ಆ್ಯಪ್ನಗರ

ಫೇಸ್‌ಬುಕ್‌ ಸಿಇಒಗೆ ಕೋರ್ಟ್‌ ಸಮನ್ಸ್‌

ಫೇಸ್‌ಬುಕ್‌ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಮಧ್ಯಪ್ರದೇಶದ ಭೋಪಾಲ್‌ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದ್ದು, ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

Vijaya Karnataka 28 Apr 2018, 10:32 am
ಭೋಪಾಲ್‌: ಫೇಸ್‌ಬುಕ್‌ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಮಧ್ಯಪ್ರದೇಶದ ಭೋಪಾಲ್‌ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದ್ದು, ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.
Vijaya Karnataka Web Mark


ಫೇಸ್‌ಬುಕ್‌ ತಮ್ಮ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದೆ ಮತ್ತು ಮಧ್ಯಪ್ರವೇಶಿಸುತ್ತಿದೆ ಎಂದು ಆರೋಪಿಸಿ ವೆಬ್‌ ಪೋರ್ಟಲ್‌ ಒಂದರ ಮಾಲೀಕ ಸ್ವಪ್ನಿಲ್‌ ರೈ ಎಂಬುವವರು ಭೋಪಾಲ್‌ನ ಅಡಿಷನಲ್‌ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾ.ಪಾರ್ಥ್‌ ಶಂಕರ್‌ ಮಿಶ್ರಾ ಅವರು, ಜೂನ್‌ 20ರಂದು ಕೋರ್ಟ್‌ಗೆ ಹಾಜರಾಗುವಂತೆ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಇ-ಮೇಲ್‌ ಮೂಲಕ ಅವರಿಗೆ ಸಮನ್ಸ್‌ ರವಾನಿಸಲಾಗಿದೆ.

ತಮ್ಮ ವೆಬ್‌ ಪೋರ್ಟ್‌ಲ್‌ ಪ್ರಚಾರಕ್ಕಾಗಿ ಫೇಸ್‌ಬುಕ್‌ನಲ್ಲಿ ಹಣ ಪಾವತಿ ಮಾಡಿ ನೀಡಿದ ಜಾಹೀರಾತನ್ನು ನಿಗದಿತ ಅವಧಿಗೆ ಸಂಸ್ಥೆ ಪ್ರಸಾರ ಮಾಡದೇ ಮಧ್ಯದಲ್ಲೇ ನಿಲ್ಲಿಸಿದೆ. ಏಪ್ರಿಲ್‌ 14ರಿಂದ ಏಪ್ರಿಲ್‌ 21,2018ರವರೆಗೆ ಜಾಹಿರಾತು ಪ್ರಸಾರಿಸಲು ಹಣ ಪಾವತಿಸಲಾಗಿತ್ತು. ಆದರೆ ಫೇಸ್‌ಬುಕ್‌ ಏಪ್ರಿಲ್‌ 16ರಂದೇ ತಮ್ಮ ಜಾಹಿರಾತನ್ನು ಯಾವುದೇ ಕಾರಣ ನೀಡದೆ ನಿಲ್ಲಸಿದೆ ಎಂದು ರೈ ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ