ಆ್ಯಪ್ನಗರ

ಆಜಾನ್‌ ವಿರುದ್ದ ಗುಡುಗಿದ ಸೋನು ನಿಗಮ್‌ ಮನೆಗೆ ಭದ್ರತೆ

ಆಜಾನ್‌ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ನಿಗಮ್‌ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 19 Apr 2017, 10:43 am
ಮುಂಬಯಿ: ಮಸೀದಿಗಳಲ್ಲಿ ಮೊಳಗುವ ಆಜಾನ್‌ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಗಾಯಕ ಸೋನು ನಿಗಮ್‌ ಅವರ ಮುಂಬಯಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
Vijaya Karnataka Web mumbai police beefs up security outside sonu nigams residence
ಆಜಾನ್‌ ವಿರುದ್ದ ಗುಡುಗಿದ ಸೋನು ನಿಗಮ್‌ ಮನೆಗೆ ಭದ್ರತೆ


ನಾನು ಮುಸ್ಲಿಮನಲ್ಲ. ಆದರೂ, ಮಸೀದಿ ಧ್ವನಿ ವರ್ಧಕದ ಶಬ್ದದಿಂದಲೇ ಎಚ್ಚರಗೊಳ್ಳುತ್ತೇನೆ. ಧಾರ್ಮಿಕತೆಯ ಬಲವಂತದ ಹೇರಿಕೆ. ಗೂಂಡಾಗಿರಿ ಎಂದು ಸೋನು ನಿಗಮ್‌ ಟ್ವೀಟ್‌ ಮಾಡಿದ್ದರು.



ಸೋನು ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿದ್ದು, ಈಗ ಅವರ ನಿವಾಸ ಹೊರಗೆ ಪೊಲೀಸ್‌ ಸರ್ಪಗಾವಲಿದೆ.

ಸೋನು ಟ್ವೀಟ್‌ :

God bless everyone. I'm not a Muslim and I have to be woken up by the Azaan in the morning. When will this forced religiousness end in India — Sonu Nigam (@sonunigam) April 16, 2017 ''ದೇವರು ಎಲ್ಲರನ್ನೂ ಆಶೀರ್ವದಿಸಲಿ. ನಾನು ಮುಸ್ಲಿಂ ಅಲ್ಲ. ಆದರೂ ಪ್ರತಿ ಬೆಳಗ್ಗೆ ಆಜಾನ್‌ ಸದ್ದಿಗೆ ಏಳಬೇಕಾಗಿದೆ. ಭಾರತದಲ್ಲಿ ಹೀಗೆ ಒತ್ತಾಯಪೂರ್ವಕವಾಗಿ ಧರ್ಮವನ್ನು ಹೇರುವುದು ಯಾವಾಗ ಕೊನೆಗೊಳ್ಳುತ್ತದೆ?,'' ಎಂದು ಸೋನು ಪ್ರಶ್ನಿಸಿದ್ದಾರೆ.

ಮತ್ತೊಂದು ಸಂದೇಶದಲ್ಲಿ ''ಇಷ್ಟಕ್ಕೂ ಮೊಹಮ್ಮದ್ದರು ಇಸ್ಲಾಂ ಧರ್ಮ ಸ್ಥಾಪಿಸುವಾಗ ವಿದ್ಯುತ್‌ ಇರಲಿಲ್ಲ'' ಎಂದಿರುವ ಅವರು, ಆಗ ಇಲ್ಲದ ಧ್ವನಿವರ್ಧಕ ಈಗೇಕೆ ಎಂಬ ಪ್ರಶ್ನೆಯೆತ್ತಿದ್ದಾರೆ.

'ಎಡಿಸನ್‌ ಬಳಿಕವಷ್ಟೇ ಹುಟ್ಟಿಕೊಂಡ ಇಂಥ ಕರ್ಕಶವನ್ನು ನಾನೇಕೆ ಅನುಭವಿಸಬೇಕು? ಯಾವುದೇ ಮಂದಿರ ಅಥವಾ ಗುರುದ್ವಾರಗಳು ಧರ್ಮವನ್ನು ಪಾಲಿಸದ ಜನರನ್ನೆಬ್ಬಿಸಲು ವಿದ್ಯುತ್‌ ಧ್ವನಿವರ್ಧಕ ಬಳಸುವುದಿಲ್ಲ. ಹಾಗಿದ್ದರೆ ಇದೇಕೆ ಹೀಗೆ?,'' ಎಂದು ಸೋನು ಕೇಳಿದ್ದಾರೆ. 43ರ ಗಾಯಕನ ಟ್ವೀಟ್‌ಗಳು ಎಲ್ಲೆಡೆ ಚರ್ಚೆ, ವಿವಾದ ಹುಟ್ಟುಹಾಕಿವೆ.

sonu nigam: security has been reportedly beefed up by the Mumbai Police outside the singer's house. According to reports, the Mumbai Police has deployed security outside his Versova bungalow, Namah.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ