಟ್‌ ಸರಕಾರ ವಿರುದ್ಧದ ಹೋರಾಟಕ್ಕೂ ಹೊಸ ಶಕ್ತಿ ಲಭಿಸಲಿ'' ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಚುನಾವಣೆ ತಯಾರಿ: ಕೇರಳದಲ್ಲಿ ಪ್ರಧಾನಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುವುದರ ಹಿಂದೆ ಚುನಾವಣಾ ತಯಾರಿ ಉದ್ದೇಶ ಅಡಗಿದೆ. ಇದು ಮುಂಬರುವ ಲೋಕಸಭೆ ಚುನಾವಣೆಗೆ ದಕ್ಷಿಣದಲ್ಲಿ ಪ್ರಧಾನಿ ಮೋಳಗಿಸಲಿರುವ ಪ್ರಚಾರದ ರಣಕಹಳೆ ಎಂದು ವ್ಯಾಖ್ಯಾನಿಸಲಾಗಿದೆ.

ಪ್ರಧಾನಿ ರ‍್ಯಾಲಿ ಎಲ್ಲಿ?

*ಜನವರಿ-6: ಪತ್ತನಂತಿಟ್ಟ
*ಜನವರಿ-27: ತ್ರಿಶ್ಶೂರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ