ಆ್ಯಪ್ನಗರ

ಬಿಡುಗಡೆಯ ದಿನವೇ ಎಂಫೋನ್ ನಿರ್ದೇಶಕರ ಬಂಧನ

ಐ ಪೋನ್‌ಗೆ ಸಾಟಿ ಎಂಬಂತೆ ಎಂಫೋನ್ ಎಂಬ ಮೊಬೈಲ್ ಬಿಡುಗಡೆಯಾಗಲು ಇನ್ನು ಕೆಲವೇ ಕ್ಷಣಗಳಿರುವಾಗ ಕಂಪನಿಯ ನಿರ್ದೇಶಕರನ್ನು ಇಲ್ಲಿನ ಪೊಲೀಸರು ಹಣಕಾಸು ಅವ್ಯವಹಾರದ ಆರೋಪದ ಮೇಲೆ ಬಂಧಿಸಿದ್ದಾರೆ.

ಏಜೆನ್ಸೀಸ್ 2 Mar 2016, 4:50 pm
ಕೊಚಿನ್: ಐ ಪೋನ್‌ಗೆ ಸಾಟಿ ಎಂಬಂತೆ ಎಂಫೋನ್ ಎಂಬ ಮೊಬೈಲ್ ಬಿಡುಗಡೆಯಾಗಲು ಇನ್ನು ಕೆಲವೇ ಕ್ಷಣಗಳಿರುವಾಗ ಕಂಪನಿಯ ನಿರ್ದೇಶಕರನ್ನು ಇಲ್ಲಿನ ಪೊಲೀಸರು ಹಣಕಾಸು ಅವ್ಯವಹಾರದ ಆರೋಪದ ಮೇಲೆ ಬಂಧಿಸಿದ್ದಾರೆ.
Vijaya Karnataka Web mphone directors arrested for fraud
ಬಿಡುಗಡೆಯ ದಿನವೇ ಎಂಫೋನ್ ನಿರ್ದೇಶಕರ ಬಂಧನ


ಆಗಸ್ಟೈನ್ ಸಹೋದರರು ಎಂದೇ ಖ್ಯಾತರಾದ ಆ್ಯಂಟೋ ಆಗಸ್ಟೈನ್ ಮತ್ತು ಜೊ ಸೆಕುಟ್ಟಿ ಆಗಸ್ಟೈನ್ ಬಂಧಿತರು.

1.68 ಕೋಟಿ ರೂ. ಸಾಲ ತೆಗೆಯಲು ಇಲ್ಲಿನ ಫತಡಿಪ್ಪಲಮ್ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ನಕಲಿ ದಾಖಲೆ ನೀಡಿದ್ದಾರೆಂದು ಆರೋಪಿಸಿ, ಉಭಯರ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ಪೊಲೀಸರು ಫೋನ್ ಬಿಡುಗಡೆಯಾಗುವ ಸ್ಥಳಕ್ಕೇ ಕರೆದುಕೊಂಡು ಹೋಗಿದ್ದು ವಿವಾದಕ್ಕೆ ಕಾರಣವಾಗಿದೆ. ಆದರೆ, ಪೊಲೀಸರು ಅಗತ್ಯ ಸಾಕ್ಷಿಗಳಿಗಾಗಿ ಬಂಧಿತರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು ಎಂದಿದ್ದಾರೆ.

ನಂತರ ಕಲಾಮಸ್ಸರಿ ಠಾಣೆಯಲ್ಲಿ ಬಂಧನವನ್ನು ದಾಖಲಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಮುಂಚೆ ಈ ಸಹೋದರರ ಮಾಲೀಕತ್ವದ ಏಷ್ಯಾ ಮೋಟಾರ್ ವರ್ಕ್ಸ್ ಲಿಮಿಟೆಡ್‌ ಮೇಲೆ ಕಲಾಮಸ್ಸರಿ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ತ್ರಾವಂಕೂರ್‌ನಿಂದ 13 ಕೋಟಿ ರೂ. ಅಡಮಾನ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸದ ಕಾರಣ ದೂರು ದಾಖಲಾಗಿದೆ. ಮತ್ತೆ ಇದೇ ಆಸ್ತಿಯನ್ನು ಅಡಮಾನವಾಗಿಟ್ಟು, ಬ್ಯಾಂಕ್ ಆಫ್ ಬರೋಡಾದಿಂದಲೂ ಸಾಲ ತೆಗೆದುಕೊಂಡಿದ್ದು, ಕೆಲವು ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿ, ಈ ಬ್ಯಾಂಕ್ ಸಹ ದೂರು ದಾಖಲಿಸಿದೆ, ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ