ಆ್ಯಪ್ನಗರ

ಮೈತ್ರಿ ಬಗ್ಗೆ ಮೋದಿ ಮೃದು ಧೋರಣೆ

''ಕಾಂಗ್ರೆಸ್‌ನ ರೀತಿಯಲ್ಲಿ ನಾವು ಮಿತ್ರಪಕ್ಷಗಳಿಗೆ ದ್ರೋಹ ಬಗೆಯುವುದಿಲ್ಲ. ನಮ್ಮದು ನಂಬಿಕೆಯ ಧರ್ಮ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸಿದರೂ ಮಿತ್ರರನ್ನು ಕಡೆಗಣಿಸುವುದಿಲ್ಲ. ಅವರ ಜತೆಗೂಡಿಯೇ ಸರಕಾರ ರಚಿಸುತ್ತೇವೆ. ಹಳೆಯ ಮತ್ತು ಹೊಸ ಮಿತ್ರರ ಬಗ್ಗೆ ನಮ್ಮದು ಅಪಾರ ಗೌರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

Vijaya Karnataka 11 Jan 2019, 5:00 am
ಚೆನ್ನೈ: ಹಂತ ಹಂತವಾಗಿ ಲೋಕಸಭೆ ಚುನಾವಣೆಯ ರಣತಂತ್ರದ ಚಕ್ರವ್ಯೂಹ ಬಲಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನಷ್ಟು ಹೊಸ ಮಿತ್ರಪಕ್ಷಗಳನ್ನು ಎನ್‌ಡಿಎ ಕೂಟಕ್ಕೆ ಭರಸೆಳೆಯುವ ಮೃದು ಧೋರಣೆ ಹೊರ ಹಾಕಿದ್ದಾರೆ.
Vijaya Karnataka Web modi


ಗುರುವಾರ ತಮಿಳುನಾಡಿನ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಜತೆ ವಿಡಿಯೊ ಸಂವಾದ ನಡೆಸಿದ ಪ್ರಧಾನಿ ಮೋದಿ, ವಿಶೇಷವಾಗಿ ತಮಿಳುನಾಡಿನಲ್ಲಿ ಎನ್‌ಡಿಎ ಬಲಪಡಿಸುವ ಭರವಸೆ ನೀಡಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 90ರ ದಶಕದಲ್ಲಿ ಮೈತ್ರಿ ರಾಜಕಾರಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು ಎನ್ನುವುದನ್ನು ನೆನಪಿಸಿದರು.

ಅಭಿವೃದ್ಧಿಯ ಕನಸು ಹೊತ್ತ ಸಮಾನ ಮನಸ್ಕ ಪಕ್ಷಗಳ ಪಾಲಿಗೆ ಬಿಜೆಪಿಯ ಬಾಗಿಲು ಸದಾ ಮುಕ್ತವಾಗಿವೆ. ಪ್ರಾದೇಶಿಕ ಪಕ್ಷಗಳನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು 20 ವರ್ಷಗಳ ಹಿಂದೆ ಅಟಲ್‌ಜೀ ಕಲಿಸಿಕೊಟ್ಟಿದ್ದಾರೆ. ಅವರ ಆದರ್ಶದ ಹಾದಿಯಲ್ಲಿ ನಾವೀಗ ಸಾಗಿದ್ದೇವೆ ಎಂದಿದ್ದಾರೆ.

''ಕಾಂಗ್ರೆಸ್‌ನ ರೀತಿಯಲ್ಲಿ ನಾವು ಮಿತ್ರಪಕ್ಷಗಳಿಗೆ ದ್ರೋಹ ಬಗೆಯುವುದಿಲ್ಲ. ನಮ್ಮದು ನಂಬಿಕೆಯ ಧರ್ಮ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸಿದರೂ ಮಿತ್ರರನ್ನು ಕಡೆಗಣಿಸುವುದಿಲ್ಲ. ಅವರ ಜತೆಗೂಡಿಯೇ ಸರಕಾರ ರಚಿಸುತ್ತೇವೆ. ಹಳೆಯ ಮತ್ತು ಹೊಸ ಮಿತ್ರರ ಬಗ್ಗೆ ನಮ್ಮದು ಅಪಾರ ಗೌರವಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಮಿತ್ರದ್ರೋಹಿ ಎಂದು ಜರಿದ ಪ್ರಧಾನಿ, ಹಿಂದೆ ಸಭೆಯೊಂದರಲ್ಲಿ ಕಾಂಗ್ರೆಸ್‌ ತನಗೆ ಮೈತ್ರಿ ಬೇಡ ಎಂದು ನಿರ್ಣಯ ಕೈಗೊಂಡಿತ್ತು. ಉತ್ತರ ಪ್ರದೇಶದಲ್ಲಿ ಪರದಾಡುತ್ತಿದ್ದರೂ ಅದಕ್ಕೆ ಮಿತ್ರರು ಸಿಗುತ್ತಿಲ್ಲ. ಈ ದುಸ್ಥಿತಿಯ ನಡುವೆಯೂ ಆ ಪಕ್ಷದ ದುರಂಹಕಾರ ತಗ್ಗಿಲ್ಲ. ಅಲ್ಲಿ ಅಚ್ಚರಿಯ ಫಲಿತಾಂಶ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ಅದೊಂದು ಹಾಸ್ಯಾಸ್ಪದ ಪಕ್ಷ ಎಂದು ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ