ಆ್ಯಪ್ನಗರ

ವಿವಿಐಪಿ ಸೌಲಭ್ಯ ಇಲ್ಲದೆ ನಾಯ್ಡು ಪೇಚಾಟ

ತಪಾಸಣೆ ಬಳಿಕ ವಿಮಾನದವರೆಗೆ ನಾಯ್ಡು, ಇತರ ಪ್ರಯಾಣಿಕರು ಪ್ರಯಾಣಿಸಿದ ಬಸ್ಸಿನಲ್ಲಿಯೇ ತೆರಳಿದ್ದಾರೆ. 2003ರಲ್ಲಿ ಮಾವೋವಾದಿಗಳು ನಾಯ್ಡು ಮೇಲೆ ದಾಳಿಗೆ ಯತ್ನಿಸಿದ ಬಳಿಕ ಅವರಿಗೆ ಝಡ್‌+ ಶ್ರೇಣಿ ಭದ್ರತೆಯನ್ನು ಕೇಂದ್ರ ಸರಕಾರ ಒದಗಿಸಿತ್ತು.

PTI 16 Jun 2019, 5:00 am
ವಿಜಯವಾಡ: ವಿವಿಐಪಿ ಸೌಲಭ್ಯ ನಿರಾಕರಿಸಿ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಭದ್ರತಾ ತಪಾಸಣೆಗೆ ಏರ್ಪಡಿಸಲಾದ ವಿಡಿಯೊ ವೈರಲ್‌ ಆಗಿದೆ.
Vijaya Karnataka Web Chandrababu-Naidu-frisked

ತಪಾಸಣೆ ಬಳಿಕ ವಿಮಾನದವರೆಗೆ ನಾಯ್ಡು, ಇತರ ಪ್ರಯಾಣಿಕರು ಪ್ರಯಾಣಿಸಿದ ಬಸ್ಸಿನಲ್ಲಿಯೇ ತೆರಳಿದ್ದಾರೆ.
2003ರಲ್ಲಿ ಮಾವೋವಾದಿಗಳು ನಾಯ್ಡು ಮೇಲೆ ದಾಳಿಗೆ ಯತ್ನಿಸಿದ ಬಳಿಕ ಅವರಿಗೆ ಝಡ್‌+ ಶ್ರೇಣಿ ಭದ್ರತೆಯನ್ನು ಕೇಂದ್ರ ಸರಕಾರ ಒದಗಿಸಿತ್ತು. ಹಾಗಿದ್ದರೂ ವಿಐಪಿ ವಾಹನದಲ್ಲಿ ಅವರಿಗೆ ವಿಮಾನ ತಲುಪಲು ಅವಕಾಶ ನೀಡಲಾಗಿಲ್ಲ. ಇದು ಬಿಜೆಪಿ ಮತ್ತು ಆಡಳಿತಾರೂಢ ವೈಎಸ್‌ಆರ್‌ಸಿಪಿ ಹುನ್ನಾರ ಎಂದು ಟಿಡಿಪಿ ನಾಯಕ ಚಿನ್ನಾ ರಾಜಪ್ಪ ಆರೋಪಿಸಿದ್ದಾರೆ. ಸದ್ಯ ನಾಯ್ಡು ಆಂಧ್ರಪ್ರದೇಶ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರಿಗೆ ಸಂಪುಟ ಸಚಿವ ಸ್ಥಾನಮಾನವಿದ್ದರೂ ಸಾಮಾನ್ಯ ಪ್ರಯಾಣಿಕರಂತೆ ನಡೆಸಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಕೂಡ ಆರೋಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ