ಆ್ಯಪ್ನಗರ

ವೈದ್ಯಕೀಯ ಪಿಜಿಗೆ ಇನ್ನು ನೀಟ್‌ ಬೇಕಿಲ್ಲ

ಇದರ ಬದಲಾಗಿ, ಎಂಬಿಬಿಎಸ್‌ ಅಂತಿಮ ಪರೀಕ್ಷೆಯ ಅಂಕ ಆಧರಿಸಿ ಪ್ರವೇಶ ನೀಡುವ ವಿಧಾನ ಅನುಸರಿಸಲು ಯೋಚಿಸಲಾಗಿದೆ.

PTI 15 Jul 2019, 5:00 am
ಹೊಸದಿಲ್ಲಿ: ಎಂ.ಡಿ, ಎಂ.ಎಸ್‌ ಸೇರಿದಂತೆ ವೈದ್ಯಕೀಯ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಕಲಿಯುವವರು ನೀಟ್‌ ಪರೀಕ್ಷೆ ಎದುರಿಸುವ ಹಾಲಿ ನಿಯಮವನ್ನು ರದ್ದು ಮಾಡಲು ಕೇಂದ್ರ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಸದ್ಯವೇ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರ ಬದಲಾಗಿ, ಎಂಬಿಬಿಎಸ್‌ ಅಂತಿಮ ಪರೀಕ್ಷೆಯ ಅಂಕ ಆಧರಿಸಿ ಪ್ರವೇಶ ನೀಡುವ ವಿಧಾನ ಅನುಸರಿಸಲು ಯೋಚಿಸಲಾಗಿದೆ.
Vijaya Karnataka Web NEET-makes-matters-worse-new

ಸದ್ಯವೇ ಸಂಪುಟದ ಅವಗಾಹನೆಗೆ ಹೋಗಲಿರುವ ಪರಿಷ್ಕೃತ ಕರಡು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವಿಧೇಯಕದಲ್ಲಿ ಈ ತಿದ್ದುಪಡಿ ಅಂಶವನ್ನು ಸೇರಿಸಲಾಗಿದೆ. ಪ್ರಧಾನ ಮಂತ್ರಿ ಕಚೇರಿಯ ಸೂಚನೆಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
...........
ಮುಂದೇನು?


* ರಾಷ್ಟ್ರಾದ್ಯಂತ ನಡೆಯುವ ರಾಷ್ಟ್ರೀಯ ನಿರ್ಗಮನ ಪರೀಕ್ಷೆ(ನೆಕ್ಸ್ಟ್‌) ಫಲಿತಾಂಶ ಆಧರಿಸಿ ಸ್ನಾತಕೋತ್ತರ ಪದವಿಗೆ ಪ್ರವೇಶ.

* ಹೀಗಾಗಿ ಎಂಬಿಬಿಎಸ್‌ ಅಂತಿಮ ಪರೀಕ್ಷೆಗೆ ಹಾಜರಾದವರು ಪಿ.ಜಿ. ಪ್ರವೇಶಕ್ಕೆ ಹೊಸದಾಗಿ ಪರೀಕ್ಷೆ ಬರೆಯಬೇಕಾಗಿಲ್ಲ.

* ಎಂಬಿಬಿಎಸ್‌ ಬಳಿಕ ಪ್ರಾಕ್ಟೀಸ್‌ಗೆ ಅನುಮತಿ ಪಡೆಯಲು ಪ್ರತ್ಯೇಕ ಪರೀಕ್ಷೆ ಎದುರಿಸಬೇಕಾಗಿಲ್ಲ.
.........
ಎಐಐಎಂಎಸ್‌ಗೆ ಪ್ರತ್ಯೇಕ

ಆದರೆ, ದೇಶದ ಎಐಐಎಂಎಸ್‌ಗಳಿಗೆ ಪ್ರವೇಶ ಪಡೆಯಲು ಪ್ರತ್ಯೇಕ ಪರೀಕ್ಷೆ ಬರೆಯುವುದು ಕಡ್ಡಾಯ. ಮಾತ್ರವಲ್ಲ, ಡಿಎಂ/ಎಂಸಿಎಚ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೀಟ್‌ ಸೂಪರ್‌ ಸ್ಪೆಷಾಲಿಟಿ ಎಂಬ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಬರೆಯುವುದು ಅನಿವಾರ್ಯ.
.........

480

ದೇಶದಲ್ಲಿರುವ ಮೆಡಿಕಲ್‌ ಕಾಲೇಜುಗಳು

80,000


ಪ್ರತಿ ವರ್ಷ ಎಂಬಿಬಿಎಸ್‌ಗೆ ಸೇರ್ಪಡೆ

50,000

ದೇಶದಲ್ಲಿರುವ ಒಟ್ಟು ಪಿ.ಜಿ. ಸೀಟು

1,50,000

ಪಿ.ಜಿ. ಪ್ರವೇಶ ಪರೀಕ್ಷೆ ಬರೆಯುವವರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ