ಆ್ಯಪ್ನಗರ

ಲಾಕ್‌ಡೌನ್‌ ವೇಳೆ ಆರ್‌ಎಸ್‌ಎಸ್‌ ನೆರವಿಗೆ ಮುಸ್ಲಿಂ ಮುಖಂಡರಿಂದ ಮೆಚ್ಚುಗೆ

ಮುಸ್ಲಿಮರು ಕೂಡ ಭಾರತದ ಭಾಗವೇ ಆಗಿದ್ದು ಸಂಘದ ಸ್ವಯಂ ಸೇವಕರು ಲಾಕ್‌ಡೌನ್‌ ಸಂದರ್ಭದಲ್ಲಿಯಾವುದೇ ಭೇದಭಾವ ತೋರದೆಯೇ ನೆರವು ನೀಡಿದ್ದಾರೆ. ಈ ನೆರವಿನ ಕಾರ್ಯಗಳ ಬಗ್ಗೆ ಅನೇಕ ಮುಸ್ಲಿಂ ಮುಖಂಡರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Vijaya Karnataka Web 6 May 2020, 10:40 pm
ಹೊಸದಿಲ್ಲಿ: ಮುಸ್ಲಿಮರು ಕೂಡ ಭಾರತದ ಭಾಗವೇ ಆಗಿದ್ದು ಸಂಘದ ಸ್ವಯಂ ಸೇವಕರು ಲಾಕ್‌ಡೌನ್‌ ಸಂದರ್ಭದಲ್ಲಿಯಾವುದೇ ಭೇದಭಾವ ತೋರದೆಯೇ ನೆರವು ನೀಡಿದ್ದಾರೆ. ಈ ನೆರವಿನ ಕಾರ್ಯಗಳ ಬಗ್ಗೆ ಅನೇಕ ಮುಸ್ಲಿಂ ಮುಖಂಡರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಹ ಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
Vijaya Karnataka Web RSS


ಆನ್‌ಲೈನ್‌ ಮೂಲಕ ವಿದೇಶಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ''ಆರ್‌ಎಸ್‌ಎಸ್‌ ಮುಸ್ಲಿಮರ ವಿರೋಧಿ ಎನ್ನುವುದು ಆಧಾರಹಿತ ಆರೋಪ ಮತ್ತು ವಾಸ್ತವಕ್ಕೆ ದೂರದ ಮಾತು. ಇಂಥ ಭಾವನೆಗಳು ಸುಖಾಸುಮ್ಮನೆ ಬಿತ್ತಲಾಗುತ್ತಿದೆ.

ಶಹೀನ್‌ಬಾಗ್‌ನಲ್ಲಿ ಧರಣಿ ಕುಳಿತವರೊಂದಿಗೂ ಕೂಡ ಆರ್‌ಎಸ್‌ಎಸ್‌ ನಾಯಕರು ಮಾತುಕತೆ ನಡೆಸಿದ್ದಾರೆ. ಅಷ್ಟು ಸೌಹಾರ್ದತೆ ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಒಂದೇ ಸಮುದಾಯವನ್ನು ಗುರಿಯಾಗಿಸಿ ದೂಷಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ ನಂತರ ಹಲವು ಮುಸ್ಲಿಂ ನಾಯಕರು ಭಾಗವತ್‌ ಅವರಿಗೆ ಪತ್ರ ಬರೆದು ಅವರ ನಿಲುವನ್ನು ಸ್ವಾಗತಿಸಿದ್ದಾರೆ ಕೂಡ'', ಎಂದು ಹೊಸಬಾಳೆ ತಿಳಿಸಿದ್ದಾರೆ.

ಮೇ 8 ರಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆ ಸ್ಥಗಿತ

ದೇಶೀಯ ಆರ್ಥಿಕತೆ ಮಾದರಿ ಅಗತ್ಯ: ಕೋವಿಡ್‌-19ನಿಂದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿಭಾರತ ದೇಶೀಯ ಆರ್ಥಿಕತೆ ಮಾದರಿಯೊಂದನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವುದು ಸೂಕ್ತ. ಇದರಿಂದ ದೇಶ ಸ್ವಾಲಂಬಿಯಾಗಿ ಸ್ಥಳೀಯ ಸಂಪನ್ಮೂಲಗಳು ಮತ್ತು ಕಾರ್ಯಪಡೆಯಿಂದ ಸದೃಢವಾಗಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಜಿ' ಕೆಟಗರಿ ಸೈಟ್‌ಗೆ ಎಂದೂ ಆಸೆ ಪಡದ ನಿಸಾರ್ ಅಂದು ಮಕ್ಕಳಿಗೆ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ