ಆ್ಯಪ್ನಗರ

ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಆರು ಮಹಿಳೆಯರ ದುರ್ಮರಣ

ಸೆಂಗುಲಂ ಗ್ರಾಮದಲ್ಲಿರುವ ರಾಜಲಕ್ಷ್ಮೇ ಫೈರ್‌ವರ್ಕ್ಸ್‌ ಕಾರ್ಖಾನೆಯಲ್ಲಿ ದುರ್ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಸರ ಪಟಾಕಿ, ನೆಲಚಕ್ರ, ಫ್ಲವರ್ ‌ಪಾಟ್‌ಗಳನ್ನು ತಯಾರಿಸಲು ಅನುಮತಿ ಪಡೆಯಲಾಗಿತ್ತು. ಆದರೆ ಅಕ್ರಮವಾಗಿ ಫ್ಯಾನ್ಸಿ ಪಟಾಕಿಗಳನ್ನೂ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.

Vijaya Karnataka Web 24 Oct 2020, 7:04 am
ಮದುರೈ: ತಮಿಳುನಾಡಿನ ಮದುರೈ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿ ಆರು ಮಹಿಳೆಯರು ಮೃತಪಟ್ಟಿದ್ದು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೆಂಗುಲಂ ಗ್ರಾಮದಲ್ಲಿರುವ ರಾಜಲಕ್ಷ್ಮೇ ಫೈರ್‌ವರ್ಕ್ಸ್‌ ಕಾರ್ಖಾನೆಯಲ್ಲಿ ದುರ್ಘಟನೆ ಸಂಭವಿಸಿದೆ.
Vijaya Karnataka Web ElBIEr_UUAM_XhC


ಕಾರ್ಖಾನೆಯಲ್ಲಿ ಸರ ಪಟಾಕಿ, ನೆಲಚಕ್ರ, ಫ್ಲವರ್ ‌ಪಾಟ್‌ಗಳನ್ನು ತಯಾರಿಸಲು ಅನುಮತಿ ಪಡೆಯಲಾಗಿತ್ತು. ಆದರೆ ಅಕ್ರಮವಾಗಿ ಫ್ಯಾನ್ಸಿ ಪಟಾಕಿಗಳನ್ನೂ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಬೆಳಗ್ಗೆ ಕಾರ್ಖಾನೆಯಲ್ಲಿ 35 ಮಂದಿ ಕೆಲಸ ಮಾಡುತ್ತಿದ್ದರು. ಸ್ಫೋಟದ ವೇಳೆ ಬಹುತೇಕರು ಕಾರ್ಖಾನೆ ಎದುರಿನ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು.

ಹೀಗಾಗಿ ಹೆಚ್ಚಿನ ಸಾವು-ನೋವು ತಪ್ಪಿದೆ. ಸ್ಫೋಟದ ತೀವ್ರತೆಯಿಂದ ಕಟ್ಟಡ ಸಂಪೂರ್ಣ ಜಖಂಗೊಂಡಿದೆ. ''ದೀಪಾವಳಿ ಸಮೀಪಿಸುತ್ತಿರುವುದರಿಂದ ರಾಜ್ಯದಲ್ಲಿ ಪಟಾಕಿ ತಯಾರಿಕೆ ಬಿರುಸಿನಿಂದ ಸಾಗಿದೆ. ರಾಜ್ಯ ಸರಕಾರ ಪಟಾಕಿ ಕಾರ್ಖಾನೆಗಳಲ್ಲಿ ಸುರಕ್ಷತೆ ಕ್ರಮಗಳ ಕುರಿತು ತಪಾಸಣೆ ನಡೆಸಬೇಕು,'' ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಆಗ್ರಹಿಸಿದ್ದಾರೆ.

30 ಕೋಟಿ ವಾರಿಯರ್‌ಗಳಿಗೆ ಮೊದಲು ಕೊರೊನಾ ಲಸಿಕೆ, ಪೂರೈಕೆಗೆ ಸರಕಾರದಿಂದ ಸಿದ್ಧತೆ ಜೋರು!

ತಮಿಳುನಾಡಿನ ಹಲವು ಪಟಾಕಿ ಕಾರ್ಖಾನೆಗಳಲ್ಲಿ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಆದರೂ ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯ ಮುಂದುವರಿದಿದೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಶಿವಕಾಶಿಯಲ್ಲಿ ಿಂತಹ ಘಟನೆ ನಡೆದಿತ್ತು. ಇದೀಗ ಮತ್ತೆ ಮರುಕಳಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ