ಆ್ಯಪ್ನಗರ

ನೋಯ್ಡಾ ದಾಳಿ: ಭಾರತಕ್ಕೆ ಸಮನ್ಸ್ ನೀಡಿದ ನೈಜೀರಿಯಾ

ನೈಜೀರಿಯಾ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾ ಸರಕಾರ ಹೊಸದಿಲ್ಲಿಯ ರಾಯಭಾರಿ ಕಚೇರಿಗೆ ಸಮನ್ಸ್ ಜಾರಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 30 Mar 2017, 5:21 pm
ಹೊಸದಿಲ್ಲಿ: ಗ್ರೇಟರ್ ನೋಯ್ಡಾದಲ್ಲಿ ನಡೆದ ನೈಜೀರಿಯಾ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾದ ವಿದೇಶ ವ್ಯವಹಾರಗಳ ಸಚಿವಾಲಯ ಹೊಸದಿಲ್ಲಿಯ ರಾಯಭಾರಿ ಕಚೇರಿಗೆ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.
Vijaya Karnataka Web nigeria summoned indian envoy yesterday over attacks on its students in noida says nigerian media
ನೋಯ್ಡಾ ದಾಳಿ: ಭಾರತಕ್ಕೆ ಸಮನ್ಸ್ ನೀಡಿದ ನೈಜೀರಿಯಾ


ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ನೈಜೀರಿಯಾ ಸರಕಾರ ಭಾರತಕ್ಕೆ ಸಮನ್ಸ್ ಜಾರಿ ಮಾಡಿರುವುದಾಗಿ ನೈಜೀರಿಯಾದ ಮಾಧ್ಯಮ ವರದಿ ಮಾಡಿದೆ.

ಕೆಲವು ನೈಜೀರಿಯನ್ ವಿದ್ಯಾರ್ಥಿಗಳು ಅಪ್ರಾಪ್ತರಿಗೆ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡುತ್ತಿದ್ದರು. ಇದರಿಂದ ಓರ್ವ ಅಪ್ರಾಪ್ತ ವಿದ್ಯಾರ್ಥಿ ಸಾವನ್ನಪ್ಪಿದ್ದ. ವಿದ್ಯಾರ್ಥಿಯ ಸಾವಿಗೆ ನೈಜೀರಿಯನ್‌ ವಿದ್ಯಾರ್ಥಿಗಳೇ ಕಾರಣವೆಂದು ಸ್ಥಳೀಯರು ಐವರು ನೈಜೀರಿಯನ್‌ ಪ್ರಜೆಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

ಭಾರತದಲ್ಲಿ ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ದಾಳಿಗಳು ನಡೆದಿವೆ ಎಂದು ನೈಜೀರಿಯಾದ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ