ಆ್ಯಪ್ನಗರ

ಮ.ಪ್ರದೇಶ ಪೊಲೀಸರಿಗೆ ಹೊಸ ವರ್ಷದ ಉಡುಗೊರೆ: ವಾರದ ರಜೆ ಇನ್ನು ಕಡ್ಡಾಯ

ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಉಮಾ ಶಂಕರ್‌ ಮಿಶ್ರಾ ಅವರು ಗುರುವಾರ ತಮ್ಮ ಸೇವಾವಧಿಯ ಮೊದಲ ವಾರದ ರಜೆ ಪಡೆದುಕೊಂಡು, ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಮಧ್ಯಪ್ರದೇಶದ ಈ ತಿಂಗಳಿನಿಂದ ಪೊಲೀಸರಿಗೆ ವಾರದ ರಜೆಯ ಭಾಗ್ಯ ಸಿಕ್ಕಿದೆ.

TIMESOFINDIA.COM 4 Jan 2019, 5:46 pm
[This story originally published in Times of India on Jan 04, 2019]
Vijaya Karnataka Web police


ಭೋಪಾಲ್: ಒಂದು ವಾರ ವಾರದ ರಜೆ ಇಲ್ಲದೆ ನೀವು ಯಾವತ್ತಾದರೂ ಕೆಲಸ ಮಾಡಿದ್ದೀರಾ? ಗರಿಷ್ಠ ವಾರದ ರಜೆ ತೆಗೆದುಕೊಳ್ಳದೆ ನಿರಂತರವಾಗಿ ಎಷ್ಟು ಸಮಯ ಕೆಲಸ ಮಾಡಿದ್ದೀರಿ ನೆನಪಿದೆಯೇ? ಈ ವಿಚಾರ ಈಗ ಯಾಕೆ ಎಂದರೆ, ಮಧ್ಯಪ್ರದೇಶದಲ್ಲಿ ಕಳೆದ 38 ವರ್ಷಗಳಿಂದ ಪೊಲೀಸ್‌ ಸೇವೆಯಲ್ಲಿರುವ ಉಮಾ ಶಂಕರ್‌ ಮಿಶ್ರ ಇದೇ ಮೊದಲ ಬಾರಿಗೆ ವಾರದ ರಜೆ ಸಿಕ್ಕಿದೆ.

ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಉಮಾ ಶಂಕರ್‌ ಮಿಶ್ರಾ ಅವರು ಗುರುವಾರ ತಮ್ಮ ಸೇವಾವಧಿಯ ಮೊದಲ ವಾರದ ರಜೆ ಪಡೆದುಕೊಂಡು, ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಕೇವಲ ಇವರೊಬ್ಬರೇ ಅಲ್ಲ, ಮಧ್ಯಪ್ರದೇಶದ ಈ ತಿಂಗಳಿನಿಂದ ಪೊಲೀಸರಿಗೆ ವಾರದ ರಜೆಯ ಭಾಗ್ಯ ಸಿಕ್ಕಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ, ಪೊಲೀಸರಿಗೆ ವಾರದ ರಜೆ ಕಡ್ಡಾಯ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಈ ವರೆಗೆ ಮಧ್ಯಪ್ರದೇಶ ಪೊಲೀಸರಿಗೆ ಈ ವರೆಗೆ ಗಳಿಕೆ ರಜೆ ಹಾಗೂ ಸಾಮಾನ್ಯ ರಜೆ (ಸಿಎಲ್‌) ಗಳಿದ್ದವು. ಆದರೆ ವಾರದ ರಜೆ ಇರಲಿಲ್ಲ. ಪೊಲೀಸರಿಗೆ ಸರಕಾರ ಇನ್ನು ವಾರದ ರಜೆ ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ.

56 ವರ್ಷದ ಮಿಶ್ರಾ, '1981ರಲ್ಲಿ ನಾನು ಪೊಲೀಸ್‌ ಸೇವೆಗೆ ಸೇರಿದ್ದೇನೆ. ಆ ಬಳಿಕ ಇದೇ ಮೊದಲ ಬಾರಿಗೆ ನನಗೆ ವಾರದ ರಜೆ ಸಿಕ್ಕಿದೆ. ಸದಾ ಒತ್ತಡದಿಂದ ಸಾಗುವ ದಿನಕ್ಕೆ ಒಂದು ದಿನ ರಜೆ ಅಗತ್ಯ. ಮನಸ್ಸು ನಿರಾಳವಾಗಲು ಸಹಕಾರಿಯಾಗಿದೆ. ಇಡೀ ದಿನ ನಾನು ಕುಟುಂಬದೊಂದಿಗೆ ಕಳೆದಿದ್ದೇನೆ' ಎಂದು ಅವರು ನೀಡಿದ್ದಾರೆ.

18 ವರ್ಷ ವಯಸ್ಸಿನಲ್ಲಿ ನಾನು ಸೇವೆಗೆ ಸೇರಿದ್ದೆ. ಈಗ ನನಗೆ 51 ವರ್ಷ. 33 ವರ್ಷದ ಸೇವಾವಧಿಯಲ್ಲಿ ಒಂದು ದಿನವೂ ವಾರದ ರಜೆ ಎಂಬುದು ಇರಲಿಲ್ಲ. ಇಂದು ವಾರದ ರಜೆ ಸಿಕ್ಕಿರುವುದು ಅತೀವ ಸಂತಸ ತಂದಿದೆ ಎಂದು ಹೆಡ್‌ ಕಾನ್‌ಸ್ಟೇಬಲ್‌ ಹರೀಶ್‌ ಚಂದ್ರ ಕೌರವ್‌ ಹೇಳಿದ್ದಾರೆ.

ಗುರುವಾರ ವಿವಿಧ ಭಾಗದಲ್ಲಿನ ಠಾಣೆಗಳಲ್ಲಿರುವ ಒಟ್ಟಾರೆ 425 ಪೊಲೀಸರಿಗೆ ವಾರದ ರಜೆ ನೀಡಲಾಗಿದೆ ಎಂದು ಭೋಪಾಲ್‌ನ ಡಿಐಜಿ ಧರ್ಮೇಂದ್ರ ಚೌದರಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ