ಆ್ಯಪ್ನಗರ

ಬಂದಿದೆ ಯೋಧರಿಗಾಗಿ ದೇಶೀಯ ಆ್ಯಪ್‌

​​ಸದ್ಯ ಸ್ಮಾರ್ಟ್‌ಫೋನ್‌ ಬಳಕೆದಾರರ ನಡುವೆ ಅತಿಹೆಚ್ಚು ಉಪಯೋಗಿಸಲ್ಪಡುತ್ತಿರುವ ವಾಟ್ಸಾಪ್‌‌, ಟೆಲಿಗ್ರಾಂ ಮಾದರಿಯಲ್ಲಿಯೇ ಸಾಯ್‌ ಆ್ಯಪ್‌ ಕೂಡ ಅಭಿವೃದ್ಧಿಯಾಗಿದೆ.

Vijaya Karnataka Web 30 Oct 2020, 11:53 pm
ಹೊಸದಿಲ್ಲಿ: ಯೋಧರ ಬಳಕೆಗಾಗಿ ಆಧುನಿಕ ಸುರಕ್ಷತಾ ತಂತ್ರಜ್ಞಾನವಿರುವ ಮತ್ತು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಎಸ್‌ಎಐ' (ಸಾಯ್‌) ಹೆಸರಿನ ನೂತನ ಮೆಸೇಜಿಂಗ್‌ ಆ್ಯಪ್‌ ಅನ್ನು ರೂಪಿಸಿದೆ.
Vijaya Karnataka Web ಆ್ಯಪ್‌
ಆ್ಯಪ್‌


ಸದ್ಯ ಸ್ಮಾರ್ಟ್‌ಫೋನ್‌ ಬಳಕೆದಾರರ ನಡುವೆ ಅತಿಹೆಚ್ಚು ಉಪಯೋಗಿಸಲ್ಪಡುತ್ತಿರುವ ವಾಟ್ಸಾಪ್‌‌, ಟೆಲಿಗ್ರಾಂ ಮಾದರಿಯಲ್ಲಿಯೇ ಸಾಯ್‌ ಆ್ಯಪ್‌ ಕೂಡ ಅಭಿವೃದ್ಧಿಯಾಗಿದೆ. ಇಬ್ಬರು ಬಳಕೆದಾರರ ನಡುವಿನ ಸಂದೇಶ ಹಂಚಿಕೆಯನ್ನು ಪೂರ್ಣವಾಗಿ ಗೂಢ ಲಿಪೀಕರಣ ಮೂಲಕ ರಕ್ಷಿಸುವ ಭದ್ರತೆ ಇದರಲ್ಲಿದೆ. ವಾಯ್‌್ಸ, ಟೆಕ್ಸ್ಟ್‌ ಮತ್ತು ವಿಡಿಯೊ ಕಾಲ್‌ಗಳನ್ನು ಕೂಡ ಸುರಕ್ಷಿತವಾಗಿ ಮಾಡಲು ಅವಕಾಸ ಕಲ್ಪಿಸಲಾಗಿದೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಆತ್ಮನಿರ್ಭರಕ್ಕೆ ಬಲ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಸಂಕಲ್ಪಕ್ಕೆ ಪೂರಕವಾಗಿ 'ಮೇಡ್‌ ಇನ್‌ ಇಂಡಿಯಾ' ಆ್ಯಪ್‌ ಆಗಿರುವ ಸಾಯ್‌ನ ಭದ್ರತಾ ಅಂಶಗಳ ಪರೀಕ್ಷೆಯನ್ನು ಸೇನೆಯ ಸೈಬರ್‌ ತಂಡವೇ ಖುದ್ದು ನಿಗಾ ವಹಿಸಿ ನಡೆಸಿದೆ. ಕರ್ನಲ್‌ ಸಾಯಿ ಶಂಕರ್‌ ಅವರ ನೇತೃತ್ವದಲ್ಲಿ ತಾಂತ್ರಿಕ ಸೇನಾ ಸಿಬ್ಬಂದಿ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ ಪರಿಶೀಲನೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೂ ನಡೆಸಿ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯಕ್ಕೆ ಕೇವಲ ಸೇನಾ ನೆಲೆಗಳಲ್ಲಿ ಮಾತ್ರ ಆಂತರಿಕ ಸಂವಹನಕ್ಕಾಗಿ ಸಾಯ್‌ ಬಳಕೆ ಮಾಡಲಾಗುವುದು. ನಂತರದ ದಿನಗಳಲ್ಲಿ ಯೋಧರು ತಮ್ಮ ಕುಟುಂಬಸ್ಥರೊಂದಿಗೆ ಆಪ್ತ ಕುಶಲೋಪರಿಗೆ ಬಳಸುವಂತೆ ಆ್ಯಪ್‌ಅನ್ನು ಉನ್ನತೀಕರಿಸಿ ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈ 4ರಂದು ಆತ್ಮನಿರ್ಭರ ಭಾರತ್‌ ಆ್ಯಪ್‌ ಆವಿಷ್ಕಾರ ಚಾಲೆಂಜ್‌ಅನ್ನು ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರಧಾನಿ ಮೋದಿ ಅವರು ಆರಂಭಿಸಿದ್ದರು. ಇದರ ಅಡಿಯಲ್ಲಿಈಗಾಗಲೇ ಹಲವಾರು ಮೇಡ್‌ ಇನ್‌ ಇಂಡಿಯಾ ಆ್ಯಪ್‌ಗಳು ಅಭಿವೃದ್ಧಿಗೊಳ್ಳುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ