ಆ್ಯಪ್ನಗರ

ಮಾ.30ರಿಂದ ಮೋದಿ ತ್ರಿರಾಷ್ಟ್ರ ಪ್ರವಾಸ

ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 30ರಿಂದ ತ್ರಿರಾಷ್ಟ್ರ ಪ್ರವಾಸ ಕೈಗೊಳಲ್ಲಿದ್ದು, ಇದು ಅವರ ಈ ವರ್ಷದ ಮೊದಲ ವಿದೇಶ ಪ್ರವಾಸ ಎನಿಸಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಏಜೆನ್ಸೀಸ್ 28 Feb 2016, 8:22 pm
ಹೊಸದಿಲ್ಲಿ : ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 30ರಿಂದ ತ್ರಿರಾಷ್ಟ್ರ ಪ್ರವಾಸ ಕೈಗೊಳಲ್ಲಿದ್ದು, ಇದು ಅವರ ಈ ವರ್ಷದ ಮೊದಲ ವಿದೇಶ ಪ್ರವಾಸ ಎನಿಸಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.
Vijaya Karnataka Web modi to visit three nations next month
ಮಾ.30ರಿಂದ ಮೋದಿ ತ್ರಿರಾಷ್ಟ್ರ ಪ್ರವಾಸ


ಬೆಲ್ಜಿಯಂ, ಅಮೆರಿಕ ಹಾಗೂ ಸೌದಿ ಅರೇಬಿಯಾ ಪ್ರಧಾನಿ ಭೇಟಿ ಕೊಡಲಿರುವ ರಾಷ್ಟ್ರಗಳು. ಮಾ.30ರಂದು ಬೆಲ್ಜಿಯಂನಲ್ಲಿ ನಡೆಯಲಿರುವ ಭಾರತ-ಐರೋಪ್ಯ ಒಕ್ಕೂಟ ಶೃಂಗದಲ್ಲಿ ಭಾಗಿಯಾಗಿ, ಅಲ್ಲಿಂದ ಮಾ.31ರಂದು ಅಮೆರಿಕದ ವಾಷಿಂಗ್ಟನ್‌ಗೆ ತೆರಳಿ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಪಾಕ್ ಪ್ರಧಾನಿ ನವಾಜ್ ಷರೀಫ್ ಸಹ ಇದರಲ್ಲಿ ಪಾಲ್ಗೊಳ್ಳಲಿದ್ದು, ಉಭಯ ನಾಯಕರು ಪರಸ್ಪರ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಎರಡೂ ಸಮಾವೇಶ ಮುಗಿಸಿಕೊಂಡು ಭಾರತಕ್ಕೆ ಹಿಂದಿರುವ ವೇಳೆ ಏ.2ರಂದು ಸೌದಿ ಅರೇಬಿಯಾಕ್ಕೆ ಭೇಟಿ ಕೊಡಲಿರುವ ಮೋದಿ ಅವರು, ಅಲ್ಲಿನ ಸರಕಾರದ ಮುಖ್ಯಸ್ಥರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಈ ಸಭೆಯಲ್ಲಿ ದ್ವಿಪಕ್ಷೀಯ ವಹಿವಾಟು ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ