ಆ್ಯಪ್ನಗರ

ಅಜಿತ್ ಮನವೊಲಿಕೆಗೆ ಎನ್‌ಸಿಪಿ ನಾಯಕರ ಬೆಂಬಿಡದ ಪ್ರಯತ್ನ, ಯಾರ ಮಾತಿಗೂ ಜಗ್ಗುತ್ತಿಲ್ಲ ಬಗ್ಗುತ್ತಿಲ್ಲ ಡಿಸಿಎಂ!

ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ದಿನದಿಂದ ಶಾಕ್ ನಲ್ಲಿರುವ ಎನ್‌ಸಿಪಿ ಇನ್ನೂ ಅದರಿಂದ ಹೊರಬಂದಿಲ್ಲ. ನಿರಂತರವಾಗಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದರೂ ಅಜಿತ್ ಮಾತ್ರ ಕಿವಿ ಕೊಡುತ್ತಲೇ ಇಲ್ಲ.

Vijaya Karnataka Web 26 Nov 2019, 12:56 pm
ಮುಂಬಯಿ: ಅಜಿತ್ ಪವಾರ್ ಅವರು ಎನ್ ಸಿಪಿ ಪಕ್ಷದ ವಿರುದ್ಧ ಧಂಗೆ ಎದ್ದು, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳ ಬಳಿಕ ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ ಎಂದು ಎನ್‌ಸಿಪಿ ನಾಯಕರಾದ ಜಯಂತ್ ಪಾಟೀಲ್, ದಿಲೀಪ್ ವಾಲ್ಸೆ ಪಾಟೀಲ್, ಸುನಿಲ್ ತತ್ಕರೆ ಮತ್ತು ಚಾಗನ್‌ ಭುಜ್‌ಬಾಲ್‌ ಅವರು ಮನವೊಲಿಸುವ ಪಯತ್ನ ನಡೆಸಿದ್ದು, ಯಾರ ಮಾತಿಗೂ ಅಜಿತ್ ಪವಾರ್ ಮಾತ್ರ ಜಗ್ಗುತ್ತಿಲ್ಲ.
Vijaya Karnataka Web Ajit Pawar


ಪಕ್ಷದ ಹಿತದೃಷ್ಟಿಯಿಂದ ನಾವು ಅಜಿತ್ ಪವಾರ್ ಜೊತೆ ಸುದೀರ್ಘ ಚರ್ಚೆ ನಡೆಸಿದೆವು. ಅವರ ನಿರ್ಧಾರವನ್ನು ಮರುಪರಿಶೀಲನೆ ಮಾಡಿಕೊಳ್ಳಲು ವಿನಂತಿಸಿ, ಮನವೊಲಿಕೆಗೆ ಪ್ರಯತ್ನಿಸಿದೆವು ಆದರೆ ಅಜಿತ್ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಆದರೆ ನಮಗೆ ನಂಬಿಕೆ ಇದೆ ಎಂದು ಚಾಗನ್‌ ಭುಜ್‌ಬಾಲ್‌ ಹೇಳಿದ್ದಾರೆ.

ಅಜಿತ್ ಬಿಜೆಪಿ ಸೇರಿ ಸರಕಾರ ರಚನೆ ಮಾಡಿದಾಗಿನಿಂದ ಕಮ್ಮಿಯೆಂದರೂ ಒಂದು ಡಜನ್ ಗೂ ಹೆಚ್ಚು ಎನ್‌ಸಿಪಿ ನಾಯಕರು ತಮ್ಮ ನಡೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಏನೂ ಉತ್ತರ ಬಂದಿಲ್ಲ. ನಾವು ಶಿವಸೇನೆ ಮತ್ತು ಕಾಂಗ್ರೆಸ್ ಜೊತೆಗೆ ಸೇರಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ನಿರ್ಧಾರ ಮಾಡಿದ ಬೆನ್ನಲ್ಲೇ ಅವರು ಈ ನಿರ್ಧಾರ ಏಕೆ ತೆಗೆದುಕೊಂಡರೆಂಬುದು ತಿಳಿಯುತ್ತಿಲ್ಲ. ಉಪಮುಖ್ಯಮಂತ್ರಿ ಹುದ್ದೆಗಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡರೇ? ಎಂಬುದು ಕೂಡ ಅರ್ಥವಾಗುತ್ತಿಲ್ಲ ಎಂದು ಎನ್ ಸಿಪಿಯ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್: ಫಡ್ನವೀಸ್ ಸರ್ಕಾರಕ್ಕೆ 24 ಗಂಟೆ ಜೀವದಾನ

ನವೆಂಬರ್ 23 ರಂದು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನಾಗಿರುವ ನನಗೆ 54 ಶಾಸಕರ ಬೆಂಬಲ ಇದೆ ಮತ್ತು ದೇವೇಂದ್ರ ಫಡ್ನವೀಡ್ ಅವರಿಗೆ ಬೆಂಬಲ ಸೂಚಿಸುತ್ತೇನೆಂದು ಎಂದು ಅಜಿತ್ ಪವಾರ್ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಾದ ಬಳಿಕ ಮಹಾರಾಷ್ಟ್ರದಲ್ಲಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಯ್ತು. ಜೊತೆಗೆ ಫಡ್ನವೀಸ್ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದರು.

ಎನ್‌ಸಿಪಿಯ ಮುಖ್ಯ ಸಚೇತಕ ಯಾರು? ಬಿಜೆಪಿ ಹಾಗೂ ಎನ್‌ಸಿಪಿ ನಡುವೆ ಕಿತ್ತಾಟ!

ಈ ಎಲ್ಲಾ ಬೆಳವಣಿಗೆ ನಂತರ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಅಜಿತ್ ಅವರ ಈ ನಿರ್ಧಾರ ವೈಯಕ್ತಿಕ ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದರು. ಬಳಿಕ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಅಜಿತ್ ಪವಾರ್ ಅವರನ್ನು ಉಚ್ಛಾಟಿಸಿ ಜಯಂತ್ ಪಾಟೀಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಲಾಯ್ತು.

ಸತ್ಯಕ್ಕೆ ಜಯವಾಗಿದೆ, ಬಿಜೆಪಿಯ ಆಟ ಕೊನೆಯಾಗಲಿದೆ: ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌

ಬಿಜೆಪಿಯೊಂದಿಗೆ ಕೈಜೋಡಿಸಿ ಎನ್‌ಸಿಪಿ ಶಾಸಕಾಂಗ ಪಕ್ಷದ ಸ್ಥಾನದಿಂದ ಉಚ್ಛಾಟಿಸಲ್ಪಟ್ಟ ಅಜಿತ್ ಅವರಿಗೆ ಶಾಸಕರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಹಕ್ಕಿಲ್ಲ. ಅವರ ಸದನದ ಸದಸ್ಯತ್ವ ಶೂನ್ಯ ಮತ್ತು ಅನುರ್ಜಿತವಾಗುವುದಿಲ್ಲ. ಶಾಸಕರ ಜವಾಬ್ದಾರಿ ನನ್ನದು. ಕಾನೂನುಬಾಹಿರವಾಗಿ ಅಧಿಕಾರವನ್ನು ಪಡೆದವರನ್ನು ಈಗ ತೆಗೆದುಹಾಕಬೇಕಾಗುತ್ತದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. ಆದರೆ ಯಾರೆಲ್ಲ ಉಚ್ಛಾಟನೆ ಲಿಸ್ಟ್ ನಲ್ಲಿ ಇದ್ದಾರೆ ಎಂಬ ಬಗ್ಗೆ ತಿಳಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ