ಆ್ಯಪ್ನಗರ

ನವಜೋತ್‌ ಸಿಂಗ್‌ ಸಿಧುವನ್ನು ಬಂಧಿಸಿ, ವಿಚಾರಣೆ ನಡೆಸಿ: ಸುಬ್ರಮಣಿಯನ್‌ ಸ್ವಾಮಿ

ನವಜೋತ್‌ ಸಿಂಗ್‌ ಸಿಧು ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ವಾಗ್ದಾಳಿ ನಡೆಸಿದ್ದು, ಸಿಧು ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ

Times Now 30 Nov 2018, 1:08 pm
[This story originally published in Times of India on nov 30, 2018]
Vijaya Karnataka Web swamy


ಹೊಸದಿ
ಲ್ಲಿ: ಪಂಜಾಬ್‌ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ವಿರುದ್ಧ ಬಿಜೆಪಿ ಮುಖಂಡ, ಸಂಸದ ಸುಬ್ರಮಣಿಯನ್‌ ಸ್ವಾಮಿ ಹರಿಹಾಯ್ದಿದ್ದಾರೆ. ಸಿಧು ಅವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಖಾಲಿಸ್ತಾನಿ ಮುಖಂಡ ಗೋಪಾಲ್‌ ಸಿಂಗ್‌ ಚಾವ್ಲಾ ಅವರನ್ನು ಸಿಧು ಭೇಟಿ ಮಾಡದೇ ಇದ್ದಲ್ಲಿ, ಅವರ ವಿರುದ್ಧ ಧ್ವನಿ ಎತ್ತಬೇಕಿತ್ತು. ಸಿಧು ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಖಲಿಸ್ತಾನಿ ಮುಖಂಡ ಚಾವ್ಲಾ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಖಮರ್ ಜಾವೇದ್‌ ಬಜ್ವಾ ಅವರೊಂದಿಗೆ ಸಿಧು ಇರುವ ಫೋಟೋಗಳು ಎಲ್ಲೆಡೆ ಪಸರಿಸಿತ್ತು. ಪಾಕಿಸ್ತಾನದಲ್ಲಿ ನಡೆದ ಕರ್ತಾಪುರ ಕಾರಿಡಾರ್‌ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಪೊಟೋ ಸಿಕ್ಕಿದೆ ಎನ್ನಲಾಗಿದೆ.


ಚಾವ್ಲಾ ಈ ಹಿಂದೆ ಎಲ್‌ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ ಅವರೊಂದಿಗೆ ಇದ್ದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದರು. ಗುರುನಾನಕ್‌ ಜಯಂತಿಯಂದು ಲಾಹೋರ್‌ನಲ್ಲಿರುವ ಗುರುದ್ವಾರಕ್ಕೆ ಅಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಒಳ ಹೋಗಲು ಅನುವು ಮಾಡಿಕೊಟ್ಟಿರಲಿಲ್ಲ. ಪಾಕಿಸ್ತಾನ ಸಿಖ್‌ ಗುರುದ್ವಾರ ಪ್ರಬಂಧಕ್‌ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಚಾವ್ಲಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ