ಆ್ಯಪ್ನಗರ

ಎನ್‌ಡಿಟಿವಿ ನಿಷೇಧ ತಡೆಹಿಡಿದ ಸರಕಾರ

ಎನ್‌ಡಿಟಿವಿ ವಾರ್ತಾವಾಹಿನಿಯ ಒಂದು ದಿನದ ಪ್ರಸಾರಕ್ಕೆ ವಿಧಿಸಿದ ನಿರ್ಬಂಧವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸದ್ಯಕ್ಕೆ ತಡೆಹಿಡಿದಿದೆ.

Vijaya Karnataka Web 8 Nov 2016, 11:53 am

ಹೊಸದಿಲ್ಲಿ: ಪಠಾಣ್‌ಕೋಟ್‌ ಮೇಲಿನ ಉಗ್ರಗಾಮಿಗಳ ದಾಳಿಗೆ ಸಂಬಂಧಿಸಿ ವಿಸ್ತೃತ ವರದಿ ಪ್ರಕಟಿಸಿದ ಕಾರಣಕ್ಕೆ ನ.9ರಂದು ಎನ್‌ಡಿಟಿವಿ ವಾರ್ತಾವಾಹಿನಿಯ ಒಂದು ದಿನದ ಪ್ರಸಾರಕ್ಕೆ ವಿಧಿಸಿದ ನಿರ್ಬಂಧವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸದ್ಯಕ್ಕೆ ತಡೆಹಿಡಿದಿದೆ.

Vijaya Karnataka Web ndtv ban
ಎನ್‌ಡಿಟಿವಿ ನಿಷೇಧ ತಡೆಹಿಡಿದ ಸರಕಾರ


ಈ ನಡುವೆ ಒಂದು ದಿನ ನಿಷೇಧ ವಿಧಿಸುವ ಸರಕಾರದ ಕ್ರಮವನ್ನು ಪ್ರಶ್ನಿಸಿ ವಾರ್ತಾವಾಹಿನಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಎನ್‌ಡಿಟಿವಿಯ ಹಿಂದಿ ವಾರ್ತಾ ವಾಹಿನಿಯ ಪ್ರಸಾರವನ್ನು ನ.9ರ ಮಧ್ಯರಾತ್ರಿಯಿಂದ 10ರ ಮಧ್ಯರಾತ್ರಿ ವರೆಗೆ ಸ್ಥಗಿತಗೊಳಿಸಬೇಕು ಎಂದು ಸರಕಾರ ಆದೇಶ ನೀಡಿತ್ತು.

ಈ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಮಂಗಳವಾರ ಈ ಅರ್ಜಿಯನ್ನು ವಿಚಾರಣೆಯ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ