ಆ್ಯಪ್ನಗರ

ನೋಟ್‌ ಬ್ಯಾನ್ ಆದ ದಿನದಿಂದ 24x7 ದುಡಿಯುತ್ತಿರುವ ನಾಸಿಕ್‌ ನೋಟ್‌ ಪ್ರೆಸ್‌

ಇಡೀ ದೇಶ ನೋಟ್‌ ಬ್ಯಾನ್‌ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ನಾಸಿಕ್‌ ಪ್ರೆಸ್‌ ಮೆಷಿನ್‌ಗಳ ಸದ್ದು ಜೋರಾಗಿತ್ತು.

Maharashtra Times 8 Nov 2017, 4:45 pm
ಪುಣೆ: ಕಳೆದ ವರ್ಷ ಇದೇ ದಿನದಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಟಿವಿ ಪರದೆಯ ಮೇಲೆ ಕಾಣಿಸಿಕೊಂಡು 500, 1000 ರೂಪಾಯಿ ಮೌಲ್ಯದ ನೋಟುಗಳು ಅಮಾನ್ಯಗೊಳ್ಳಲಿವೆ ಎಂದು ಹೇಳುತ್ತಿದ್ದಂತೆ ಇಡೀ ದೇಶಕ್ಕೆ ದೇಶದಲ್ಲಿ ಶಾಕ್‌ ಆದ ಅನುಭವ. ಇದಾದ ಕೆಲವು ದಿನಗಳವರೆಗೂ ಜನರು ಎಟಿಎಂ, ಬ್ಯಾಂಕ್‌ಗಳ ಮುಂದೆ ನಿಂತಿರುವುದು ಕಂಡುಬಂದಿತ್ತು. ಆದರೆ ನಾಸಿಕ್‌ನಲ್ಲಿರುವ ಕರೆನ್ಸಿ ನೋಟು ಪ್ರೆಸ್‌ನಲ್ಲಿರುವ ಕಾರ್ಮಿಕರು ಇದ್ಯಾವ ಗೊಡವೆಗೆ ಹೋಗದೆ ಹೊಸ ನೋಟುಗಳನ್ನು ಪ್ರಿಂಟ್‌ ಮಾಡುವ ಕಾಯಕದಲ್ಲಿ ಬ್ಯುಸಿಯಾಗಿದ್ದರು.
Vijaya Karnataka Web nashik press working 24x7 from november 2016
ನೋಟ್‌ ಬ್ಯಾನ್ ಆದ ದಿನದಿಂದ 24x7 ದುಡಿಯುತ್ತಿರುವ ನಾಸಿಕ್‌ ನೋಟ್‌ ಪ್ರೆಸ್‌


ಈ ನಾಸಿಕ್‌ ಪ್ರೆಸ್‌ ಒಂದೆರಡು ದಿನವಲ್ಲ ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆ ನಡೆಸಿತ್ತು. ನವೆಂಬರ್‌ 2016 ರಿಂದ 2017ರ ಸೆಪ್ಟೆಂಬರ್‌ವರೆಗೂ ನಾಸಿಕ್‌ ಈ ನೋಟು ಮುದ್ರಾಣಾಲಯ ನಿರಂತರ ಕಾರ್ಯಾಚರಣೆ ನಡೆಸಿದೆ.

ಈ ಪ್ರೆಸ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಒಂದೇ ದಿನದಲ್ಲಿ 20.5 ಮಿಲಿಯನ್‌ ನೋಟುಗಳನ್ನು ಪ್ರಿಂಟ್‌ ಮಾಡಲಾಗಿತ್ತು. ಎಷ್ಟು ವೇಗದಲ್ಲಿ ಹಾಗೂ ಎಷ್ಟು ಹೊತ್ತಿನವರೆಗೂ ಕಾರ್ಮಿಕರು ಸೇವೆ ಸಲ್ಲಿಸಿದ್ದರು ಎಂಬುದು ಗೊತ್ತಾಗುತ್ತಿದೆ.

ನಾಸಿಕ್‌ನ ಈ ಪ್ರೆಸ್‌ನ ಕಾರ್ಮಿಕರನ್ನು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹಾಗೂ ಹಲವಾರು ಸಚಿವರು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅಲ್ಲದೇ ಈ ಕಾರ್ಮಿಕರೆಲ್ಲರಿಗೂ ಏಳನೇ ವೇತನ ಆಯೋಗದದಂತೆ ವೇತನ, ಭತ್ಯೆ ಹೆಚ್ಚಿಸಲಾಗಿತ್ತು. ಕಠಿಣ ಸಮಯದಲ್ಲಿ ಇಲ್ಲಿನ ಓಜಾರ್ ವಿಮಾನ ನಿಲ್ದಾಣದ ಮೂಲಕ ಕರೆನ್ಸಿ ನೋಟುಗಳನ್ನು ದೇಶದ ವಿವಿಧ ಭಾಗಗಳಿಗೆ ರವಾನಿಸಲಾಗಿತ್ತು. ಈಗ ಒಂದು ರೂಪಾಯಿ ನೋಟು ಮುದ್ರಣವನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲಾಗಿದೆ.

ಕಳೆದ ಮೂರು ತಿಂಗಳಿಂದ ನಾಸಿಕ್‌ ಮುದ್ರಣಾಲಯದಲ್ಲಿ 500 ನೋಟುಗಳಿಗಿಂತ ಹೊಸ 200, 50 ರೂಪಾಯಿ ನೋಟುಗಳ ಮುದ್ರಣ ಆರಂಭಗೊಂಡಿದೆ.

ಸದ್ಯ ನಾಸಿಕ್‌ನಲ್ಲಿ ನಾಲ್ಕು ಪ್ರಿಂಟಿಂಗ್ ಮೆಷಿನ್‌ಗಳಿದ್ದು ದಿನಕ್ಕೆ 15 ರಿಂದ 18 ಮಿಲಿಯನ್‌ ನೋಟುಗಳನ್ನು ಮುದ್ರಣ ಮಾಡಲಾಗುತ್ತಿದೆ.

ಮೂಲ ವರದಿ

Nashik Press working 24x7 from November 2016

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ