ಆ್ಯಪ್ನಗರ

ಅಯೋಧ್ಯೆ ಭೂಮಿಪೂಜೆ ದಿನ ಮನೆಮನೆಗಳಲ್ಲಿ 'ಹನುಮಾನ್ ಚಾಲೀಸ್' ಪಠಿಸಿ : ಶಿವರಾಜ್ ಸಿಂಗ್ ಚವ್ಹಾಣ್

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಸೋಮವಾರ ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ ಮಾಡಿ ಜನರಲ್ಲಿ ಮನವಿ ಮಾಡಿದ್ದಾರೆ. ಆಗಸ್ಟ್‌ 4 ಮತ್ತು 5ರಂದು ರಾಜ್ಯದ ಜನತೆ ತಮ್ಮ ಮನೆಯಂಗಳದಲ್ಲಿ ದೀಪವನ್ನು ಬೆಳಗಿ ಹನುಮಾನ್ ಚಾಲೀಸ್ ಮತ್ತು ರಾಮಾಯಣದ ಸುಂದರಕಾಂಡವನ್ನು ಪಠಿಸುವಂತೆ ವಿನಂತಿಸಿಕೊಂಡಿದ್ದಾರೆ.

TIMESOFINDIA.COM 3 Aug 2020, 4:07 pm
ಭೋಪಾಲ್: ಆಗಸ್ಟ್‌ ಐದರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ವೇಳೆ ಸಾರ್ವಜನಿಕರು ತಮ್ಮ ಮನೆಯಂಗಳದಲ್ಲಿ ದೀಪಗಳನ್ನು ಬೆಳಗಿ ಹನುಮಾನ್ ಚಾಲೀಸಾ ಮಂತ್ರ ಮತ್ತು ರಾಮಾಯಣದ ಸುಂದರಕಾಂಡವನ್ನು ಪಠಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಮನವಿ ಮಾಡಿದ್ದಾರೆ.
Vijaya Karnataka Web Shivaraj singh chouhan


ಅಯೋಧ್ಯೆ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ: ಮೋದಿ ಸೇರಿ ನಾಲ್ವರು ಗಣ್ಯರ ಹೆಸರು!

ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್ ಸಿಂಗ್ ಚವ್ಹಾಣ್, ಸೋಮವಾರ ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ ಮಾಡಿ ಜನರಲ್ಲಿ ಮನವಿ ಮಾಡಿದ್ದಾರೆ. ಆಗಸ್ಟ್‌ 4 ಮತ್ತು 5ರಂದು ರಾಜ್ಯದ ಜನತೆ ತಮ್ಮ ಮನೆಯಂಗಳದಲ್ಲಿ ದೀಪವನ್ನು ಬೆಳಗಿ ಹನುಮಾನ್ ಚಾಲೀಸ್ ಮತ್ತು ರಾಮಾಯಣದ ಸುಂದರಕಾಂಡವನ್ನು ಪಠಿಸುವಂತೆ ವಿನಂತಿಸಿಕೊಂಡಿದ್ದಾರೆ. ಅಲ್ಲದೇ ಈ ಎರಡು ದಿನ ತಮ್ಮ ತಮ್ಮ ಮನೆಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವ ಮೂಲಕ ರಾಮಮಂದಿರ ಭೂಮಿ ಪೂಜಾ ಕಾರ್ಯಕ್ರಮವನ್ನು ಆನಂದಿಸಿ ಎಂದು ಮನವಿ ಮಾಡಿದ್ದಾರೆ.

ಅಯೋಧ್ಯೆ ಭೂಮಿ ಪೂಜೆಯಲ್ಲಿ ನಾನು ಭಾಗವಹಿಸುವುದಿಲ್ಲ..! : ಬಿಜೆಪಿ ನಾಯಕಿ ಉಮಾ ಭಾರತಿ

ಆಗಸ್ಟ್ 5ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಭೂಮಿ ಪೂಜೆಗೆ ಈಗಾಗಲೇ ಅಯೋಧ್ಯೆಯನ್ನು ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದ್ದು, ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕರಿಗೆ ಭೂಮಿ ಪೂಜಾ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕವೂ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಅಯೋಧ್ಯೆಯಲ್ಲಿ ರೂ.104 ಕೋಟಿ ವೆಚ್ಚದಲ್ಲಿ 'ರಾಮಮಂದಿರ' ಮಾದರಿ ರೈಲು ನಿಲ್ದಾಣ..!

ಭೂಮಿ ಪೂಜೆ ಹಿನ್ನೆಲೆ ಅಯೋಧ್ಯೆ ಸುತ್ತಮುತ್ತಲ ದೇವಾಲಯ ಮತ್ತು ಕೆಲ ನಗರಗಳನ್ನು ಪೇಂಟಿಂಗ್ ಮಾಡಿ ಹೊಚ್ಚ ಹೊಸದಾಗಿ ಕಾಣುವಂತೆ ಮಾಡಲಾಗಿದ್ದು,ಇತ್ತ ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿರುವ ರಾಮರಾಜ ದೇವಾಲಯ ಹಾಗೂ ಚಿತ್ರಕೂಟದಲ್ಲಿರುವ ದೇವಾಲಯಗಳು ಸೇರಿದಂತೆ ಅಲ್ಲಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಕೊರೊನಾ ಹಿನ್ನೆಲೆ ಸಾರ್ವಜನಿಕರಿಗೆ ದೇವಾಲಯಗಳಿಗೆ ಭೇಟಿ ನೀಡದಂತೆಯೂ ಕೇಳಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ