ಆ್ಯಪ್ನಗರ

2002ರ ಗೋಧ್ರಾ ಹತ್ಯಾಕಾಂಡ ಪ್ರಕರಣ: ಅಂದಿನ ನರೇಂದ್ರ ಮೋದಿ ಸರಕಾರಕ್ಕೆ ಕ್ಲೀನ್​ಚಿಟ್

2002ರ ಗೋಧ್ರಾ ದಂಗೆ ಪ್ರಕರಣ ಸಂಬಂಧ ಗುಜರಾತ್​ನ ನರೇಂದ್ರ ಮೋದಿ ಸರಕಾರಕ್ಕೆ ನಾನಾವತಿ ಆಯೋಗ ಕ್ಲೀನ್​ಚಿಟ್​ ನೀಡಿದೆ. ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ವರದಿಯ ಅಂತಿಮ ಭಾಗವನ್ನು ಇಂದು ಮಂಡಿಸಿದರು.

Vijaya Karnataka Web 11 Dec 2019, 2:17 pm
ಗಾಂಧಿನಗರ: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣ ಸಂಬಂಧ ಗುಜರಾತ್ ನ ನರೇಂದ್ರ ಮೋದಿ ಸರಕಾರಕ್ಕೆ ನಾನಾವತಿ ಆಯೋಗ ಕ್ಲೀನ್ ಚಿಟ್ ನೀಡಿದ್ದು, ಮೋದಿ ಸಹಿತ ಇತರರು ನಿಟ್ಟುಸಿರು ಬಿಟ್ಟಿದ್ದಾರೆ.
Vijaya Karnataka Web Gujarat riots


ರಾಜ್ಯ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ದಂಗೆಗೆ ಸಂಬಂಧಿಸಿದಂತೆ ನಾನಾವತಿ ಮೆಹ್ತಾ ಆಯೋಗ ಸಿದ್ದಪಡಿಸಿರುವ ವರದಿಯನ್ನು ಮಂಡಿಸಿದರು.

ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ಸರಕಾರದ ಪಾತ್ರವಿಲ್ಲ. ಗಲಭೆ ಕುರಿತು ಸಂಜೀವ್ ಭಟ್ ಸುಳ್ಳು ಹೇಳಿದ್ದು, ಈ ಗಲಭೆ ಪೂರ್ವ ನಿಯೋಜಿತವಲ್ಲ. ಮಾತ್ರವಲ್ಲ ಈ ದಂಗೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮೋದಿ ಯತ್ನಿಸಿದ್ದರು ಎಂದು 2002ರಲ್ಲಿ ಆಡಳಿತದಲ್ಲಿದ್ದ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ.

ಗೋಧ್ರಾ ರೈಲು ಸುಟ್ಟ ಪ್ರಕರಣ: 11 ಮಂದಿಗೆ ಗಲ್ಲಿನ ಬದಲು ಜೀವಾವಧಿ ಶಿಕ್ಷೆ


ಗೋಧ್ರಾ ಹತ್ಯಾಕಾಂಡ ಘಟನೆಗೆ ಸಂಬಂಧಿಸಿ 2002ರಲ್ಲಿ ಈಗಿನ ಪ್ರಧಾನಿ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರ ಆಯೋಗವನ್ನು ರಚಿಸಿತ್ತು. ಆಯೋಗದ ಮೊದಲ ವರದಿಯನ್ನು 2009ರಲ್ಲಿ ಮಂಡನೆ ಮಾಡಲಾಗಿತ್ತು. ಮೊದಲ ವರದಿಯಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದರ ಬಗ್ಗೆ ವಿವರಿಸಲಾಗಿತ್ತು. ಯೋಚಿತ ಪಿತೂರಿಯಿಂದಾಗಿ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ 5-6 ಬೋಗಿಗಳಿಗೆ ಬೆಂಕಿ ಇಡಲಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿತ್ತು.

ಗೋಧ್ರಾ ರೈಲು ಹತ್ಯಾಕಾಂಡ: 13 ವರ್ಷಗಳ ನಂತರ ಆರೋಪಿ ಬಂಧನ

ನಂತರ ಅಂತಿಮ ವರದಿಯನ್ನು 2014ರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಜಿ ಟಿ ನಾನಾವತಿ ಹಾಗೂ ಅಕ್ಷಯ್ ಮೆಹ್ತಾ ಅವರು ಆನಂದಿ ಬೇನ್ ನೇತೃತ್ವದ ಸರಕಾರದ ಮುಂದೆ ಮಂಡಿಸಿದ್ದರು. ಅಧಿಕೃತ ಮಾಹಿತಿಯಂತೆ ಗೋಧ್ರಾ ಹತ್ಯಾಕಾಂಡ ಪ್ರತೀಕಾರಕ್ಕೆ ನಡೆದ ಗುಜರಾತ್ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಮಂದಿ ಈ ಗಲಭೆಯಲ್ಲಿ ಮೃತಪಟ್ಟಿದ್ದು, ಅನಧಿಕೃತವಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿತ್ತು.

ಗೋಧ್ರಾ ಹತ್ಯಾಕಾಂಡ ತೆರೆದಿಟ್ಟ ‘ಫೈನಲ್ ಸಲ್ಯೂಷನ್’

ಹಿಂದಿನ ರಾಜ್ಯ ಸರಕಾರಕ್ಕೆ(ಆನಂದಿ ಬೇನ್) ಈ ವರದಿ ಸಲ್ಲಿಕೆಯಾದ ಐದು ವರ್ಷಗಳ ಬಳಿಕ ಈಗಿನ ಸರಕಾರದ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ವರದಿಯ ಅಂತಿಮ ಭಾಗವನ್ನು ಇಂದು ಮಂಡಿಸಿದ್ದು, ಮೋದಿ ಸಹಿತ ಇತರರಿಗೆ ಕ್ಲೀನ್ ಚಿಟ್ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ