ಆ್ಯಪ್ನಗರ

'ಇಂಡಿಯಾ ಗ್ಲೋಬಲ್‌ ವೀಕ್' ಉದ್ದೇಶಿಸಿ ಮಧ್ಯಾಹ್ನ 1.30ಕ್ಕೆ ನರೇಂದ್ರ ಮೋದಿ ಭಾಷಣ

ಗುರುವಾರ ಮಧ್ಯಾಹ್ನ 1.30ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಅವರು ‘ಇಂಡಿಯಾ ಇನ್‌ಕಾರ್ಪ್‌’ ಅವರು ಆಯೋಜಿಸಿರುವ ಇಂಡಿಯಾ ಗ್ಲೋಬಲ್‌ ವೀಕ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಈ ಕಾರ್ಯಕ್ರಮ ಪ್ರಪಂಚದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳನ್ನು ಒಂದುಗೂಡಿಸಲು ವೇದಿಕೆಯಾಗಲಿದೆ. ಜೊತೆಗೆ ಕೋವಿಡ್-19 ನಂತರ ಜಗತ್ತಿನ ಸ್ಥಿತಿಗತಿಯ ಬಗ್ಗೆಯೂ ಬೆಳಕು ಚೆಲ್ಲಲ್ಲಿದೆ ಎಂದಿದ್ದಾರೆ.

Agencies 9 Jul 2020, 11:49 am
ಹೊಸದಿಲ್ಲಿ: ಕೊರೊನಾ ಸೋಂಕಿನಿಂದ ವಿಶ್ವದ ಅನೇಕ ರಾಷ್ಟ್ರಗಳು ಕಂಗಾಲಾಗಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರಗಳಲ್ಲಿ ಆರ್ಥಿಕ ಪುನಶ್ಚೇತನ ಮಾಡುವ ಸಲುವಾಗಿ ಹಮ್ಮಿಕೊಂಡಿರುವ ‘ಇಂಡಿಯಾ ಗ್ಲೋಬಲ್ ವೀಕ್-2020’ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ.
Vijaya Karnataka Web NARENDRA MODI


ಮೋದಿ ಸರಕಾರ ಭಯದಿಂದ ಕಾಂಗ್ರೆಸ್‌ ವಿರುದ್ಧ ದ್ವೇಷಕಾರುತ್ತಿದೆ - ರಾಹುಲ್‌ ಗಾಂಧಿ

ಇಂದು ಮಧ್ಯಾಹ್ನ 1.30ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಅವರು ‘ಇಂಡಿಯಾ ಇನ್‌ಕಾರ್ಪ್‌’ ಅವರು ಆಯೋಜಿಸಿರುವ ಇಂಡಿಯಾ ಗ್ಲೋಬಲ್‌ ವೀಕ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಈ ಕಾರ್ಯಕ್ರಮ ಪ್ರಪಂಚದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳನ್ನು ಒಂದುಗೂಡಿಸಲು ವೇದಿಕೆಯಾಗಲಿದೆ. ಜೊತೆಗೆ ಕೋವಿಡ್-19 ನಂತರ ಜಗತ್ತಿನ ಸ್ಥಿತಿಗತಿಯ ಬಗ್ಗೆಯೂ ಬೆಳಕು ಚೆಲ್ಲಲ್ಲಿದೆ ಎಂದಿದ್ದಾರೆ.

89 ಆ್ಯಪ್‌, ಫೇಸ್‌ಬುಕ್ ಖಾತೆ ಡಿಲೀಟ್‌ ಮಾಡುವಂತೆ ಸೈನಿಕರಿಗೆ ಕಟ್ಟುನಿಟ್ಟಿನ ಸೂಚನೆ

ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 5000 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಸುಮಾರು 250 ಭಾಷಣಕಾರರು ಈ ಕಾರ್ಯಕ್ರದಲ್ಲಿ ಭಾಗಿಯಾಗಿ ಭೌಗೋಳಿಕ ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು, ಔಷಧ, ಭದ್ರತೆ, ಕಲೆ ಮತ್ತು ಸಂಸ್ಕೃತಿ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಅಲ್ಲದೇ ಭಾರತದ ಅತೀದೊಡ್ಡ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದು ಎಂದು ಹೇಳಲಾಗ್ತಿದ್ದು, ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ‘ಬಿ ದಿ ರಿವೈವಲ್ ಇಂಡಿಯಾ ಆಂಡ್ ಎ ಬೆಟರ್ ನ್ಯೂ ವರ್ಲ್ಡ್‌’ ಎಂಬ ವಿಷಯದ ಕುರಿತು ಹಲವು ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.

ರಾಷ್ಟ್ರೀಯತೆ, ಪೌರತ್ವ ವಿಷಯ ಪಠ್ಯದಿಂದ ಕೈಬಿಟ್ಟ ಸಿಬಿಎಸ್‌ಇ, ವಿಪಕ್ಷಗಳು ಕಿಡಿ!

ಇದೇ ಕಾರ್ಯಕ್ರಮದಲ್ಲಿ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ 100ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮೂವರು ಶಿಷ್ಯರು ಸಂಗೀತ ಕಾರ್ಯಕ್ರವನ್ನೂ ನಡೆಸಿಕೊಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ