ಆ್ಯಪ್ನಗರ

ವಿಶ್ವಕ್ಕೆ ಸೂಫಿ ಕೊಡುಗೆ ಅಪಾರ: ಮೋದಿ

ಸೂಫಿ ಪಂಥ ವಿಶ್ವಕ್ಕೆ ಇಸ್ಲಾಂ ನೀಡಿರುವ ಮಹತ್ವದ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಏಜೆನ್ಸೀಸ್ 18 Mar 2016, 4:00 am
ಹೊಸದಿಲ್ಲಿ: ಸೂಫಿ ಪಂಥ ವಿಶ್ವಕ್ಕೆ ಇಸ್ಲಾಂ ನೀಡಿರುವ ಮಹತ್ವದ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web narendra modi at world sufi forum
ವಿಶ್ವಕ್ಕೆ ಸೂಫಿ ಕೊಡುಗೆ ಅಪಾರ: ಮೋದಿ


ದಿಲ್ಲಿಯ ವಿಜ್ಞಾನ ಭವನದಲ್ಲಿ ಆಲ್ ಇಂಡಿಯಾ ಉಲೇಮಾ ಮಾಶೇಕ್ ಬೋರ್ಡ್ ಆಯೋಜಿಸಿದ್ದ ನಾಲ್ಕು ದಿನಗಳ ‘ವಿಶ್ವ ಸೂಫಿ ಸಭೆ’ ಉದ್ದೇಶಿಸಿ ಗುರುವಾರ ಮಾತನಾಡಿ, ಸೂಫಿ ಪಂಥ ಸಮಾಜಕ್ಕೆ ಶಾಂತಿ, ಸಾಮರಸ್ಯ ಮತ್ತು ಪ್ರೀತಿಯನ್ನು ಧಾರೆ ಎರೆದಿದೆ ಎಂದರು.

ಭಯೋತ್ಪಾದನೆ ವಿರುದ್ಧದ ಹೋರಾಟ ಎಂದರೆ ಅದು ಯಾವುದೇ ಧರ್ಮದ ವಿರುದ್ಧ ಅಲ್ಲ. ಅಮಾನವೀಯತೆ ವಿರುದ್ಧದ ಯುದ್ಧವಷ್ಟೇ, ಸೂಫಿಯಿಸಂ ಭಾರತೀಯ ಅಧ್ಯಾತ್ಮ ಹಾಗೂ ಭಾರತೀಯ ತತ್ತ್ವಗಳ ವಿಕಸನವಾಗಿದೆ. ನೀವೆಲ್ಲ ಬೇರೆ ಬೇರೆ ಪ್ರದೇಶ, ಸಂಸ್ಕೃತಿಗಳಿಂದ ಬಂದಿದ್ದೀರಿ,ಆದರೆ ಸಾಮಾನ್ಯ ನಂಬಿಕೆ ಮೇಲೆ ಇಲ್ಲಿ ಸೇರಿದ್ದೀರಿ,’’ ಎನ್ನುವ ಮೂಲಕ ಸೂಫಿ ಪಂಥದ ಗುಣಗಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ