ಆ್ಯಪ್ನಗರ

ಕರಸೇವಕರ ಹತ್ಯೆ ಸಮರ್ಥಿಸಿಕೊಂಡ ಮುಲಾಯಂ

1990ರಲ್ಲಿ ಅಯೋಧ್ಯೆಯತ್ತ ಪಾದಯಾತ್ರೆ ಹೊರಟಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಆದೇಶಿಸಿದ್ದ ತಮ್ಮ ನಡೆಯನ್ನು ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಮುಲಾಯಂ ...

Agencies 22 Nov 2017, 10:22 pm

ಲಖನೌ: 1990ರಲ್ಲಿ ಅಯೋಧ್ಯೆಯತ್ತ ಪಾದಯಾತ್ರೆ ಹೊರಟಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಆದೇಶಿಸಿದ್ದ ತಮ್ಮ ನಡೆಯನ್ನು ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್‌ ಯಾದವ್‌ ಬುಧವಾರ ಸಮರ್ಥಿಸಿಕೊಂಡಿದ್ದಾರೆ.

Vijaya Karnataka Web mulayam singh yadav justifies police firing on kar sevaks in 1990
ಕರಸೇವಕರ ಹತ್ಯೆ ಸಮರ್ಥಿಸಿಕೊಂಡ ಮುಲಾಯಂ


ದೇಶದ ಏಕತೆ ಮತ್ತು ಸಮಗ್ರತೆಗಾಗಿ ಇನ್ನೂ ಹೆಚ್ಚಿನ ಜನರನ್ನು ಕೊಲ್ಲುವ ಅಗತ್ಯವಿದ್ದರೆ, ಭದ್ರತಾ ಪಡೆಗಳು ಅದನ್ನೂ ಮಾಡಿ ತೀರುತ್ತಿದ್ದವು ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದ ಮುಲಾಯಂ, 1990, ಅ.30ರಂದು ಅಯೋಧ್ಯೆಯಲ್ಲಿ ನಡೆದ ಪೊಲೀಸ್‌ ಫೈರಿಂಗ್‌ನಲ್ಲಿ 28 ಕರಸೇವಕರು ಸಾವನ್ನಪ್ಪಿದ್ದಾಗಿ ತಿಳಿಸಿದರು.

ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿ ಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್‌ನ ಕರೆ ಮೇರೆಗೆ ದೇಶಾದ್ಯಂತದಿಂದ ಲಕ್ಷಾಂತರ ಕರಸೇವಕರು ಬಂದಿದ್ದರು. ಈ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಫೈರಿಂಗ್‌ ನಡೆಸಲು ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಆದೇಶಿಸಿದ್ದರು.

ಈ ಫೈರಿಂಗ್‌ನಿಂದ ರಾಜ್ಯದ ಶೇ.20ರಷ್ಟಿರುವ ಮುಸ್ಲಿಮರು ಯಾದವ್‌ರನ್ನು 'ಮುಲ್ಲಾ ಮುಲಾಯಂ' ಎಂದು ಗುರುತಿಸಲಾರಂಭಿಸಿದರು.

''ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಒಮ್ಮೆ ಚರ್ಚಿಸುವಾಗ ಅಯೋಧ್ಯೆ ಗಲಭೆಯಲ್ಲಿ 56 ಜನ ಹತ್ಯೆಯಾಗಿದ್ದಾಗಿ ಹೇಳಿದರು. ಆದರೆ, ನಿಜವಾಗಿ 28 ಜನ ಮಾತ್ರ ಸತ್ತಿದ್ದರು. ಅವರೆಲ್ಲರಿಗೂ ನನ್ನದೇ ಆದ ರೀತಿಯಲ್ಲಿ ಸಹಾಯ ಮಾಡಿದ್ದೇನೆ,'' ಎಂದು ಯಾದವ್‌ ಹೇಳಿದ್ದಾರೆ.

ಇಂದಿಗೂ ಎಸ್‌ಪಿಗೆ ಮುಸ್ಲಿಮರ ಬೆಂಬಲವಿದೆ ಎಂದ ಅವರು, ''ಆದರೆ ಅವರನ್ನು ಮತಕ್ಕಾಗಿ ಕರೆತರದಿರುವುದು ಪಕ್ಷ ದ ತಪ್ಪು. ಹಿಂದೆ ನನ್ನನ್ನು ಕೊಲೆಗಾರ ಎಂದು ಪ್ರತಿಪಕ್ಷ ಗಳು ಕರೆದಾಗಲೂ, ಪಕ್ಷ ವು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈಗ 403 ಸೀಟುಗಳಲ್ಲಿ ಕೇವಲ 47 ಸೀಟು ಗೆದ್ದಿರುವುದು ನಾಚಿಕೆಯ ಸಂಗತಿ,'' ಎಂದು ಎಸ್‌ಪಿ ನಾಯಕ ಹೇಳಿದರು.

Mulayam Singh Yadav justifies police firing on kar sevaks in 1990

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ