ಆ್ಯಪ್ನಗರ

ದೇಗುಲದ ಮಹಡಿಯಿಂದ ಮಹಿಳೆಯ ತಳ್ಳಿದ ಕೋತಿ: ಭಕ್ತೆಯ ಸಾವು

ದೇವಸ್ಥಾನದ ಚಾವಣಿ ಮೇಲಿನಿಂದ ಕೋತಿಯೊಂದು ತಳ್ಳಿದ ಪರಿಣಾಮ ಭಕ್ತರೊಬ್ಬರು ಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ನಬದ್ವೀಪ್‌ನಲ್ಲಿ ಬುಧವಾರ ನಡೆದಿದೆ.

TNN 14 Sep 2018, 7:53 am
ನಬದ್ವೀಪ್ (ಪಶ್ಚಿಮ ಬಂಗಾಳ): ದೇವಸ್ಥಾನದ ಚಾವಣಿ ಮೇಲಿನಿಂದ ಕೋತಿಯೊಂದು ತಳ್ಳಿದ ಪರಿಣಾಮ ಭಕ್ತರೊಬ್ಬರು ಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ನಬದ್ವೀಪ್‌ನಲ್ಲಿ ಬುಧವಾರ ನಡೆದಿದೆ.
Vijaya Karnataka Web Monkey


ಹೂಗ್ಲಿ ಜಿಲ್ಲೆಯ ಸಿಂಗೂರ್ ಘನಶ್ಯಾಮ್‌ಪುರದ ಸರಸ್ವತಿ ದಾಸ್‌ (45) ಎಂದು ಗುರುತಿಸಲಾಗಿದೆ. 'ದೇವಸ್ಥಾನದ ಮೊದಲ ಮಹಡಿಯಲ್ಲಿ ಕಣ್ಣುಮುಚ್ಚಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕೋತಿಯೊಂದು ಓಡಿಬಂದು ಮೈಮೇಲೆ ಜಿಗಿಯಿತು. ಆಗ ಭಯಗೊಂಡ ಮಹಿಳೆ ಗಲಿಬಿಲಿಯಿಂದ ಕೆಳಗೆ ಬಿದ್ದು ಮೃತಪಟ್ಟಳೆಂದು ದೇವಸ್ಥಾನದ ಅಧಿಕಾರಿ ಸಚ್ಚಿದಾನಂದನ್‌ ದಾಸ್‌ ತಿಳಿಸಿದರು.

ಮಹಿಳೆ ಚಾವಣಿಯ ಅಂಚಿನಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಆಗ ಎಲ್ಲಿಂದಲೋ ಬಂದ ಕೋತಿ ಆಕೆ ಮೈಮೇಲೆ ಎಗರಿ ತಳ್ಳಿತು. ಆಕೆಯ ತಲೆಗೆ ಗಂಭೀರ ಗಾಯವಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಅವರು ತಿಳಿಸಿದರು.

ನಬದ್ವೀಪ್‌ ಸುತ್ತಮುತ್ತ ಮಂಗಗಳ ಹಾವಳಿ ಮಿತಿಮೀರಿದೆ. ಕೋತಿಗಳು ಹಣ್ಣು-ತರಕಾರಿಗಳ ಸಹಿತ ಎಲ್ಲ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ಗ್ರಾಮಸ್ಥರು ದೂರುತ್ತಾರೆ. ಪರಿಸರದ ಎಲ್ಲ ದೇವಸ್ಥಾನಗಳಿಂದ ಪ್ರಸಾದ ಹಾಗೂ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ