ಆ್ಯಪ್ನಗರ

ದೇಶಾದ್ಯಂತ ಕುಗ್ಗಿದ ಮುಂಗಾರು ಅಬ್ಬರ; ಈ ಸಲ ಮಳೆಗೆ ಬಲಿಯಾದವರ ಸಂಖ್ಯೆ ಎಷ್ಟು?

​​ಸಾಮಾನ್ಯವಾಗಿ ಸೆಪ್ಟೆಂಬರ್‌ ಮೊದಲ ವಾರದಿಂದ ನೈರುತ್ಯ ಮುಂಗಾರು ಪ್ರಭಾವ ಕಡಿಮೆಯಾಗಲು ಶುರುವಾಗುತ್ತದೆ. ಆದರೆ ಈ ಸಲ ಕೆಲವು ಭಾಗಗಳಲ್ಲಿಅಕ್ಟೋಬರ್‌ ಮೊದಲ ವಾರದವರೆಗೂ ಮಳೆ ಸುರಿದಿದೆ.

Vijaya Karnataka 10 Oct 2019, 8:53 am
ಹೊಸದಿಲ್ಲಿ: ನೈರುತ್ಯ ಮುಂಗಾರು ಮಳೆ ದೇಶಾದ್ಯಂತ ನಿಧಾನಗತಿಯಲ್ಲಿತನ್ನ ಅಬ್ಬರ ತಗ್ಗಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ.
Vijaya Karnataka Web Rain 1200


ಬಿಹಾರದಲ್ಲಿ ಭಾರಿ ಮಳೆಗೆ ಬಲಿಯಾದವರ ಸಂಖ್ಯೆ 42ಕ್ಕೆ

ಸಾಮಾನ್ಯವಾಗಿ ಸೆಪ್ಟೆಂಬರ್‌ ಮೊದಲ ವಾರದಿಂದ ನೈರುತ್ಯ ಮುಂಗಾರು ಪ್ರಭಾವ ಕಡಿಮೆಯಾಗಲು ಶುರುವಾಗುತ್ತದೆ. ಆದರೆ ಈ ಸಲ ಕೆಲವು ಭಾಗಗಳಲ್ಲಿ ಅಕ್ಟೋಬರ್‌ ಮೊದಲ ವಾರದವರೆಗೂ ಮಳೆ ಸುರಿದಿದೆ. ವಾಯವ್ಯ ಭಾರತದಲ್ಲಿ ಅದರಲ್ಲೂ ಪಂಜಾಬ್‌, ಹರಿಯಾಣ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿಅಕ್ಟೋಬರ್‌ 9ರ ಅಂತ್ಯಕ್ಕೆ ಬಹುತೇಕ ಮಳೆ ನಿಂತಿದೆ.

ಇನ್ನೂ 2-3 ದಿನಗಳಲ್ಲಿ ಮಧ್ಯ ಭಾರತದಲ್ಲೂಮಳೆ ಪ್ರಭಾವ ಬಹುತೇಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 1961ರಲ್ಲಿಅಕ್ಟೋಬರ್‌ 1ರ ಹೊತ್ತಿಗೆ ಹಲವು ಕಡೆ ಮಳೆ ನಿಂತಿದ್ದರೆ, 2007ರಲ್ಲಿಸೆಪ್ಟೆಂಬರ್‌ 30ಕ್ಕೆ ಮುಂಗಾರು ಮಳೆ ನಿಂತಿತ್ತು. ಆದರೆ ಈ ಸಲ ಅಕ್ಟೋಬರ್‌ ಮೊದಲ ವಾರದವರೆಗೂ ಹಲವು ಕಡೆ ಮುಂಗಾರು ತನ್ನ ಪ್ರಭಾವ ತೋರಿದೆ.

2100 ಮಂದಿ ಬಲಿ: ದೇಶಾದ್ಯಂತ ಈ ಬಾರಿ ಮಳೆ ಹಾಗೂ ಪ್ರವಾಹದಿಂದ 2100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 25 ಲಕ್ಷ ಜನ ಸಂಕಷ್ಟ ಅನುಭವಿಸಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ. ಕರ್ನಾಟಕದಲ್ಲಿ 106 ಮಂದಿ ಸೇರಿ ದೇಶದ ನಾನಾ ರಾಜ್ಯಗಳಲ್ಲಿಮಳೆ ಅವಘಡಗಳಿಂದ ಸಾವಿರಾರು ಜನ ಮೃತಪಟ್ಟಿದ್ದು, 46ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ