ಆ್ಯಪ್ನಗರ

ಮುಂಬಯಿ ಪೊಲೀಸರ ಮಾನವೀಯತೆ: ರಕ್ತದಾನ ಮಾಡಿ ಮಹಿಳೆಗೆ ನೆರವಾದ ಪೇದೆ

ಬಿ ಪಾಸಿಟಿವ್‌ ರಕ್ತದಾನ ಮಾಡಿದ ಪೊಲೀಸ್‌ ಸಿಬ್ಬಂದಿ

Vijaya Karnataka Web 27 Mar 2018, 10:04 pm
ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯ ಪೊವೈನಲ್ಲಿ ಪೊಲೀಸರು ಮಾನವೀಯತೆ ಮೆರೆದು ಮಹಿಳೆಯೊಬ್ಬರಿಗೆ ನೆರವಾಗಿದ್ದಾರೆ.
Vijaya Karnataka Web mumbai police constable donates blood saves life
ಮುಂಬಯಿ ಪೊಲೀಸರ ಮಾನವೀಯತೆ: ರಕ್ತದಾನ ಮಾಡಿ ಮಹಿಳೆಗೆ ನೆರವಾದ ಪೇದೆ


ಪೊವೈನಲ್ಲಿ ತರಕಾರಿ ಮಾರುತ್ತಿದ್ದ ನಿಲೇಸ್‌ ನಾಗೆ ಎಂಬುವವರ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಹಿರಾನ್‌ದಾನಿ ಆಸ್ಪತ್ರೆಗೆ ಸೇರಿಸಲಾಯಿತು.

ಐಐಟಿ ಪೊಲೀಸ್‌ ಚೌಕಿಯಲ್ಲಿದ್ದ ಪೊಲೀಸರ ನೆರವಿನೊಂದಿಗೆ ಈಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.

ಆಕೆಗೆ ಬಿ ಪಾಸಿಟಿವ್‌ ರಕ್ತ ಬೇಕಾಗಿತ್ತು. ಆದರೆ ರಕ್ತಬ್ಯಾಂಕ್‌ನಲ್ಲಿ ಅದು ಖಾಲಿಯಾಗಿತ್ತು.

ಕೂಡಲೇ ಗಣೇಶ್‌ ಕಾಟೆ ಎಂಬ ಪೊಲೀಸ್‌ ಪೇದೆ ನೆರವಿಗೆ ಬಂದರು. ವೈದ್ಯರ ಜತೆ ಸಮಾಲೋಚನೆ ನಡೆಸಿದ ನಂತರ ಬಿ ಪಾಸಿಟಿವ್‌ ರಕ್ತವನ್ನು ನೀಡಿ ಮಹಿಳೆಯ ಪ್ರಾಣ ಉಳಿಸಿದರು.

ಗಣೇಶ್‌ ಕಾಟೆ ಅವರ ಮಾನವೀಯ ಹಾಗೂ ಸಾಮಾಜಿಕ ಕಾರ್ಯಕ್ಕೆ ಇಡೀ ಪೊಲೀಸ್‌ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.



ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ