ಆ್ಯಪ್ನಗರ

ದಿಲ್ಲಿ ವಾಯು ಮಾಲಿನ್ಯ: ಮೂರು ರಾಜ್ಯಗಳಿಂದ ವರದಿ ಕೇಳಿದ ಎನ್‌ಜಿಟಿ

ಸಮಸ್ಯೆ ನಿವಾರಣೆ ದಿಸೆಯಲ್ಲಿ ಕೈಗೊಂಡಿರುವ ಕಾರ್ಯಯೋಜನೆ ಜಾರಿಯ ಪ್ರಗತಿ ಕುರಿತು ವರದಿ ನೀಡುವಂತೆ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್‌, ಮೂರು ರಾಜ್ಯಗಳಿಗೆ ಸೂಚನೆ ನೀಡಿದರು.

PTI 10 Jul 2019, 5:00 am
ಹೊಸದಿಲ್ಲಿ: ದಿಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿರುವ ನೆರೆಯ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ಜಮೀನುಗಳಲ್ಲಿನ ಕೃಷಿ ತ್ಯಾಜ್ಯ ಸುಡುವ ಸಮಸ್ಯೆ ಇತ್ಯರ್ಥಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ. ಸಮಸ್ಯೆ ನಿವಾರಣೆ ದಿಸೆಯಲ್ಲಿ ಕೈಗೊಂಡಿರುವ ಕಾರ್ಯಯೋಜನೆ ಜಾರಿಯ ಪ್ರಗತಿ ಕುರಿತು ವರದಿ ನೀಡುವಂತೆ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್‌, ಮೂರು ರಾಜ್ಯಗಳಿಗೆ ಸೂಚನೆ ನೀಡಿದರು. ವಾಯು ಮಾಲಿನ್ಯ ನಿವಾರಣೆಗೆ ಇದುವರೆಗೆ ಕೈಗೊಂಡ ಕ್ರಮಗಳ ಜತೆಗೆ ಮುಂದಿನ ದಿನಗಳಲ್ಲಿ ಅನುಸರಿಸುವ ಮಾರ್ಗೋಪಾಯಗಳ ವಿವರ ನೀಡುವಂತೆ ನ್ಯಾಯಮೂರ್ತಿ ಗೋಯಲ್‌ ಆಗ್ರಹಿಸಿದರು.
Vijaya Karnataka Web ngt

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ