ಆ್ಯಪ್ನಗರ

ನಾಯಿಮರಿಗಳಿಗೆ ನಾಮಕರಣ, ತೊಟ್ಟಿಲ ಶಾಸ್ತ್ರ: ವೈರಲ್ ಆಯ್ತು ವೀಡಿಯೋ

ಸರಂಪಲ್ಲಿ ದೇವಮ್ಮ ಎಂಬ ಮಹಿಳೆಯ ಸಾಕು ನಾಯಿ ಇತ್ತೀಚಿಗೆ 7 ಮರಿಗಳಿಗೆ ಜನ್ಮ ನೀಡಿತ್ತು. ನಾಯಿಯನ್ನು ತನ್ನ ಸ್ವಂತ ಮಗಳಂತೆ ಸಾಕಿದ್ದ ದೇವಮ್ಮ ಅದರ ಮರಿಗಳಿಗೆ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿ ಸ್ನೇಹಿತರು, ಸಂಬಂಧಿಕರು ಮತ್ತು ಗ್ರಾಮದ ಜನರನ್ನು ಆಹ್ವಾನಿಸಿದ್ದಾಳೆ.

Vijaya Karnataka Web 3 Jun 2019, 7:48 am
ಹೈದರಾಬಾದ್: ನಾಯಿ ಮನುಷ್ಯನದ್ದು ಪುರಾತನ ಕಾಲದಿಂದಲೂ ಅಪ್ಯಾಯಮಾನ ಸಂಬಂಧ. ನಿಷ್ಠೆ, ನಿಷ್ಕಲ್ಮಶ ಪ್ರೀತಿಗೆ ಹೆಸರಾದ ನಾಯಿ ತನಗೆ ಅನ್ನವಿಕ್ಕಿದವರಿಗಾಗಿ ಜೀವ ನೀಡಲು ಕೂಡ ಹಿಂದೆ ಮುಂದೆ ನೋಡದು. ಹಾಗೆಯೇ ಮನುಷ್ಯನು ಕೂಡ ನಾಯಿಯನ್ನು ತನ್ನ ಸ್ವಂತ ಸಂತಾನವೆಂಬಂತೆ ನೋಡುವ ಉದಾಹರಣೆಗಳು ಸಹ ಸಿಗುತ್ತಲೇ ಇರುತ್ತವೆ. ಇದು ಸಹ ಅಂತಹದೊಂದು.
Vijaya Karnataka Web Dog


ತೆಲಂಗಾಣದ ಸಿದ್ದಿಪೇಟ್ ಜಿಲ್ಲೆ ದುಬ್ಬಕಾದಲ್ಲಿ ಮಹಿಳೆಯೊಬ್ಬರು ತನ್ನ ಸಾಕು ನಾಯಿಯ 7 ಪುಟ್ಟ ಮರಿಗಳಿಗೆ ತೊಟ್ಟಿಲು ಶಾಸ್ತ್ರ ಮತ್ತು ನಾಮಕರಣ ಸಮಾರಂಭ ಏರ್ಪಡಿಸಿ ಸುದ್ದಿಯಾಗಿದ್ದಾರೆ.

ಸರಂಪಲ್ಲಿ ದೇವಮ್ಮ ಎಂಬ ಮಹಿಳೆಯ ಸಾಕು ನಾಯಿ ಇತ್ತೀಚಿಗೆ 7 ಮರಿಗಳಿಗೆ ಜನ್ಮ ನೀಡಿತ್ತು. ನಾಯಿಯನ್ನು ತನ್ನ ಸ್ವಂತ ಮಗಳಂತೆ ಸಾಕಿದ್ದ ದೇವಮ್ಮ ಅದರ ಮರಿಗಳಿಗೆ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿ ಸ್ನೇಹಿತರು, ಸಂಬಂಧಿಕರು ಮತ್ತು ಗ್ರಾಮದ ಜನರನ್ನು ಆಹ್ವಾನಿಸಿದ್ದಾಳೆ.


ಪುಟ್ಟ ಮರಿಗಳಿಗೆ ಹೊಸ ಬಟ್ಟೆ ತೊಡಿಸಿ , ಹಣೆಗೆ ಕುಂಕುಮ ಹಚ್ಚಿ, ಕಿವಿಯಲ್ಲಿ ಹೆಸರು ಹೇಳಿ ಜೋಳಿಗೆಯಲ್ಲಿ ಹಾಕಿ ತೂಗಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರು ತೊಟ್ಟಿಲು (ಜೋಗುಳ ) ತೂಗಿ ಹಾಡು ಹಾಡಿದರು.

ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ