ಆ್ಯಪ್ನಗರ

ಮಧ್ಯಪ್ರದೇಶದಲ್ಲಿನ್ನು ಆಕಳುಗಳಿಗೆ ಹುಟ್ಟೋದು ಬರೀ ಹೆಣ್ಣು !

ಮಧ್ಯಪ್ರದೇಶದ ಆಕಳುಗಳಿನ್ನು ಮೇಲೆ ಕೇವಲ ಹೆಣ್ಣು ಕರುಗಳಿಗೆ ಜನ್ಮ ನೀಡಲಿವೆ. ಅಲ್ಲಿನ ರಾಜ್ಯ ಸರಕಾರ ದನಗಳಿಗಾಗಿ 'ಬೇಟಿ ಬನಾವೋ' ಯೋಜನೆಯನ್ನು ಜಾರಿಗೆ ತರುತ್ತಿದ್ದು ಲಿಂಗವನ್ನು ಮೊದಲೇ ನಿರ್ಣಯಿಸಬಹುದಾದ ಲಿಂಗ ವರ್ಗೀಕೃತ ವೀರ್ಯ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

TIMESOFINDIA.COM 25 Aug 2018, 12:32 pm
ಭೋಪಾಲ್: ಮಧ್ಯಪ್ರದೇಶದ ಆಕಳುಗಳಿನ್ನು ಮೇಲೆ ಕೇವಲ ಹೆಣ್ಣು ಕರುಗಳಿಗೆ ಜನ್ಮ ನೀಡಲಿವೆ. ಅಲ್ಲಿನ ರಾಜ್ಯ ಸರಕಾರ ದನಗಳಿಗಾಗಿ 'ಬೇಟಿ ಬನಾವೋ' ಯೋಜನೆಯನ್ನು ಜಾರಿಗೆ ತರುತ್ತಿದ್ದು ಲಿಂಗವನ್ನು ಮೊದಲೇ ನಿರ್ಣಯಿಸಬಹುದಾದ ಲಿಂಗ ವರ್ಗೀಕೃತ ವೀರ್ಯ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.
Vijaya Karnataka Web Cow


ಜಾನುವಾರು ಮಾರುಕಟ್ಟೆಯಲ್ಲಿ ಹಸುವಿಗೆ 90% ಕ್ಕಿಂತ ಹೆಚ್ಚು ಬೇಡಿಕೆ ಇದೆ. ಎತ್ತುಗಳನ್ನು ಕೇವಲ ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದ್ದು ಅವುಗಳ ಬೇಡಿಕೆ 10% ಕ್ಕಿಂತ ಕಡಿಮೆ ಇದೆ.

ಇದಕ್ಕಾಗಿ ಪ್ರಯೋಗಶಾಲೆ ಸ್ಥಾಪಿಸಲು ಅಮೇರಿಕಾ ಮೂಲದ ಕಂಪನಿಯೊಂದರ ಜತೆ ಸರಕಾರ ಒಪ್ಪಂದ ಮಾಡಿಕೊಂಡಿದ್ದು, ದೇಶದಲ್ಲಿನ ಟಾಪ್ 10 ವೀರ್ಯ ಕೇಂದ್ರಗಳಲ್ಲಿ ಒಂದಾದ ಭೋಪಾಲ್ ಕೇಂದ್ರ ವೀರ್ಯ ಕೇಂದ್ರದಲ್ಲಿ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.

"ಲಿಂಗ ವರ್ಗೀಕೃತ ವೀರ್ಯ ತಂತ್ರಜ್ಞಾನವನ್ನು 8 ತಿಂಗಳೊಳಗೆ ರಾಜ್ಯದಲ್ಲಿ ಪರಿಚಯಿಸುತ್ತೇವೆ. ಇದು ಬೀದಿ ದನಗಳ ನಿಯಂತ್ರಣಕ್ಕೆ ಸಹಾಯಕವಾಗಲಿದೆ. ಜತೆಗೆ ಜಾನುವಾರು ಸಾಕಣೆದಾರರಿಗೆ ಲಿಂಗ ನಿರ್ಧರಿಸುವ ಆಯ್ಕೆಯನ್ನು ನೀಡುತ್ತದೆ. 90% ಜನರು ಎತ್ತುಗಳಿಗಿಂತ ಆಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ವರ್ಷಕ್ಕೆ 2 ಲಕ್ಷ ವರ್ಗೀಕೃತ ವೀರ್ಯ ಅಭಿವೃದ್ಧಿ ಪಡಿಸುವ ಗುರಿ ನಮ್ಮದು ಎಂದು ರಾಜ್ಯ ಜಾನುವಾರು ಮತ್ತು ಕೋಳಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್‌ಬಿಎಸ್ ಭದೋರಿಯಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ