ಆ್ಯಪ್ನಗರ

26/11 ದಾಳಿ ನಡೆಸಿದ್ದು ಪಾಕ್‌ ಉಗ್ರರೇ: ಒಪ್ಪಿಕೊಂಡ ಮಾಜಿ ಎನ್‌ಎಸ್‌ಎ

2008ರ ಮುಂಬಯಿ ದಾಳಿಯ ರೂವಾರಿಗಳು ಪಾಕಿಸ್ತಾನದವರೇ ಆಗಿದ್ದು ಅಲ್ಲಿಂದಲೇ ಪೂರ್ವತಯಾರಿ ನಡೆದಿತ್ತು ಎಂದು ಪಾಕ್‌ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹ್ಮದ್‌ ಅಲ್‌ ದುರಾನಿ ಒಪ್ಪಿಕೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 7 Mar 2017, 8:02 am
ಹೊಸದಿಲ್ಲಿ: ಮುಂಬಯಿ ಮೇಲೆ ನಡೆದ 2008ರ ಭಯೋತ್ಪಾದಕ ದಾಳಿ ಪಾಕಿಸ್ತಾನದ್ದೇ ಕೃತ್ಯ ಎಂಬುದಕ್ಕೆ ಈಗ ಮತ್ತೊಂದು ಬಲವಾದ ಪುರಾವೆ ಲಭಿಸಿದೆ.
Vijaya Karnataka Web mumbai terror attacks carried out by group based in pakistan ex pakistan nsa
26/11 ದಾಳಿ ನಡೆಸಿದ್ದು ಪಾಕ್‌ ಉಗ್ರರೇ: ಒಪ್ಪಿಕೊಂಡ ಮಾಜಿ ಎನ್‌ಎಸ್‌ಎ


ಮುಂಬಯಿ ಮೇಲೆ ಪೈಶಾಚಿಕ ಉಗ್ರ ದಾಳಿ ನಡೆಸಿದ್ದ ಪಾಕಿಸ್ತಾನದಿಂದ ಆಗಮಿಸಿದ್ದ ಉಗ್ರರ ಗುಂಪು. ಇದು ಗಡಿಯಾಚೆ ಭಯೋತ್ಪಾದನೆಗೆ ಅತ್ಯುತ್ತಮ ನಿದರ್ಶನ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹಮುದ್‌ ಅಲಿ ದುರಾನಿ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಆ ದಾಳಿಯ ಹಿಂದೆ ಪಾಕಿಸ್ತಾನ ಸರಕಾರದ ಯಾವುದೇ ಪಾತ್ರ ಇರಲಿಲ್ಲ ಎಂದು ಹೇಳುವ ಮೂಲಕ ಕಟು ಸತ್ಯ ಮರೆಮಾಚುವ ಯತ್ನ ಕೂಡ ಮಾಡಿದ್ದಾರೆ.

ಇಂತಹ ಕಟು ಸತ್ಯ ಹೇಳಿದ್ದಕ್ಕಾಗಿಯೇ ದುರಾನಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆ ಕಳೆದುಕೊಂಡಿದ್ದರು ಎಂಬುದು ಗಮನಾರ್ಹ. ಮುಂಬಯಿ ಉಗ್ರ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕ ಉಗ್ರ ಅಜ್ಮಲ್‌ ಕಸಬ್‌ ಪಾಕ್‌ ರಾಷ್ಟ್ರೀಯ ಎಂದು ಹೇಳಿದ್ದೇ ದುರಾನಿಗೆ ಮುಳುವಾಗಿತ್ತು.

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಭಯೋತ್ಪಾದನೆ ನಿಗ್ರಹ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ದುರಾನಿ, ಮುಂಬಯಿ ಮೇಲಿನ 26/11ರ ದಾಳಿಗೆ ಪಾಕಿಸ್ತಾನ ಮೂಲದ ಉಗ್ರರ ಗುಂಪೇ ಕಾರಣ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.

ಲಷ್ಕರೆ ವಿರುದ್ಧ ಕಿಡಿ

ಭಾರತ ವಿರೋಧಿ ಉಗ್ರ ದಾಳಿಗಳ ಪ್ರಮುಖ ಸಂಚುಕೋರ ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ವಿರುದ್ಧ ಮಹಮುದ್‌ ದುರಾನಿ ತೀವ್ರ ವಾಗ್ದಾಳಿ ನಡೆಸಿದರು. 'ಪಾಕಿಸ್ತಾನದ ಪಾಲಿಗೆ ಆತನೊಬ್ಬ (ಹಫಿಜ್‌) ನಿಷ್ಪ್ರಯೋಜಕ ವ್ಯಕ್ತಿ. ಮುಲಾಜಿಲ್ಲದೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ,' ಎಂದರು.

ಸದ್ಯ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಗೃಹ ಬಂಧನದಲ್ಲಿರುವ ಜೆಯುಡಿ ನಾಯಕ ಹಫಿಜ್‌ ಸಯೀದ್‌ನನ್ನು ಮರು ವಿಚಾರಣೆಗೆ ಒಳಪಡಿಸುವ ಜತೆಗೆ ಮುಂಬಯಿ ದಾಳಿ ಪ್ರಕರಣದ ಪುನರ್‌ ತನಿಖೆ ನಡೆಸುವಂತೆ ಭಾರತ ಇತ್ತೀಚೆಗೆ ಪಾಕಿಸ್ತಾನವನ್ನು ಆಗ್ರಹಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ