ಆ್ಯಪ್ನಗರ

ಕೊಯಮತ್ತೂರಿನಲ್ಲಿ ಎನ್‌ಐಎ ದಾಳಿ; ತಮಿಳುನಾಡಿನಲ್ಲಿ ಹೈ ಅಲರ್ಟ್‌

ದಕ್ಷಿಣ ಭಾರತವನ್ನು ಉಗ್ರರು ತಮ್ಮ ಹಬ್‌ ಆಗಿ ಮಾಡಿಕೊಳ್ಳಲು ಎಲ್ಲ ರೀತಿಯ ಸಂಚು ರೂಪಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ತನಿಖಾ ದಳ ಉಗ್ರರ ತಂತ್ರ ವಿಫಲಗೊಳಿಸುತ್ತಿದೆ.

Vijaya Karnataka Web 29 Aug 2019, 10:31 pm
ಚೆನ್ನೈ: ತಮಿಳುನಾಡು, ಕೇರಳದಲ್ಲಿ ಐಸಿಸ್‌ ಪರ ಪ್ರಚಾರ ಮಾಡುತ್ತಿರುವವರ ಕುರಿತು ಮಾಹಿತಿ ಪಡೆದಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಏಕಕಾಲಕ್ಕೆ ವಿವಿಧ ಕಡೆ ದಾಳಿ ನಡೆಸಿ ಮಹತ್ವದ ಡಿಜಿಟಲ್‌ ಸಾಧನ, ಸಿಮ್‌ ಕಾರ್ಡ್‌, ನಗದು ವಶಪಡಿಸಿಕೊಂಡಿದೆ.
Vijaya Karnataka Web ಉಗ್ರ
ಉಗ್ರ


ಕೊಯಮತ್ತೂರಿನ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಯಿತು.

ಕೊಯಮತ್ತೂರು ಮೂಲದ ಆರೋಪಿಗಳು ಹಾಗೂ ಅವರ ಸಹವರ್ತಿಗಳು ನೀಡಿದ ಮಾಹಿತಿಯಆಧಾರದ ಮೇರೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು.

ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ತಮಿಳುನಾಡು, ಕೇರಳದದ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಲು ಎಲ್ಲ ರೀತಿಯ ಸಂಚು ಹೂಡಲಾಗಿತ್ತು.

ಇದರ ಜತೆಗೆ ಐಸಿಸ್‌ ಉಗ್ರ ಸಂಘಟನೆ ಪರವಾಗಿ ಪ್ರಚಾರ ನಡೆಸಿ, ಆ ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು.

ಕಳೆದ ಜೂನ್‌ನಲ್ಲಿ ನಡೆಸಿದ ದಾಳಿಯ ವೇಳೆಯಲ್ಲಿ ಸಿಕ್ಕ ಮಹತ್ವದ ಮಾಹಿತಿಗಳ ಜಾಡು ಹಿಡಿದ ಎನ್‌ಐಎ ಅಧಿಕಾರಿಗಳು ದೊಡ್ಡ ಜಾಲವನ್ನೇ ಭೇದಿಸಿದ್ದಾರೆ.

ದಕ್ಷಿಣ ಭಾರತವನ್ನು ಉಗ್ರರ ಮೂಲ ಸ್ಥಾನವನ್ನಾಗಿ ಮಾಡಿಕೊಳ್ಳಲು ಸಂಚು ರೂಪಿಸಲಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗಿರುವ ಬೆನ್ನಲ್ಲೇ ಹಲವಾರು ಸಂಚುಗಳು ಬಯಲಿಗೆ ಬಂದಿದೆ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ