ಆ್ಯಪ್ನಗರ

ಬುಡಕಟ್ಟು ಬಾಲಕಿ ಜತೆ ಪ್ರೇಮ: ಮುಸ್ಲಿಂ ಯುವಕನ ಭೀಕರ ಹತ್ಯೆ

ಬುಡಕಟ್ಟು ಸಮುದಾಯದ ಬಾಲಕಿ ಜತೆ ಪ್ರೇಮ ಸಂಬಂಧ ಹೊಂದಿದ್ದ ಮುಸ್ಲಿಂ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ಭರುಚ್ ಎಂಬಲ್ಲಿ ನಡೆದಿದೆ.

TIMESOFINDIA.COM 28 Jul 2019, 11:15 am
ಅಹಮದಾಬಾದ್: ಬುಡಕಟ್ಟು ಸಮುದಾಯದ ಬಾಲಕಿ ಜತೆ ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತ ಮುಸ್ಲಿಂ ಯುವಕನನ್ನು ಅಮಾನವೀಯವಾಗಿ ಥಳಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ಭರುಚ್ ಎಂಬಲ್ಲಿ ನಡೆದಿದೆ.
Vijaya Karnataka Web muslim


ಫೈಜ್ (17) ಹಲ್ಲೆಗೊಳಗಾಗಿ ಸಾವನ್ನಪ್ಪಿರುವಯ ಯುವಕ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಿರುವ ಪೊಲೀಸರು, ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಳೆದ ಕೆಲ ದಿನಗಳಿಂದ ಫೈಜ್ ಎಂಬ ಯುವಕ ಬೋರಿದ್ರಾ ಗ್ರಾಮದ ಬಡಕಟ್ಟು ಸಮುದಾಯದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೇಮ ಸಂಬಂಧ ವಿಷಯ ತಿಳಿದು ಬಾಲಕಿಯ ಸಮುದಾಯಕ್ಕೆ ಸೇರಿದ್ದ ಪುಂಡರ ತಂಡ, ಫಜ್ ಮೇಲೆ ಕಟ್ಟಿಗೆ ಮತ್ತು ಪೈಪ್‌ನಿಂದ ಹಲ್ಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮುತಪಟ್ಟಿದ್ದಾನೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಂತ್ರಸ್ತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ