ಆ್ಯಪ್ನಗರ

ಇನ್ನೂ ಐದು ಉಗ್ರ ಜಾಡು ಜಾಲಾಡಿದ ಎನ್‌ಐಎ

ಐಸಿಸ್‌ ವಿಧ್ವಂಸಕ ಚಟುವಟಿಕೆಗಳಿಂದ ಪ್ರೇರಿತಗೊಂಡು 'ಹರ್ಕತ್‌ ಉಲ್‌ ಹರ್ಬ್‌ ಇ ಇಸ್ಲಾಮ್‌' ಹೆಸರಿನ ಉಗ್ರ ಸಂಘಟನೆ ಕಟ್ಟಿಕೊಂಡು ಸಕ್ರಿಯಗೊಂಡಿದ್ದ ಹತ್ತು ಪಾತಕಿಗಳ ಹೆಡೆಮುರಿ ಕಟ್ಟಿದ ವಾರದ ಬಳಿಕ ಎನ್‌ಐಎ ಶೋಧ ಕಾರ್ಯಚರಣೆಯನ್ನು ತ್ವರಿತಗೊಳಿಸಿದೆ. '

Vijaya Karnataka 2 Jan 2019, 5:00 am
ಲಖನೌ: ಉಗ್ರ ಚಟುವಟಿಕೆಗಳನ್ನು ಬುಡಸಮೇತ ಕಿತ್ತು ಹಾಕುವ ಪಣತೊಟ್ಟಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಮಂಗಳವಾರ ಉತ್ತರ ಪ್ರದೇಶದ ಅಮರೋಹದ ಐದು ಕಡೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
Vijaya Karnataka Web nia


ಐಸಿಸ್‌ ವಿಧ್ವಂಸಕ ಚಟುವಟಿಕೆಗಳಿಂದ ಪ್ರೇರಿತಗೊಂಡು 'ಹರ್ಕತ್‌ ಉಲ್‌ ಹರ್ಬ್‌ ಇ ಇಸ್ಲಾಮ್‌' ಹೆಸರಿನ ಉಗ್ರ ಸಂಘಟನೆ ಕಟ್ಟಿಕೊಂಡು ಸಕ್ರಿಯಗೊಂಡಿದ್ದ ಹತ್ತು ಪಾತಕಿಗಳ ಹೆಡೆಮುರಿ ಕಟ್ಟಿದ ವಾರದ ಬಳಿಕ ಎನ್‌ಐಎ ಶೋಧ ಕಾರ್ಯಚರಣೆಯನ್ನು ತ್ವರಿತಗೊಳಿಸಿದೆ. ''ಬಂಧಿತ ಹತ್ತು ಉಗ್ರರು ನೀಡಿದ ಮಾಹಿತಿ ಆಧರಿಸಿ ಈ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಎನ್‌ಐಎ ತಂಡಕ್ಕೆ ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಸಾಥ್‌ ನೀಡಿದರು. ದಾಖಲೆ ಪತ್ರಗಳನ್ನು ವಶಪಡಿಸಿಕೊಂಡದ್ದನ್ನು ಹೊರತುಪಡಿಸಿದರೆ ಯಾರನ್ನೂ ಬಂಧಿಸಿಲ್ಲ,'' ಎಂದು ಎನ್‌ಐಎ ಐಜಿ ಅಲೋಕ್‌ ಮಿತ್ತಲ್‌ ಖಚಿತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ 26ರಂದು ಉತ್ತರ ಪ್ರದೇಶ ಮತ್ತು ದಿಲ್ಲಿಯ 17 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದ ಅಧಿಕಾರಿಗಳು, 10 ಉಗ್ರರನ್ನು ಬಂಧಿಸಿ, ಇತರೆ 6 ಜನರನ್ನು ವಶಕ್ಕೆ ಪಡೆದಿದ್ದರು. ಬಾಂಬ್‌ ತಯಾರಿಕೆಗೆ ಬಳಸುವ 25 ಕೆ.ಜಿ ಕಚ್ಚಾ ವಸ್ತುಗಳು ಮತ್ತು 7.5 ಲಕ್ಷ ರೂ. ನಗದನ್ನು ಅಂದು ವಶಪಡಿಸಿಕೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ