ಆ್ಯಪ್ನಗರ

ಉಗ್ರರ ದಾಳಿಗೆ ಇಡೀ ಪಾಕಿಸ್ತಾನವನ್ನೇ ದ್ವೇಷಿಸುವುದೇಕೆ?: ಕಾಂಗ್ರೆಸ್ ಸಚಿವ ಸಿಧು ಪ್ರಶ್ನೆ

ಈಗ ಪಾಕ್ ಭಯೋತ್ಪಾದಕರ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆರಳಣಿಕೆಯಷ್ಟು ಜನ ಮಾಡುವ ತಪ್ಪಿಗೆ ಒಂದು ದೇಶ ಅಥವಾ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ದೂರುವುದೇಕೆ ಎಂದು ಪರೋಕ್ಷವಾಗಿ ಪಾಕ್ ಪರ ಬ್ಯಾಟ್ ಬೀಸಿದ್ದಾರೆ.

TIMESOFINDIA.COM 15 Feb 2019, 4:15 pm
ಚಂಢಿಗಡ್: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್‌ನ ಕಾಂಗ್ರೆಸ್ ಸಚಿವ ನವಜೋತ್ ಸಿಂಗ್ ಸಿಧು, ಕೆಲವು ಭಯೋತ್ಪಾದಕ ಸಂಘಟನೆಗಳು ಎಸಗುವ ಕೃತ್ಯಕ್ಕೆ ಇಡೀ ಪಾಕಿಸ್ತಾನವನ್ನೇ ದ್ವೇಷಿಸುವುದೆ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನವಜೋತ್ ಸಂಗ್ ಸಿಧು, ಪಾಕ್ ಸೇನಾ ದಂಡ ನಾಯರ ಖಮರ್ ಜಾವೇದ್ ಬಾಜ್ವಾ ಅವರ ಕೈಕುಲುಕಿ ಮಾತನಾಡಿಸಿ ವಿವಾದಕ್ಕೆ ಕಾರಣರಾಗಿದ್ದರು.

ದೇಶವಿಡೀ ಆಕ್ರೋಶದಿಂದ ಕುದಿಯುತ್ತಿದ್ದರೆ ಈ ಸಿಧುಗೆ ಪಾಕ್ ಜತೆ ಮಾತುಕತೆ ಬೇಕಂತೆ...!

ಈಗ ಪಾಕ್ ಭಯೋತ್ಪಾದಕರ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆರಳಣಿಕೆಯಷ್ಟು ಜನ ಮಾಡುವ ತಪ್ಪಿಗೆ ಒಂದು ದೇಶ ಅಥವಾ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ದೂರುವುದೇಕೆ ಎಂದು ಪರೋಕ್ಷವಾಗಿ ಪಾಕ್ ಪರ ಬ್ಯಾಟ್ ಬೀಸಿದ್ದಾರೆ.

ಉಗ್ರರ ಭೀಭತ್ಸ ಕೃತ್ಯವನ್ನು ಭಾರತೀಯರು ತೀವ್ರವಾಗಿ ಖಂಡಿಸುತ್ತಿದ್ದು, ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಸಿಧು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಉಗ್ರರ ದಾಳಿಗೆ 44 ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಜೈಶ್ ಮೊಹಮ್ಮದ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಉಗ್ರದಾಳಿ ಇದಾಗಿದೆ.

ಕಳೆದ ವರ್ಷವಷ್ಟೇ ಕರ್ತಾರ್‌ಪುರ ಕಾರಿಡಾರ್ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಪಾಕಿಸ್ತಾನ ಆಹ್ವಾನ ನೀಡಿತ್ತು. ಆದರೆ, ಗಡಿಯಲ್ಲಿ ಪಾಕ್ ಉಗ್ರ ಚುಟುವಟಿಕೆ ಹೆಚ್ಚಿದ್ದರಿಂದ ಅವರು ಪಾಕ್ ಆಹ್ವಾನ ನಿರಾಕರಿಸಿದ್ದರು. ಅಷ್ಟೆ ಅಲ್ಲದೆ, ನವಜೋತ್ ಸಿಂಗ್ ಸಿಧು ಅವರಿಗು ಸಹ ಹೋಗದಂತೆ ಸೂಚಿಸಿದ್ದರು. ಆದರೆ, ಸಿಧು ಮಾತ್ರ ಪಾಕಿಸ್ತಾನಕ್ಕೆ ಭೇಟಿ, ಖಲಿಸ್ತಾನ್ ಉಗ್ರ ಗೋಪಾಲ್ ಸಿಂಗ್ ಚಾವ್ಲಾ ಜತೆ ಫೋಟೋ ತೆಗೆಸಿಕೊಂಡು ವಿವಾದ ಸೃಷ್ಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ