ಆ್ಯಪ್ನಗರ

ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳು ಸವಿಯಲಿದ್ದಾರೆ ಮೈಸೂರಿನ ಇಡ್ಲಿ-ವಡೆ!

ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬಾರ್‌ ಸವಿಯಲಿದ್ದಾರೆ!

Agencies 13 Sep 2018, 3:16 pm
Vijaya Karnataka Web Gaganyaan
ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬಾರ್‌ ಸವಿಯಲಿದ್ದಾರೆ!

ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳ ಉಪಾಹಾರ ಸೇವನೆಯ ಮ್ಯಾಜಿಕ್‌ಗೆ ರಕ್ಷಣಾ ಇಲಾಖೆಯ ಆಹಾರ ಸಂಶೋಧನಾ ಪ್ರಯೋಗಾಲಯ(ಡಿಎಫ್‌ಆರ್‌ಎಲ್‌) ಪ್ರಮುಖ ಪಾತ್ರ ವಹಿಸುತ್ತಿದೆ.

ಸಾಂಪ್ರದಾಯಿಕ ಆಹಾರವಾದ ಇಡ್ಲಿ-ಸಾಂಬಾರ್‌, ಮಾವಿನ ಹಣ್ಣಿನ ರಸ, ಶೈತ್ಯೀಕರಿಸಿದ ಹಣ್ಣಿನ ಜ್ಯೂಸ್‌ ಮತ್ತಿತರ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್‌ ಮಾಡಿ ಪೂರೈಸುವ ಬಗ್ಗೆ ಇಸ್ರೋ ಜತೆಗೆ ಡಿಎಫ್‌ಆರ್‌ಎಲ್‌ ಮಾತುಕತೆ ನಡೆಸಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2022ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ವಡೆ, ಹಣ್ಣಿನ ರಸವನ್ನು ಸೇವಿಸಲಿದ್ದಾರೆ.

ಭಾರತೀಯ ಗಗನಯಾತ್ರಿಗಳಿಗೆ ಸಿದ್ಧಗೊಂಡಿದೆ ಹೈಟೆಕ್‌ ಕೇಸರಿ ಉಡುಗೆ!

1984ರಲ್ಲಿ ರಷ್ಯಾದ ಸೊಯುಜ್‌ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಡಿಎಫ್‌ಆರ್‌ಎಲ್‌ ಗಗನಯಾತ್ರಿಗಳಿಗೆ ಆಹಾರ ಪೂರೈಸಿತ್ತು. ಇದೀಗ ಇಸ್ರೋ ಹಮ್ಮಿಕೊಂಡಿರುವ 2022ರ ಮಾನವಸಹಿತ ಗಗನಯಾನಕ್ಕೆ ಆಹರ ಪೂರೈಸಲು ಸಿದ್ಧತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಸ್ರೋ ಮಾನವ ಸಹಿತ ಅಂತರಿಕ್ಷಯಾನಕ್ಕೆ ಜತೆಯಾಗಲಿದೆ ಫ್ರಾನ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ