ಆ್ಯಪ್ನಗರ

ಉತ್ತರ ಪ್ರದೇಶ: ನುಡಿದಂತೆ ನಡೆದ ಯೋಗಿ, ನಷ್ಟ ಭರ್ತಿಗೆ 300 ಜನರಿಗೆ ನೋಟಿಸ್‌ ಜಾರಿ

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಸಾರ್ವಜನಿಕ ಸ್ವತ್ತುಗಳನ್ನು ನಾಶಪಡಿಸಿದವರನ್ನು ಸುಮ್ಮನೆ ಬಿಡಲ್ಲ ಎಂದಿದ್ದ ಯೋಗಿ ಆದಿತ್ಯನಾಥ್‌ ನುಡಿದಂತೆ ನಡೆದುಕೊಂಡಿದ್ದು,300 ಜನರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

Vijaya Karnataka Web 26 Dec 2019, 8:20 am
ಲಖನೌ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ವೇಳೆ, ''ಸಾರ್ವಜನಿಕ ಸ್ವತ್ತುಗಳನ್ನು ನಾಶಪಡಿಸಿದವರನ್ನು ಸುಮ್ಮನೆ ಬಿಡಲ್ಲ. ಅವರಿಂದಲೇ ನಷ್ಟ ಭರ್ತಿ ವಸೂಲಿ ಮಾಡುವ ಮೂಲಕ ಕಿಡಿಗೇಡಿಗಳಿಗೆ ಕಠಿಣ ಸಂದೇಶ ರವಾನಿಸಲಾಗುವುದು,'' ಎಂದು ಘೋಷಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅದರಂತೆಯೇ ನಡೆದುಕೊಂಡಿದ್ದಾರೆ.
Vijaya Karnataka Web Yogi Adityanath


ಸರಕಾರದ ಸೂಚನೆಯಂತೆ ಬುಧವಾರ ರಾಂಪುರ ಜಿಲ್ಲಾಡಳಿತವು ಗಲಭೆಯಲ್ಲಿ ಸಾರ್ವಜನಿಕ ಸ್ವತ್ತನ್ನು ನಾಶಪಡಿಸಿದ 28 ಜನರನ್ನು ಗುರುತಿಸಿ ಅವರಿಗೆ 14.86 ಲಕ್ಷ ರೂ. ಪರಿಹಾರ ಪಾವತಿಸುವಂತೆ ಸೂಚಿಸಿ ನೋಟಿಸ್‌ ನೀಡಿದೆ.

ಗಲಭೆಯನ್ನು ಆಧರಿಸಿ ಜಿಲ್ಲೆಯಾದ್ಯಂತ 25 ಲಕ್ಷ ರೂ.ನಷ್ಟು ಸಾರ್ವಜನಿಕರ ಸ್ವತ್ತು ನಾಶವಾಗಿದೆ. ಪರಿಸ್ಥಿತಿಯ ಲಾಭ ಪಡೆದು ಕಿಡಿಗೇಡಿಗಳು ಪೊಲೀಸ್‌ ಜೀಪು, ಮೊಟಾರು ಬೈಕ್‌ ಸೇರಿ ಸಾರ್ವಜನಿಕ ವಸ್ತುಗಳನ್ನು ಧ್ವಂಸಗೊಳಿಸಿದ್ದರು.

ಪೌರತ್ವ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ನಿಲ್ಲದ ಹಿಂಸಾಚಾರ, ಸತ್ತವರ ಸಂಖ್ಯೆ 14ಕ್ಕೆ ಏರಿಕೆ

ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿ ಈ ಕೃತ್ಯದಲ್ಲಿತೊಡಗಿದ್ದ 28 ಜನರನ್ನು ಪತ್ತೆ ಹಚ್ಚಿ ಅವರಿಗೆ ನಷ್ಟ ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಿದ್ದೇವೆ ಎಂದು ರಾಂಪುರ ಜಿಲ್ಲಾಧಿಕಾರಿ ಆಂಜನೇಯ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಉತ್ತಮ ಆಡಳಿತದಲ್ಲಿ ಕರ್ನಾಟಕವೇ ಬೆಸ್ಟ್‌; ಉತ್ತರ ರಾಜ್ಯಗಳದ್ದೇ ಕಳಪೆ ಸಾಧನೆ!

ಮುಂದಿನ ದಿನಗಳಲ್ಲಿಇದೊಂದು ಪಾಠವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಮಧ್ಯೆ ಮೀರತ್‌ ಜಿಲ್ಲಾಡಳಿತವೂ ಇದೇ ರೀತಿ ಕ್ರಮಕ್ಕೆ ಮುಂದಾಗಿದೆ. ಎಫ್‌ಐಆರ್‌ ದಾಖಲಾಗಿರುವ 148 ಮಂದಿಗೆ ನಷ್ಟ ಭರ್ತಿ ಪಾವತಿಸುವಂತೆ ನೋಟಿಸ್‌ ರವಾನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ