ಆ್ಯಪ್ನಗರ

ಭೋಜನ ಕೂಟಕ್ಕೆ ಉದ್ಧವ್‌ ಠಾಕ್ರೆಯ ಕರೆದ ಮೋದಿ

ದಿಲ್ಲಿಯಲ್ಲಿ ನಡೆಯುವ ಭೋಜನ ಕೂಟಕ್ಕೆ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆಯವರನ್ನು ಮೊದಿ ಆಹ್ವಾನಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 26 Mar 2017, 12:56 pm
ಹೊಸದಿಲ್ಲಿ: ಬಿಜೆಪಿ- ಶಿವಸೇನೆ ನಡುವೆ ಉಂಟಾಗಿದ್ದ ವೈಮನಸ್ಸಿಗೆ ತೇಪೆ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಾಗಿದ್ದು, ದಿಲ್ಲಿಯಲ್ಲಿ ನಡೆಯುವ ಭೋಜನ ಕೂಟಕ್ಕೆ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆಯವರನ್ನು ಆಹ್ವಾನಿಸಿದ್ದಾರೆ.
Vijaya Karnataka Web nda dinner diplomacy pm invites uddhav to delhi
ಭೋಜನ ಕೂಟಕ್ಕೆ ಉದ್ಧವ್‌ ಠಾಕ್ರೆಯ ಕರೆದ ಮೋದಿ


ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಪ್ರಧಾನಿಯವರಿಗೆ ಶುಭಾಶಯ ಹೇಳಿದ್ದ ಉದ್ಧವ್‌ ಠಾಕ್ರೆಯನ್ನು ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಭೋಜನ ಕೂಟಕ್ಕೆ ಮೋದಿ ಆಹ್ವಾನಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ತಿಳಿಸಿದ್ದಾರೆ.

'ಠಾಕ್ರೆಯರೊಂದಿಗಿನ ಸಂಭಾಷಣೆ ವೇಳೆ ಮೋದಿಯವರು, ಮಹಾರಾಷ್ಟ್ರದಲ್ಲಿ ಉಂಟಾಗಿರುವ ಶಿವಸೇನೆ- ಬಿಜೆಪಿ ಮೈತ್ರಿಯ ಕಗ್ಗಂಟಿನ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಭೋಜನ ಕೂಟಕ್ಕೂ ಆಗಮಿಸುವಂತೆ ಮನವಿ ಮಾಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿವಸೇನೆಯ ಸಂಸದರಾದ ಸಂಜಯ್ ರಾವುತ್, ಕೇಂದ್ರ ಸಚಿವ ಅನಂತ್ ಗೀತೆ ಅಥವಾ ಅನಿಲ್ ದೇಸಾಯಿ ಮಾತ್ರ ಪಾಲ್ಗೊಳ್ಳ ಬಹುದು. ಅಲ್ಲದೇ ಉದ್ಧವ್‌ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಾಗಿ ಪಾಲ್ಗೊಳ್ಳುವುದಿಲ್ಲ. ಆದರೆ ಈ ಆಮಂತ್ರಣ ನೇರವಾಗಿ ಪ್ರಧಾನಿಯಿಂದಲೇ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಹೆಚ್ಚು' ಎಂದು ಬಿಜೆಪಿ ಹಿರಿಯ ಮುಖಂಡ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ