ಆ್ಯಪ್ನಗರ

ರಿಪಬ್ಲಿಕ್ ಟಿವಿ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಿದ ಮುಂಬೈ ಪೊಲೀಸರು

ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್‌ ನಾರಾಯಣಸ್ವಾಮಿ, ಡೆಪ್ಯುಟಿ ಎಡಿಟರ್‌ ಶಾವನ್‌ ಸೆನ್‌, ನಿರೂಪಕಿ ಶಿವಾನಿ ಗುಪ್ತಾ, ಡೆಪ್ಯುಟಿ ನ್ಯೂಸ್‌ ಎಡಿಟರ್‌ ಸಾಗರಿಕಾ ಮಿತ್ರಾ ಸೇರಿದಂತೆ ಹಲವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

Vijaya Karnataka 25 Oct 2020, 7:03 am
ಮುಂಬಯಿ: ನಗರ ಪೊಲೀಸ್‌ ಪಡೆಯಲ್ಲಿ ಅಸಮಾಧಾನ ಸೃಷ್ಟಿಸುವ ಯತ್ನದ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಸಂಪಾದಕೀಯ ತಂಡದ ವಿರುದ್ಧ ಮುಂಬಯಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Vijaya Karnataka Web remote


ವಿನಾಕಾರಣ ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಿಪಬ್ಲಿಕ್‌ ಸುದ್ದಿವಾಹಿನಿ ತಂಡ ವರದಿ ಮಾಡುತ್ತಿದೆ. ಈ ಮೂಲಕ ಪೊಲೀಸ್‌ ತಂಡದಲ್ಲಿ ಅಸಮಾಧಾನ ಹುಟ್ಟುಹಾಕಲಾಗುತ್ತಿದೆ. ಮುಂಬಯಿ ಪೊಲೀಸರ ಘನತೆಗೆ ಧಕ್ಕೆತರುವ ಯತ್ನವನ್ನೂ ಮಾಡಲಾಗಿದೆ ಎಂದು ವಿಶೇಷ ತಂಡದ ಸಬ್‌ ಇನ್ಸ್‌ಪೆಕ್ಟರ್‌ ಶಶಿಕಾಂತ್‌ ಪವಾರ್‌ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಹತ್ರಾಸ್‌ಗೆ ‘ಪಿಕ್‌ನಿಕ್’ ಹಮ್ಮಿಕೊಂಡಿದ್ದ ರಾಹುಲ್‌ ಗಾಂಧಿ ಪಂಜಾಬ್ ವಿಷಯದಲ್ಲಿ ಮೌನವೇಕೆ?; ನಿರ್ಮಲಾ ಸೀತಾರಾಮನ್

ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್‌ ನಾರಾಯಣಸ್ವಾಮಿ, ಡೆಪ್ಯುಟಿ ಎಡಿಟರ್‌ ಶಾವನ್‌ ಸೆನ್‌, ನಿರೂಪಕಿ ಶಿವಾನಿ ಗುಪ್ತಾ, ಡೆಪ್ಯುಟಿ ನ್ಯೂಸ್‌ ಎಡಿಟರ್‌ ಸಾಗರಿಕಾ ಮಿತ್ರಾ ಸೇರಿದಂತೆ ಹಲವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

‘ಸ್ವಚ್ಛ ಭಾರತ್’ ಅಭಿಯಾನದಿಂದ ಪ್ರತಿ ಮನೆಗೆ ವಾರ್ಷಿಕ 53,000 ರೂಪಾಯಿ ಉಳಿತಾಯ; ಸಮೀಕ್ಷೆಯಿಂದ ಬಹಿರಂಗ..!

ನಕಲಿ ಟಿಆರ್‌ಪಿ ಹಗರಣದ ಆರೋಪದಲ್ಲಿ ಸಿಕ್ಕಿಬಿದ್ದಿರುವ ರಿಪಬ್ಲಿಕ್‌ ಟಿವಿ ತಂಡ, ಪೊಲೀಸ್‌ ವಿಚಾರಣೆ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿಯೇ ಪೊಲೀಸರನ್ನು ಗುರಿಯಾಗಿಸಿಕೊಂಡು ವರದಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ಮುಂಬಯಿ ಪೊಲೀಸ್‌ ತಂಡದಲ್ಲಿಈಗ ಎಲ್ಲವೂ ಸರಿಯಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿದೆ. ನಗರ ಪೊಲೀಸರ ವಿಶ್ವಾಸಾರ್ಹತೆಯೇ ಇಕ್ಕಟ್ಟಿಗೆ ಸಿಲುಕಿದೆ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದ್ದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ