ಆ್ಯಪ್ನಗರ

ನಾಗಾಲ್ಯಾಂಡ್‌ ಚುನಾವಣೆ: ಎನ್‌ಡಿಪಿಪಿ ಜತೆ ಬಿಜೆಪಿ ಮೈತ್ರಿ, 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 20 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

Vijaya Karnataka Web 3 Feb 2018, 9:27 pm
ಹೊಸದಿಲ್ಲಿ: ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 20 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
Vijaya Karnataka Web nagaland polls bjp breaks alliance with npf releases list of candidates
ನಾಗಾಲ್ಯಾಂಡ್‌ ಚುನಾವಣೆ: ಎನ್‌ಡಿಪಿಪಿ ಜತೆ ಬಿಜೆಪಿ ಮೈತ್ರಿ, 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಬಿಜೆಪಿ ಮತ್ತು ನಾಗಾ ಪೀಪಲ್ಸ್‌ ಪಾರ್ಟಿ (ಎನ್‌ಪಿಎಫ್‌) 15 ವರ್ಷಗಳ ಮೈತ್ರಿ ಮುರಿದುಕೊಂಡಿರುವುದಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಕಿರಣ್‌ ರಿಜಿಜು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಎನ್‌ಪಿಎಫ್‌ ಜತೆಗಿನ ಮೈತ್ರಿ ಕಡಿದುಕೊಂಡರೂ ನ್ಯಾಷನಲ್ ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ (ಎನ್‌ಡಿಪಿಪಿ) ಜತೆಗೆ ಬಿಜೆಪಿ ಕೈಜೋಡಿಸಿದೆ.

'ನಾವು ಎನ್‌ಪಿಎಫ್‌ ಜತೆಗಿನ ಮೈತ್ರಿ ಉಳಿಸಿಕೊಳ್ಳಲು ಪ್ರಯತ್ನಪಟ್ಟೆವು. ಆದರೆ ಸ್ಥಾನಗಳ ಹಂಚಿಕೆ ವಿಚಾರ ಬಗೆಹರಿಯದೆ ಮೈತ್ರಿ ಮುರಿದುಬಿತ್ತು. ಈಗ ನಾವು ಎನ್‌ಡಿಪಿಪಿ ಜತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮೈತ್ರಿಕೂಟ ನಾಗಾಲ್ಯಾಂಡ್‌ನಲ್ಲಿ ಮುಂದಿನ ಸರಕಾರ ರಚಿಸುವುದು ಖಚಿತ ಎಂಬ ಭರವಸೆಯಿದೆ' ಎಂದು ರಿಜಿಜು ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

60 ಸದಸ್ಯರ ವಿಧಾನಸಭೆಯಲ್ಲಿ 40 ಸ್ಥಾನಗಳಲ್ಲಿ ಎನ್‌ಡಿಪಿಪಿ ಸ್ಪರ್ಧಿಸಿದರೆ, ಉಳಿದ 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತದೆ ಎಂದು ಪಿಟಿಐ ವರದಿ ತಿಳಿಸಿದೆ.

ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27ರಂದು ಚುನಾವಣೆ ನಡೆಯಲಿದ್ದು, ಮಾರ್ಚ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಲಿ ವಿಧಾನಸಭೆ ಅವಧಿ ಮಾರ್ಚ್‌ 13ಕ್ಕೆ ಕೊನೆಗೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ