ಆ್ಯಪ್ನಗರ

ಮಹಿಳೆಯರಿಗೆ ಅಗೌರವ ಆರೋಪ: ರಾಹುಲ್‌ ಗಾಂಧಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್

ರಫೇಲ್ ಡೀಲ್ ವಿಚಾರದಲ್ಲಿ ಸಾವಿರಾರು ಕೋಟಿ ರೂ. ಹಗರಣವಾಗಿದೆ. ಪ್ರಧಾನಿ ಮೋದಿ ಅನಿಲ್ ಅಂಬಾನಿ ಹಾಗೂ ರಿಲಯನ್ಸ್‌ಗೆ ಲಾಭ ಮಾಡಿಕೊಡುತ್ತಿದ್ದಾರೆಂದು ಆರೋಪಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ. ಆದರೆ, ರಾಹುಲ್ ಮೋದಿಯನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅಗೌರವ ತೋರಿದ್ದಾರೆಂದು ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿದೆ.

Agencies 10 Jan 2019, 1:02 pm

ಹೈಲೈಟ್ಸ್‌:

  • ಮಹಿಳೆಯರಿಗೆ ಅಗೌರವ ಆರೋಪ: ರಾಹುಲ್‌ ಗಾಂಧಿಗೆ ನೋಟಿಸ್
  • ರಾಷ್ಟ್ರೀಯ ಮಹಿಳಾ ಆಯೋಗದಿಂದ ಗುರುವಾರ ನೋಟಿಸ್ ಸಲ್ಲಿಕೆ
  • ಮೋದಿಯನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅಗೌರವ ತೋರಿರುವ ಆರೋಪ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rahul Gandhi
ಹೊಸದಿಲ್ಲಿ: ರಫೇಲ್‌ ಡೀಲ್‌ ವಿಚಾರದಲ್ಲಿ ಪದೇ ಪದೇ ಪ್ರಧಾನಿ ಮೋದಿ ವಿರುದ್ಧ ಆಕ್ರಮಣ ಮಾಡುತ್ತಿರುವ ರಾಹುಲ್‌ ಗಾಂಧಿಗೆ ಹಿನ್ನೆಡೆಯಾಗಿದೆ. ರಫೇಲ್‌ ಡೀಲ್ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅಗೌರವ ತೋರಿದ್ದಾರೆ ಹಾಗೂ ಸ್ತ್ರೀ ದ್ವೇಷಿ ಪದ ಬಳಸಿದ್ದಾರೆಂದು ರಾಷ್ಟ್ರೀಯ ಮಹಿಳಾ ಆಯೋಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಗೆ ನೋಟಿಸ್ ನೀಡಿದ್ದಾರೆ.

ರಫೇಲ್‌ ಡೀಲ್ ವಿಚಾರದಲ್ಲಿ ಪ್ರಧಾನಿ ಮೋದಿ ಚರ್ಚೆಯಿಂದ ಓಡಿ ಹೋಗಿದ್ದಾರೆ. ಅಲ್ಲದೆ, ಅವರನ್ನು ರಕ್ಷಿಸಲು ಒಬ್ಬರು ಮಹಿಳೆ ( ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌) ಗೆ ಮೋದಿ ಕೇಳಿಕೊಂಡಿದ್ದಾರೆಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ, ಗಂಡಸಾಗಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಸಹ ಟ್ವೀಟ್‌ ಮಾಡಿದ್ದರು.


ಹೀಗಾಗಿ, ರಾಹುಲ್‌ ಗಾಂಧಿ ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಗಳು ಅತ್ಯಂತ ಸ್ತ್ರೀ ದ್ವೇಷಿ, ಹೊಲಸು ಭಾಷೆ, ಅನೈತಿಕ ಹಾಗೂ ಮಹಿಳೆಯರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತದೆ. ಉತ್ತಮ ಜವಾಬ್ದಾರಿಯುಳ್ಳಸ್ಥಾನಗಳಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆಗಳನ್ನು ನೀಡುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ ಎಂದು ಆರೋಪಿಸಿ ರಾಹುಲ್ ಗಾಂಧಿಗೆ ಜನವರಿ 10 ರಂದು ನೋಟಿಸ್ ನೀಡಲಾಗಿದೆ. ಮಾಧ್ಯಮಗಳಲ್ಲಿ ಬಂದ ಹೇಳಿಕೆ ಹಾಗೂ ಅವರ ಟ್ವೀಟ್‌ಗಳ ಅನುಸಾರ ಸು ಮೋಟೋ ಪ್ರಕರಣವನ್ನಾಗಿ ತೆಗೆದುಕೊಂಡು ನೋಟಿಸ್ ನೀಡಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಸುದ್ದಿ ಮಾಧ್ಯಮ ಎಎನ್‌ಐಗೆ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ನಿನ್ನೆ ( ಬುಧವಾರ ) ಮಾಡಿರುವ ಟ್ವೀಟ್‌ಗಳಲ್ಲಿ ಬಳಸಿರುವ ಭಾಷೆ ಸರಿಯಲ್ಲ. ಅದು ಸ್ತ್ರೀ ದ್ವೇಷಿ ಹಾಗೂ ಸೆಕ್ಸಿಸ್ಟ್‌ ಆಗಿದೆ. ಹೀಗಾಗಿ, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ದೂರು ನೀಡಿದ್ದಾರೆ.


ಅಲ್ಲದೆ, ರಾಹುಲ್ ಗಾಂಧಿಯ ಹೇಳಿಕೆಗಳು ಹಾಗೂ ಟ್ವೀಟ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಹಲವರು ಟೀಕೆ ಮಾಡುತ್ತಿದ್ದು, ಮೋದಿಯನ್ನು ಟೀಕಿಸುವ ವಿಚಾರದಲ್ಲಿ ರಾಹುಲ್ ಗಾಂಧಿ ಟ್ರೋಲ್‌ಗೊಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ