ಆ್ಯಪ್ನಗರ

ನಕಲಿ ಟಿಆರ್‌ಪಿ ಹಗರಣ, ಮುಂಬಯಿ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಹಗರಣ ಸಂಬಂಧ ​​ಅಪರಾಧ ಗುಪ್ತಚರ ವಿಭಾಗವು ರಿಪಬ್ಲಿಕ್‌ ಟಿವಿಯ ಡಿಸ್ಟ್ರಿಬ್ಯೂಷನ್‌ ಮುಖ್ಯಸ್ಥ , ಇತರ ಚಾನೆಲ್‌ಗಳ ಇಬ್ಬರು ಸೇರಿದಂತೆ ಒಟ್ಟು 12 ಜನರನ್ನು ಬಂಧಿಸಿದೆ. ಇ.ಡಿ ಕೂಡ ಅಕ್ರಮ ಹಣ ವರ್ಗಾವಣೆ ಸಂಬಂಧ ದೂರು ದಾಖಲಿಸಿಕೊಂಡು ಈ ಹಗರಣದಲ್ಲಿ ತನಿಖೆ ನಡೆಸುತ್ತಿದೆ.

Agencies 24 Nov 2020, 8:51 pm
ಮುಂಬಯಿ: ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ)ಗಳನ್ನು ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡುತ್ತಿದ್ದ ದೊಡ್ಡ ಹಗರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ.
Vijaya Karnataka Web TRP scam


ಹಗರಣ ಸಂಬಂಧ ಅಪರಾಧ ಗುಪ್ತಚರ ವಿಭಾಗವು ರಿಪಬ್ಲಿಕ್‌ ಟಿವಿಯ ಡಿಸ್ಟ್ರಿಬ್ಯೂಷನ್‌ ಮುಖ್ಯಸ್ಥ , ಇತರ ಚಾನೆಲ್‌ಗಳ ಇಬ್ಬರು ಸೇರಿದಂತೆ 12 ಜನರನ್ನು ಬಂಧಿಸಿದೆ. ಜಾರಿ ನಿರ್ದೇಶನಾಲಯ ಕೂಡ ಅಕ್ರಮ ಹಣ ವರ್ಗಾವಣೆ ಸಂಬಂಧ ದೂರು ದಾಖಲಿಸಿಕೊಂಡು ಈ ಹಗರಣದಲ್ಲಿ ತನಿಖೆ ನಡೆಸುತ್ತಿದೆ.

ಟಿಆರ್‌ಪಿ ಹಗರಣ: ರಿಪಬ್ಲಿಕ್‌ ಟಿವಿ ಚೀಫ್‌ ಡಿಸ್ಟ್ರಿಬ್ಯೂಟರ್‌ ಬಂಧನ
ಕಳೆದ ತಿಂಗಳು ಹನ್ಸಾ ರಿಸರ್ಚ್‌ ಸಮೂಹದ ಮೂಲಕ ಬ್ರಾಡ್‌ಕ್ಯಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಟಿಆರ್‌ಪಿ ಮಾರ್ಪಾಡು ಅಪರಾಧದ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ವೀಕ್ಷಕರ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಿ ಕುಟುಂಬವಾರು ದಾಖಲೆಗಳನ್ನು ಬಾರ್ಕ್‌ಗೆ ಒದಗಿಸುವ ಹೊಣೆಯನ್ನು ಹನ್ಸಾ ಸಮೂಹಕ್ಕೆ ನೀಡಲಾಗಿತ್ತು. ಆದರೆ ತನ್ನ ಬೆನ್ನ ಹಿಂದೆಯೇ ಅಕ್ರಮ ಜಾಲವೊಂದು ಕಾರ್ಯನಿರ್ವಹಿಸುತ್ತಿರುವುದನ್ನು ಹನ್ಸಾ ಸಮೂಹ ಕಂಡುಕೊಂಡಿತ್ತು. ಚಾನೆಲ್‌ಗಳ ಆದಾಯ ಹೆಚ್ಚಳಕ್ಕೆ ಟಿಆರ್‌ಪಿ ಪ್ರಮುಖ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ