ಆ್ಯಪ್ನಗರ

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ

ಮತ್ತೊಂದು ಪ್ರಶಸ್ತಿಯ ಮೂಲಕ ಇದು ಭಾರತೀಯರೆಲ್ಲರಿಗೂ ಮಗದೊಮ್ಮೆ ಹೆಮ್ಮೆ ಪಟ್ಟುಕೊಳ್ಳುವ ಕ್ಷಣ ಎಂದು ಪಿಎಂಒ ಖಾತೆ ರಾಜ್ಯ ದರ್ಜೆ ಸಚಿವ ಡಾ. ಜಿತೇಂದ್ರ ಸಿಂಗ್‌ ಟ್ಟೀಟ್‌ ಮಾಡಿದ್ದಾರೆ.

TIMESOFINDIA.COM 2 Sep 2019, 4:39 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರತಿಷ್ಠಿತ ಬಿಲ್‌ ಮತ್ತು ಮಿಲಿಂದಾ ಗೇಟ್ಸ್‌ ಫೌಂಡೇಷನ್‌ನಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಅವರು ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Vijaya Karnataka Web modi to receive prestigious award for swachh bharat abhiyaan
ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ


ಈ ಸಂಬಂಧ ಸೋಮವಾರ ಟ್ಟೀಟ್‌ ಮಾಡಿರುವ ಪಿಎಂಒ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್‌, ಪ್ರಧಾನಿ ನರೇಂದ್ರ ಮೋದಿಯವರ "ಪರಿಶ್ರಮಶಾಲಿ ಮತ್ತು ನವೀನ" ಯೋಜನೆಗಳಿಗೆ ಜಗತ್ತಿನಾದ್ಯಂತ ಮೆಚ್ಚುಗೆಗಳು ಹರಿದು ಬರುತ್ತಿವೆ ಎಂದಿದ್ದಾರೆ. ಮತ್ತೊಂದು ಪ್ರಶಸ್ತಿಯ ಮೂಲಕ ಇದು ಭಾರತೀಯರೆಲ್ಲರಿಗೂ ಮತ್ತೊಮ್ಮೆ ಹೆಮ್ಮೆಯ ಕ್ಷಣ ಎಂದು ಅವರು ಟ್ಟೀಟ್‌ ಮಾಡಿದ್ದಾರೆ.

2014ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಅಭಿಯಾನದ ಜೊತೆಗೆ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ, ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ಘನ ತ್ಯಾಜ್ಯ ವಿಲೇವಾರಿಯಂಥ ಕ್ರಮಗಳನ್ನು ಆರಂಭಿಸಲಾಗಿತ್ತು. ಅಭಿಯಾನ ಆರಂಭಗೊಂಡ ಐದು ವರ್ಷದ ನಂತರ ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ