ಆ್ಯಪ್ನಗರ

ಕರ್ಫ್ಯೂ ವೇಳೆ ಅಂಗಡಿ ತೆರೆದ 71 ವರ್ಷದ ವೃದ್ದನಿಗೆ ಪೊಲೀಸ್ ರೇಂಜರ್‌ನಿಂದ 'ಬಸ್ಕಿ' ಶಿಕ್ಷೆ!

ಸಮಯ ಮೀರಿ ಅಂಗಡಿ ತೆರೆದಿದ್ದ 71 ವಯಸ್ಸಿನ ವೃದ್ದನಿಗೆ ಪೊಲೀಸೊಬ್ಬ ಬಸ್ಕಿ ತೆಗೆಸಿದ ವಿಡಿಯೋ ವೈರಲ್‌ ಆಗಿದೆ.

TIMESOFINDIA.COM 12 May 2020, 6:07 pm
ಬೇತುಲ್: ಕೊರೊನಾ ಸೋಂಕು ತಡೆಗಟ್ಟಲು ದೇಶದ್ಯಾಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಹೀಗಾಗಿ ಎಲ್ಲೂ ಬೇಕಾಬಿಟ್ಟಿ ತಿರುಗಾಡೋಕೆ ಆಗಲ್ಲ. ಇನ್ನು ಕೆಲವೆಡೆ ಸಡಿಲಿಕೆ ಇದ್ದರೂ ಓಡಾಟಕ್ಕೆ, ಅಂಗಡಿ ತೆರೆಯಲು ಸಮಯ ಫಿಕ್ಸ್‌ ಮಾಡಲಾಗಿದೆ. ಇದೀಗಕರ್ಫ್ಯೂ ಇದ್ದ ಸ್ಥಳದಲ್ಲಿ ಸಮಯ ಮೀರಿ ಅಂಗಡಿ ತೆರೆದಿದ್ದ 71 ವಯಸ್ಸಿನ ವೃದ್ದನಿಗೆ ಪೊಲೀಸ್‌ ರೇಂಜರೊಬ್ಬ ಬಸ್ಕಿ ತೆಗೆಸಿದ ವಿಡಿಯೋ ವೈರಲ್‌ ಆಗಿದೆ.
Vijaya Karnataka Web 75692876


ಈ ಘಟನೆ ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ನಡೆದಿದ್ದು, ಅಂಗಡಿ ತೆರೆದಿದ್ದ ವೃದ್ದನಿಗೆ ಪೊಲೀಸ್‌ ರೇಂಜರೊಬ್ಬ ಬಸ್ಕಿ ಅಥವಾ ಉಟಾಬಸ್‌ ತೆಗೆಯುವ ಶಿಕ್ಷೆ ಕೊಟ್ಟಿದ್ದಾನೆ. ಸದ್ಯ ವೃದ್ದನ ಬಸ್ಕಿಯ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ಬಗ್ಗೆ ಪರ ಹಾಗೂ ವಿರೋಧಗಳು ಕೇಳಿಬರುತ್ತಿದೆ. ಪೊಲೀಸ್‌ ನಡೆಗೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್‌ ಇಲಾಖೆ, ವೃದ್ದರಿಗೆ ಆ ರೀತಿಯ ಶಿಕ್ಷೆ ಕೊಡಬಾರದಿತ್ತು. ಇದು ನೈತಿಕ ಕರ್ತವ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಘಟನೆಗೆ ಹೋಲುವಂತಹ ಸನ್ನಿವೇಶಗಳು ಲಾಕ್‌ಡೌನ್‌ ವೇಳೆ ದೇಶದ ಹಲವೆಡೆ ನಡೆದಿದೆ. ಇತ್ತೀಚೆಗೆ ದೆಹಲಿಯಲ್ಲಿ ತರಕಾರಿ ಅಂಗಡಿ ತೆರೆದಿದಕ್ಕೆ ಪೊಲೀಸರು ಆತನ ತರಕಾರಿಯನ್ನ ರಸ್ತೆ ಮೇಲೆ ಎಸೆದಿದ್ದರು. ಕೆಲವೆಡೆ ಪೊಲೀಸರು ತೀವ್ರ ಲಾಠಿ ಚಾರ್ಜ್ ನಡೆಸಿದ್ದರು. ‌

ಎಟಿಎಂಗಳಿಂದ ಕೊರೊನಾ ಭಯ..! ಸ್ಯಾನಿಟೈಸರ್‌ ಇಲ್ಲ, ಇದ್ರೂ ಕಳ್ಳರು ಬಿಡಲ್ಲ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ