ಆ್ಯಪ್ನಗರ

ಹಿಮಾಚಲ ಪ್ರದೇಶ ಚುನಾವಣೆ ವೇಳಾಪಟ್ಟಿ ಘೋಷಣೆಗೆ ಹಲವು ಕಾರಣ: ಆಯೋಗ

ಕೊನೆಗೂ ಚುನಾವಣೆ ಆಯೋಗ ಸ್ಪಷ್ಟನೆ ನೀಡಿದೆ.

TNN 23 Oct 2017, 4:47 pm
ಹೊಸದಿಲ್ಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಾಗಿನಿಂದಲೂ ಹಲವಾರು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ.
Vijaya Karnataka Web multiple factors led poll panel to hold himachal elections earlier cec
ಹಿಮಾಚಲ ಪ್ರದೇಶ ಚುನಾವಣೆ ವೇಳಾಪಟ್ಟಿ ಘೋಷಣೆಗೆ ಹಲವು ಕಾರಣ: ಆಯೋಗ


ಗುಜರಾತ್ ಚುನಾವಣೆ ವೇಳಾಪಟ್ಟಿ ಪ್ರಕಟಸಿದೇ ಕೇವಲ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಪ್ರಕಟಿಸಿದ್ದಕ್ಕೆ ಆಯೋಗದ ಮೇಲೆ ಪ್ರತಿಪಕ್ಷಗಳು ಟೀಕೆಗಳ ಸುರಿಮಳೆಗರೆದಿವೆ.

ಇದಕ್ಕೆ ಕೊನೆಗೂ ಪ್ರತಿಕ್ರಿಯೆ ನೀಡಿರುವ ಮುಖ್ಯ ಚುನಾವಣೆ ಆಯುಕ್ತ ಅಚಲ್‌ ಕುಮಾರ್‌ ಜೋತಿ, ವಾತಾವರಣ, ಪ್ರಾಕೃತಿಕ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಹಾಗೂ ಇನ್ನೂ ಹಲವಾರು ಕಾರಣಗಳಿಗಾಗಿ ಹಿಮಾಚಲ ಪ್ರದೇಶ ಚುನಾವಣೆಗೆ ದಿನಾಂಕ ಘೋಷಿಸಲಾಗಿದೆ ಎಂದರು.

ನವೆಂಬರ್‌ ಒಂದನೇ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಸಬೇಕೆಂದು ಪ್ರತಿಪಕ್ಷಗಳು ಹಾಗೂ ಸ್ಥಳೀಯ ಆಡಳಿತಗಳು ಮನವಿ ಮಾಡಿದ್ದವು. ನವೆಂಬರ್‌ ಎರಡನೇ ವಾರದ ನಂತರ ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗುವ ಸಾಧ್ಯತೆಗಳು ಹೆಚ್ಚು ಎಂದು ತಿಳಿಸಿದ್ದವು ಎಂದು ಎಕೆ ಜೋತಿ ತಿಳಿಸಿದ್ದಾರೆ.

ಮತ್ತೊಂದು ಪ್ರಮುಖ ಕಾರಣ ಎಂದರೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ನೆರೆ ರಾಜ್ಯಗಳಲ್ಲ. ಒಂದು ರಾಜ್ಯದ ಮತದಾನ ಮಾದರಿ ಮತ್ತೊಂದು ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಹೀಗಾಗಿ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆಯನ್ನು ಡಿಸೆಂಬರ್‌ 18ಕ್ಕೆ ನಿಗದಿ ಮಾಡಲಾಯಿತು ಎಂದರು.

ಗುಜರಾತ್‌ ವಿಧಾನಸಭೆ ಚುನಾವಣೆಯನ್ನು ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆ ನಡೆಯುವ ಮುನ್ನವೇ ಪೂರ್ಣಗೊಳಿಸಲಾಗುತ್ತದೆ ಎಂದು ಜೋತಿ ಸ್ಪಷ್ಟಪಡಿಸಿದರು.

ಗುಜರಾತ್‌ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಮಸ್ಯೆ ಉಂಟಾಯಿತು ಎಂದು ಚುನಾವಣೆ ಆಯುಕ್ತರು ತಿಳಿಸಿದರು.

ಚುನಾವಣೆ ಆಯೋಗದ ಎದುರು ಪ್ರಾರ್ಥಿಸಬೇಕೆ? ಚಿದಂಬರಂ ಪ್ರಶ್ನೆ

Multiple factors led poll panel to hold Himachal elections earlier: CEC

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ